Home ಸರಕಾರಿ ಯೋಜನೆಗಳು ಕೇಂದ್ರ ಸರಕಾರ ಕೇಂದ್ರದ ಉಚಿತ ಪಡಿತರ ವ್ಯವಸ್ಥೆ ನಿಲ್ಲುತ್ತೆ ಅನ್ನೊರಿಗೆ ಪ್ರಧಾನಿ ಮೋದಿ ನೀಡಿದ್ದ ಉತ್ತರ ನೋಡಿದ್ರೆ ನೀವು ಶಾಖ್ ಆಗ್ತೀರಿ

ಕೇಂದ್ರದ ಉಚಿತ ಪಡಿತರ ವ್ಯವಸ್ಥೆ ನಿಲ್ಲುತ್ತೆ ಅನ್ನೊರಿಗೆ ಪ್ರಧಾನಿ ಮೋದಿ ನೀಡಿದ್ದ ಉತ್ತರ ನೋಡಿದ್ರೆ ನೀವು ಶಾಖ್ ಆಗ್ತೀರಿ

0
ಕೇಂದ್ರದ ಉಚಿತ ಪಡಿತರ ವ್ಯವಸ್ಥೆ ನಿಲ್ಲುತ್ತೆ ಅನ್ನೊರಿಗೆ ಪ್ರಧಾನಿ ಮೋದಿ ನೀಡಿದ್ದ ಉತ್ತರ ನೋಡಿದ್ರೆ ನೀವು ಶಾಖ್ ಆಗ್ತೀರಿ

ದೆಹಲಿ:ದೇಶದ ಪ್ರತೀ ರಾಜ್ಯದಲ್ಲಿ ಕೂಡ ಬಡತನ ಸಮಸ್ಯೆ ಕಾಡಬಾರದು. ಅವರಿಗೆ ಹಸಿವಿನ ಸಮಸ್ಯೆಗೆ ಎಡೆ ಮಾಡಬಾರದೆಂದು ಬಹುತೇಕ ಎಲ್ಲ ರಾಜ್ಯದಲ್ಲೂ ಪಡಿತರ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಅದಕ್ಕೆ ಕೇಂದ್ರ ಸರಕಾರ ಕೂಡ ಅಪಾರ ಪ್ರಮಾಣದಲ್ಲಿ ನೆರವಾಗುತ್ತಿದೆ ಎಂದು ಹೇಳಬಹುದು. ಕೇಂದ್ರದಲ್ಲಿ ಆಡಳಿತದಲ್ಲಿರುವ ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಇದೀಗ ಪಡಿತರ ಕಾರ್ಡ್ ಹೊಂದಿರುವ ಜನರಿಗೆ ಸಿಹಿ ಸುದ್ದಿ ನೀಡಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.


ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಸಹಯೋಗದ ಮೂಲಕ ಪಡಿತರ ವಿತರಣೆ ವ್ಯವಸ್ಥೆ ಜಾರಿಗೆ ತಂದಿದ್ದು, ಪಡಿತರ ಚೀಟಿ ಹೊಂದಿರುವ ಕುಟುಂಬಕ್ಕೆ ಈ ಹಣ ಸಾಕಷ್ಟು ಉಪಯುಕ್ತ ಆಗಲಿದೆ ಎಂದು ಹೇಳಬಹುದು‌. ಕೇಂದ್ರ ಸರ್ಕಾರವು ಉಚಿತ ಪಡಿತರವನ್ನು ನೀಡುತ್ತಿದ್ದು, ಈ ಯೋಜನೆ ಇನ್ನು ಮುಂದೆ ಸ್ಥಗಿತ ಆಗಲಿದೆ ಎಂಬ ಗಾಳಿ ಸುದ್ದಿ ಹಬ್ಬಿತ್ತು. ಈ ಹಿನ್ನೆಲೆ ಇದೀಗ ಮೋದಿ ಅವರು ಈ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ.

ಕಡಿಮೆ ಹಣಕ್ಕೆ ಪಡಿತರ ನೀಡುತ್ತಿದ್ದ ವ್ಯವಸ್ಥೆ ಕೊರೊನಾ ಕಾಲಾವಧಿಯಲ್ಲಿ ದೇಶದ ಪ್ರಮುಖ ಭಾಗದಲ್ಲಿ ಉಚಿತವಾಗಿ ಅಕ್ಕಿ ನೀಡಲು 2020ರ ಮಾರ್ಚ್ ನಲ್ಲಿ ಅಂಗೀಕಾರ ಮಾಡಲಾಯಿತು‌. ಈ ಪ್ರಕಾರ ತಲಾ 5ಕೆಜಿ ಉಚಿತ ಅಕ್ಕಿ ನೀಡಲು ಮುಂದಾಗಲಾಯಿತು. ಮನೆಯಲ್ಲಿ ಎಷ್ಟು ಜನರಿದ್ದಾರೆ ಅಷ್ಟು ಜನರಿಗೆ ತಲಾ ಒಬ್ಬರಂತೆ 5ಕೆಜಿ ಅಂತೆ ಉಚಿತ ಅಕ್ಕಿ ಸೌಲಭ್ಯ ನೀಡಲಾಯಿತು. ಇದನ್ನು ಆಯಾ ರಾಜ್ಯದಲ್ಲಿ ಆಡಳಿತದಲ್ಲಿನ ಸರ್ಕಾರ ಹಾಗೂ ವ್ಯವಸ್ಥೆ ಆಧಾರಿತವೇ ನೀಡಲಾಗುವುದು.

ಯೋಜನೆ 2020ರಲ್ಲಿ ಜಾರಿಗೆ ಬಂದಿದ್ದು ಇದನ್ನು ಸ್ವಲ್ಪ ಸಮಯದಲ್ಲಿ ಸ್ಥಗಿತ ಮಾಡಬೇಕೆಂದು ಯೋಚಿಸಲಾಗಿತ್ತು. 2021ರ ನವೆಂಬರ್ ಗೆ ಬಹುತೇಕ ಈ ಯೋಜನೆ ತೆಗೆದು ಹಾಕಲಾಗುತ್ತದೆ ಎನ್ನಲಾಗಿತ್ತು. ಆದರೆ ಜನರ ಬೇಡಿಕೆ ಮತ್ತು ಅಗತ್ಯ ಮನಗಂಡು ಕೇಂದ್ರ ಸರ್ಕಾರ ಮತ್ತೆ ಯೋಜನೆ ಮುಂದುವರಿಸಲು ಗಡುವು ನೀಡಿತ್ತು‌. 2022ರ ಸೆಪ್ಟೆಂಬರ್ 30ಕ್ಕೆ ಯೋಜನೆ ನಿಲ್ಲಿಸಲಾಗುತ್ತೆ ಎನ್ನಲಾಗಿತ್ತು.‌ 2023ರಲ್ಲಿ ಕೂಡ ಇಂದಿಗೂ ಈ ಯೋಜನೆ ಚಾಲ್ತಿ ಇದ್ದು ಉಚಿತ ಪಡಿತರ ವ್ಯವಸ್ಥೆ ನಿಲ್ಲುತ್ತದೆ ಎಂಬವರಿಗೆ ಮೋದಿ ಉತ್ತರ ಶಾಖ್ ನೀಡಿದೆ‌.

ಪಿಎಂ ಹೇಳಿದ್ದೇನು?
ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ನವೆಂಬರ್ 4ರಂದು ಛತ್ತೀಸ್ ಘಡ್ ನ ಚುನಾವಣೆ ರ್ಯಾಲಿ ಸಂದರ್ಭದಲ್ಲಿ ಬಹಿರಂಗ ಸಭೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಹಿಂದೆ ನೀಡುತ್ತಿದ್ದ ಉಚಿತ ಪಡಿತರ ವ್ಯವಸ್ಥೆಯನ್ನು ನಾವು ಮುಂದುವರಿಸಲಿದ್ದೇವೆ. ಇದು ಸುಮಾರು ದೇಶದ 80ಕೋಟಿ ಜನರಿಗೆ ಆಹಾರ ಸೌಲಭ್ಯ ಸಿಕ್ಕಂತಾಗುವುದು. ಮುಂದಿನ 5ವರ್ಷದ ವರೆಗೆ ಕೂಡ ಈ ಯೋಜನೆ ಜಾರಿಯಲ್ಲಿರಲಿದೆ‌. ಇದರಿಂದಾಗಿ ಅನೇಕ ಬಡವರಿಗೆ ಆಹಾರ ಸಮಸ್ಯೆ ಇದ್ದವರಿಗೆ ಸಾಕಷ್ಟು ನೆರವಾಗಲಿದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಅವರ ಆಡಳಿತ ಅವಧಿಯಲ್ಲಿ ಇನ್ನೂ 5ವರ್ಷ ಈ ವ್ಯವಸ್ಥೆ ಜನರ ಸೇವಾಗಾಗಿ ಇರುತ್ತದೆ ಎಂಬ ಸಿಹಿ ಸುದ್ದಿ ಎಷ್ಟೋ ಜನರಿಗೆ ಸಾಕಷ್ಟು ಅನುಕೂಲ ಆಗಿದೆ ಅಂದರೂ ತಪ್ಪಾಗದು.

 

LEAVE A REPLY

Please enter your comment!
Please enter your name here