Home ಸರಕಾರಿ ಯೋಜನೆಗಳು ಕೇಂದ್ರ ಸರಕಾರ ಭಾರತದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರತಿಷ್ಠಿತ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರತಿಷ್ಠಿತ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು?

0
ಭಾರತದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರತಿಷ್ಠಿತ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು?

ಕೇಂದ್ರದಲ್ಲಿ ಮೋದಿ ಸರ್ಕಾರ ಬಂದು ಅನೇಕ ವರಪರಿಚಯಿಸಲ್ಪಟ್ಟಿದ್ದ ಸರ್ಕಾರದ ಸಾಧನೆ ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕಾರಣದಿಂದ ಗುರುತಿಸಲಾಗುತ್ತಿದೆ. ಲೋಕಸಭೆ ಚುನಾವಣಾ ಹೊಸ್ತಿಲಲ್ಲಿ ಕಾಲಿಡುತ್ತಿದ್ದು ಹೀಗಾಗಿ ಇವರ ಆಡಳಿತ ಅವಧಿಯಲ್ಲಿ ಏನೆಲ್ಲ ಸುಧಾರಣೆ ಆಗಿದೆ ಎಂಬ ಸೂಕ್ಷ್ಮವಲೋಕನ ಮಾಡಲಾಗುತ್ತಿದ್ದು 2016ರಿಂದ 2023ರ ವರೆಗೆ ಅನೇಕ ಯೋಜನೆ ಜಾರಿಗೆ ತಂದಿದ್ದು ಅವುಗಳ ಒಂದು ಸಣ್ಣ ವಿವರಣೆಗಳನ್ನು ನಿಮಗೆ ಇಂದು ನಾವು ನೀಡಲಿದ್ದೇವೆ.

ಯಾವೆಲ್ಲ ಯೋಜನೆ
ಕೇಂದ್ರ ಸರ್ಕಾರದ ಅವಧಿಯಲ್ಲಿ ಯಾವೆಲ್ಲ ಯೋಜನೆ ಪರಿಚಯಿಸಲ್ಪಟ್ಟಿದೆ ಎಂದು ನಾವು ಪರಿಶೀಲನೆ ಮಾಡುವುದಾದರೆ ಈ ಕೆಳಕಂಡ ವಿವರಣೆ ಕಾಣಬಹುದು.

ಮಿಸ್ಟಿ ಯೋಜನೆ
– ಈ ಒಂದು ಯೋಜನೆಯೂ ಸಮುದ್ರ ತಟದಲ್ಲಿ ಮ್ಯಾಂಗ್ರೋ ಅರಣ್ಯಗಳನ್ನು ರಕ್ಷಣೆ ಮಾಡಲೆಂದು ಇದೇ ವರ್ಷ (2023)ರಲ್ಲಿ ಮಿಸ್ಟಿ ಯೋಜನೆ ಪರಿಚಯಿಸಲಾಗಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ
ಇದನ್ನು 2019ರ ಫೆಬ್ರವರಿ 24ರಂದು ಜಾರಿಗೆ ತಂದಿದ್ದು ಇದರ ಮೂಲಕ ಕೃಷಿ ಚಟುವಟಿಕೆಗೆ ಸಹಾಯಧನ ಮತ್ತು ಸಹಕಾರ ನೀಡಲಾಗುತ್ತಿದೆ.

ಜಲ್ ನಲ್ ಯೋಜನೆ
ಈ ಒಂದು ಯೋಜನೆಯ ಮೂಲಕ ಜಲಾಶಯಗಳ ಸಂರಕ್ಷಣೆ ಮಾಡಲಾಯಿತು. ಇದನ್ನು ಅಭಿಯಾನದ ಮಾದರಿಯಲ್ಲಿ ಪರಿಚಯಿಸಲಾಗಿದ್ದು ಇದನ್ನು ರಾಜಸ್ಥಾನದ ಸಿರೋಹಿಯಲ್ಲಿ ಉದ್ಘಾಟನೆ ಮಾಡಲಾಗಿದೆ.

ಅಗ್ನಿಪಥ
ಇದು ಸೇನೆಗೆ ಸಂಬಂಧಿಸಿದ್ದ ಯೋಜನೆಯಾಗಿದ್ದು ಸೇನಾ ಅವಧಿ ಕಡಿಮೆ ಮಾಡಿ ಯುವಕರಿಗೆ ಸೇನೆಗೆ ಸೇರ್ಪಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರವು ಸೈನ್ಯ ಬಲಗಳ ಬಲಪಡಿಸಲು ಜೂನ್ 2022 ರಂದು ಇದನ್ನು ಪರಿಚಯಿಸಿದೆ. ಇಲ್ಲಿನ ಸೈನಿಕರಿಗೆ ಅಗ್ನಿ ವೀರ್ ಎಂದು ಕರೆಯುವರು.

ಆಪರೇಶನ್ ದೋಸ್ತ್
ಈ ಒಂದು ಯೋಜನೆಯ ಮೂಲಕ ಟರ್ಕಿ ಮತ್ತು ಸಿರಿಯಾದಲ್ಲಿ ಆದ ಅಪಾಯಕಾರಿ ಭೂಕಂಪ ಕ್ಕೆ ಸಹಾಯ ಹಸ್ತ ನೀಡಿದ್ದು ಈ ಹೆಸರಿನಿಂದ ಅದನ್ನು ಕರೆಯಲಾಗಿದೆ.

ಪಿಎಂ ಶ್ರೀ ಸ್ಕೂಲ್ ಯೋಜನೆ
ಶಾಲೆಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರದಿಂದ ರಾಜ್ಯಕ್ಕೆ ಸಿಗುವ ಒಂದು ಪ್ರೋತ್ಸಾಹ ಎಂದು ಹೇಳಬಹುದು. ಇದನ್ನು2022ರ ಶಿಕ್ಷಕರ ದಿನಾಚರಣೆಯಂದು ಪರಿಚಯಿಸಲಾಗಿದೆ.

ಯುವ ಪೇಶೇವರ್ ಯೋಜನೆ
ಭಾರತ ಮತ್ತು ಬ್ರಿಟನ್ ದೇಶಗಳು ಒಟ್ಟಾಗಿ ಸೇರಿ ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧ ವೃದ್ಧಿಸಲು ಈ ಯೋಜನೆ ಪರಿಚಯಿಸಲಾಗಿದೆ.

ಸ್ವಚ್ಛ ಭಾರತ ಅಭಿಯಾನ
ಭಾರತವನ್ನು ಬಯಲು ಶೌಚಾಲಯ ಮುಕ್ತಗೊಳಿಸುವ ಯೋಜನೆ ಇದಾಗಿದೆ. ಗಾಂಧಿ ಜಯಂತಿಯಂದು ಈ ಯೋಜನೆ ಜಾರಿಗೆ ತರಲಾಗಿದೆ.

ಮೇಕ್ ಇಂಡಿಯಾ
ಕೇಂದ್ರ ಸರ್ಕಾರವು ಈ ಯೋಜನೆ ಪರಿಚಯಿಸಲಾಗಿದೆ. ಹಣಕಾಸಿನ ಸಚಿವಾಲಯ ಈ ಯೋಜನೆ ರೂಪು ರೇಶೆ ಸಿದ್ಧಪಡಿಸಿದೆ.

ಅಮೃತ್ ಭಾರತ್ ಸ್ಟೇಶನ್
ಈ ಯೋಜನೆಯನ್ನು ಕೇಂದ್ರ ಸರ್ಕಾರವು ಡಿಸೆಂಬರ್ 2022ರಲ್ಲಿ ಪ್ರಾರಂಭ ಮಾಡಿದೆ. ರೈಲ್ವೇ ಸ್ಟೇಶನ್ ಗಳ ಆಧುನೀಕರಣ ಸ್ಪರ್ಷ ನೀಡಲೆಂದು ರೈಲ್ವೇ ಸಚಿವಾಲಯದ ಸಹಭಾಗಿತ್ವದೊಂದಿಗೆ ಈ ಯೋಜನೆಯನ್ನು 2023ರಲ್ಲಿ ಪ್ರಾರಂಭ ಮಾಡಲಾಗಿದೆ‌.

ಭೇಟಿ ಬಚಾವೊ ಭೇಟಿ ಪಡಾವೊ
ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಪ್ರಾಮುಖ್ಯತೆ ಸಾರುವ ಯೋಜನೆ ಇದಾಗಿದೆ.

ವೈಬ್ರಂಟ್ ವಿಲೇಜಸ್ ಪ್ರೊಗ್ರಾಂ
ಇದರ ಮೂಲಕ ಚೀನಾ ದೇಶದ ಗಡಿ ಭಾಗದಲ್ಲಿರುವ ಭಾರತೀಯ ಗ್ರಾಮಗಳ ಸಮಗ್ರ ವಿಕಾಸಕ್ಕಾಗಿ ಈ ಯೋಜನಯನ್ನು ಪರಿಚಯಿಸಲಾಗಿದೆ.

ಅಟಲ್ ಪೆನ್ಶನ್ ಯೋಜನೆ
ಇದನ್ನು ಮೇ9, 2015ರಂದು ಜಾರಿಗೆ ತರಲಾಗಿದ್ದು, 60ವರ್ಷದ ಹಿರಿಯರಿಗೆ ಪೆನ್ಶನ್ ಸಿಗಲಿದೆ.

ಪ್ರಧಾನ ಮಂತ್ರಿ ಜನ ಧನ ಯೋಜನೆ
ಕೇಂದ್ರ ಸರ್ಕಾರವು ಪ್ರತೀ ನಾಗರಿಕರಿಗೆ ಬ್ಯಾಂಕ್ ಖಾತೆ ತೆರೆಯುವ ಸಲುವಾಗಿ ಈ ಯೋಜನೆ ಪರಿಚಯಿಸಲಾಗಿದೆ.

PMCCS ಯೋಜನೆ
ಕೊರೊನಾ ನಂತರದ ಅವಧಿಯಲ್ಲಿ ಅನಾಥ ಮಕ್ಕಳಿಗೆ ಆರ್ಥಿಕ ಸಹಾಯ ನೀಡಲು ಈ ಯೋಜನೆ ಪರಿಚಯಿಸಲಾಗಿದೆ. PM care for children scheme ಎಂದು ಇದನ್ನು ಕರೆಯಲಾಗುತ್ತದೆ.

ಉಜ್ವಲ್ ಯೋಜನೆ
ಭಾರತದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ದರದಲ್ಲಿ LED ಬಲ್ಬ್ ನೀಡಲು ಈ ಯೋಜನೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.

ಪ್ರಧಾನ ಮಂತ್ರಿ ಮುದ್ರಾ ಯೋಜನೆ
ಸಣ್ಣ ಉದ್ಯಮಿಯವರಿಗೆ ಸಾಲ ಸೌಲಭ್ಯ ನೀಡುವ ಯೋಜನೆ ಇದಾಗಿದೆ. Micro units development re finance ಯೋಜನೆ.

ಹೈಡ್ರೋಜನ್ ಫಾರ್ ಹೆರಿಟೇಜ್ ಯೋಜನೆ
ಇದು ಭಾರತೀಯ ರೈಲ್ವೆ ಇಲಾಖೆಗೆ ಸಂಬಂಧಿಸಿದ ಯೋಜನೆಯಾಗಿದ್ದು 2023ರಂದು ಪ್ರಾರಂಭ ಮಾಡಲಾಗಿದೆ.

ಇತರ ಯೋಜನೆ
ಪ್ರಧಾನ ಮಂತ್ರಿ ಆವಾಸ್ ಯೋಜನೆ, ಡಿಜಿಟಲ್ ಇಂಡಿಯಾ, ಉಡಾನ್ ಯೋಜನೆ (ಕಡಿಮೆ ದರದಲ್ಲಿ ವಿಮಾನ ಸೌಲಭ್ಯ), ಆಯುಷ್ಮಾನ್ ಭಾರತ್ ಯೋಜನೆ, ಸೇತು ಭಾರತ್ ಯೋಜನೆ,ಪಿಎಂ ಶ್ರೇಷ್ಠ ಯೋಜನೆ, ನಮಾಮಿ ಗಂಗಾ ಯೋಜನೆ, ಯುವ ಪಿಎಂ ಇವೆಲ್ಲ ಯೋಜನೆಯೂ ಕೇಂದ್ರದಿಂದ ಪರಿಚಯಿಸಲ್ಪಟ್ಟಿದ್ದೆ ಎನ್ನಬಹುದು‌‌.

 

LEAVE A REPLY

Please enter your comment!
Please enter your name here