
ಕಾಸರಗೋಡು: ಜೀಪು ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಸ್ಕೂಟರ್ ಹಿಂಬದಿ ಸವಾರ ಮೃತಪಟ್ಟ ಘಟನೆ ಪೈವಳಿಕೆಯಲ್ಲಿ ನಡೆದಿದೆ.
ಮೃತರನ್ನು 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಇಫ್ರಾಝ್ ಎಂದು ಗುರುತಿಸಲಾಗಿದೆ.
ಜೀಪು ತಿರುವು ರಸ್ತೆಯಲ್ಲಿ ಸಡನ್ ಆಗಿ ಬ್ರೇಕ್ ಹಾಕಿರುವ ಹಿನ್ನೆಲೆ ಸ್ಕೂಟರ್ ನ ಹಿಂಬದಿ ಕುಳಿತಿದ್ದ ಇಫ್ರಾಝ್ ರಸ್ತೆಗೆಸೆಯಲ್ಪಟ್ಟಿದ್ದರು. ಅಪಘಾತದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಇಫ್ರಾಝ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಇಫ್ರಾಝ್ ಮೃತಪಟ್ಟಿದ್ದಾರೆ. ಈ ಸಂಬಂಧ ಮಂಜೇಶ್ವರ ಠಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
