
ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಜನತೆಯ ಹಿತ ದೃಷ್ಟಿಯಿಂದ ಹಲವಾರು ಸಹಾಯ ಹಸ್ತ ನೀಡುತ್ತಲೇ ಬಂದಿದ್ದು, ಆರ್ಥಿಕ ಸೌಲಭ್ಯ, ಕೃಷಿಯೇತರ ಚಟುವಟಿಕೆ, ಆರೋಗ್ಯ, ಇನ್ನಿತರ ಬೆಂಬಲ ನೀಡಿದ್ದು, ಕೇಂದ್ರ ಸರ್ಕಾರವು ಹಲವು ರೀತಿಯ ಆರೋಗ್ಯ ಸೌಲಭ್ಯ, ವಿಮೆ ಯೋಜನೆ, ಇತ್ಯಾದಿಗಳನ್ನು ಜಾರಿಗೆ ತರುತ್ತಲೆ ಇದ್ದು, ಬಡವರ್ಗದ ಜನತೆಗೆ ಬಹಳಷ್ಟು ನೇರವಾಗುತ್ತಿದೆ.
ಬಿಮಾ ಪಿಂಚಣಿ ಯೋಜನೆ
ಪ್ರಧಾನ ಮಂತ್ರಿ ಬಿಮಾ ಯೋಜನೆ ಯನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ದೇಶದಲ್ಲಿ ಬಡವರ ಪ್ರಗತಿಗಾಗಿ ಈ ಯೋಜನೆ ಜಾರಿಗೆ ತಂದಿದ್ದು, ಬಡವರ ಹಿತ ದೃಷ್ಟಿ ಗಾಗಿ ವಿಮಾ ರಕ್ಷಣೆಯನ್ನು ಒದಗಿಸುವ ಉದ್ದೇಶದಿಂದ ರೂ 2 ಲಕ್ಷದ ಜೀವ ವಿಮಾ ರಕ್ಷಣೆಯನ್ನು ಜನತೆಗೆ ನೀಡುತ್ತದೆ. ಅದರ ಜೊತೆ 2 ಲಕ್ಷಗಳ ಅಪಘಾತ ಅಥವಾ ಸಂಪೂರ್ಣ ಶಾಶ್ವತ ಅಂಗವೈಕಲ್ಯ ರಕ್ಷಣೆ ಮತ್ತು ರೂ 1 ಲಕ್ಷದ ಶಾಶ್ವತ ಅಂಗವೈಕಲ್ಯ ರಕ್ಷಣೆಯನ್ನು ಈ ಸೌಲಭ್ಯ ನೀಡುತ್ತದೆ.
ಯಾವ ರೀತಿ ಈ ಯೋಜನೆ ಪ್ರಯೋಜನವಾಗಲಿದೆ?
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಎಂಬುದು ಒಂದು ಅಪಘಾತ ವಿಮೆ ಯೋಜನೆಯಾಗಿದ್ದು, ಬಡವರು ಮತ್ತು ಕಡಿಮೆ ಆರ್ಥಿಕ ಆದಾಯ ಇದ್ದವರಿಗೆ ಉಪಯೋಗವಾಗಲೆಂದು ಕೇಂದ್ರ ಸರ್ಕಾರ ಈ ಯೋಜನೆ ಜಾರಿ ಮಾಡಿದೆ. ಅಪಘಾತದಲ್ಲಿ ಯಾವುದಾದರೂ ವ್ಯಕ್ತಿ ಸಾವು ಸಂಭವಿಸಿದರೆ ಮತ್ತು ಅಂಗವೈಕಲ್ಯ ಸಮಸ್ಯೆ ಒಂದು ವರ್ಷದ ಅವಧಿಗೆ ಇನ್ಷೂರೆನ್ಸ್ ದೊರೆಯುತ್ತದೆ.
ಆರ್ಹತೆ ಏನು?
18ರಿಂದ 70 ವರ್ಷ ವಯಸ್ಸಿನ ಅವರು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ (PMSBY) ಸೇರ್ಪಡೆ ಆಗಲು ಅರ್ಹರಾಗುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯು ಕೆಲವೊಮ್ಮೆ ಎಷ್ಟೆ ಜಾಗೃತವಾಗಿದ್ದರೂ ಅವಘಡಗಳು ಸಂಭವಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ನಿಮಗೆ ಉಪಯೋಗಕ್ಕೆ ಬರಬಹುದಾಗಿದೆ. ಒಂದು ವೇಳೆ ಇನ್ಷೂರೆನ್ಸ್ ಮಾಡಿಸಿಕೊಂಡ ವ್ಯಕ್ತಿ ಆತ್ಮಹತ್ಯೆಗೆ ಶರಣಾದಲ್ಲಿ ಆಗ ಆ ವ್ಯಕ್ತಿಯ ಕುಟುಂಬಕ್ಕೆ ಇನ್ಷೂರೆನ್ಸ್ ದೊರೆಯುವುದಿಲ್ಲ.
ವಿಮಾ ರಕ್ಷಣೆ
ಈ ಯೋಜನೆಯಡಿ, ನೀವು ಅಪಘಾತದಲ್ಲಿ ಮರಣಹೊಂದಿದರೆ ಅಥವಾ ಅಂಗವಿಕಲರಾಗಿದ್ದರೆ, ನಿಮಗೆ 2 ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ. ಆದರೆ ಈ ಯೊಜನೆಗೆ ನೀವು ವಾರ್ಷಿಕವಾಗಿ 20 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ನಂತರ ನೀವು 2 ಲಕ್ಷ ರೂಪಾಯಿಗಳ ಅಪಘಾತ ವಿಮಾ ರಕ್ಷಣೆಯನ್ನು ಪಡೆಯಲು ಆರ್ಹರಾಗುತ್ತೀರಿ. ಹೌದು ನೀವು ಪ್ರಧಾನ ಮಂತ್ರಿ ಬಿಮಾ ಯೋಜನೆಯ ವೆಬ್ ಸೈಟ್ ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಈ ಯೋಜನೆಯ ಲಾಭವನ್ನು ಪಡೆಯಬಹುದು.
