
ರೈತರಿಗೆ ಇಂದು ಆರ್ಥಿಕ ಉತ್ತೇಜನೆ ನೀಡುವ ಸಲುವಾಗಿ ಸರ್ಕಾರ ಅನೇಕ ಯೋಜನೆ ಪರಿಚಯಿಸಿದೆ. ಅವುಗಳಲ್ಲಿ ಕೆಲವೊಂದು ಕೇಂದ್ರದ ಯೋಜನೆಯಾಗಿದ್ದರೆ ಇನ್ನೂ ಕೆಲವೊಂದು ರಾಜ್ಯದ ಯೋಜನೆಯಾಗಿದೆ. ಇಂತಹವುಗಳಲ್ಲಿ ಮುಖ್ಯವಾಗಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಕಾಣಬಹುದು. ಇದು ಗ್ರಾಮೀಣ ಭಾಗದ ರೈತರಿಗೆ ತಮ್ಮ ಕೃಷಿ ಕಾರ್ಯಚಟುವಟಿಕೆಗೆ ಸಣ್ಣ ಮಟ್ಟಿಗೆ ನೆರವು ನೀಡುವ ಯೋಜನೆ ಎಂದರೂ ತಪ್ಪಾಗದು.
ಪ್ರತೀ ವರ್ಷದಂದು ರೈತರಿಗೆ ಈ ಯೋಜನೆ ನೀಡಲಾಗುತ್ತಿದ್ದು, ಈ ಬಗ್ಗೆ ಮಾಹಿತಿ ಮಾತ್ರ ಅನೇಕರಿಗೆ ಇನ್ನೂ ಕೂಡ ಸರಿಯಾಗಿ ಸಿಕ್ಕಿಲ್ಲ ಎಂದು ಹೇಳಬಹುದು. ಕಿಸಾನ್ ಸಮ್ಮಾನ್ ಯೋಜನೆಯೂ ರೈತರಿಗೆ ಸಹಾಯಧನ ನೀಡುವುದಾಗಿದೆ. ಪ್ರತೀ ವರ್ಷದಂದು ರೈತರಿಗೆ ಆರು ಸಾವಿರ ರೂ. ಸಹಾಯಧನ ನೀಡಲಾಗುತ್ತಿದ್ದು ಎರಡು ಸಾವಿರದಂತೆ ಒಂದು ವರ್ಷಕ್ಕೆ ಮೂರು ಕಂತಿನಲ್ಲಿ ಹಣ ಜಮೆ ಆಗಲಿದೆ.
ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ಇದುವರೆಗೆ 14ಕಂತಿನಲ್ಲಿ ಹಣ ಬಿಡುಗಡೆ ಮಾಡಲಾಗಿದ್ದು, ಈ ಹಣ ಪಡೆದವರ ಸಂಖ್ಯೆ ಕಡಿಮೆ ಎಂದು ಹೇಳಬಹುದು. ಹಾಗಾಗಿ ಕೇಂದ್ರ ಸರ್ಕಾರ ಕೂಡ ಇಂತಹ ಒಂದು ಯೋಜನೆ ಇದೆ ಎಂಬ ಅರಿವು ಮೂಡಿಸುವ ಪ್ರಯತ್ನದತ್ತ ಸಾಗುತ್ತಿದೆ. ಇನ್ನೇನು ಕೆಲವೇ ದಿನದಲ್ಲಿ ಮೋದಿ ಅವರು15ನೇ ಕಂತಿನ ಹಣ ಸಹ ಬಿಡುಗಡೆ ಮಾಡಲಿದ್ದಾರೆ ಹಾಗಾಗಿ ಯಾರು ಅಪ್ಲೈ ಮಾಡಿಲ್ಲ ಈ ಕೂಡಲೇ ಅಗತ್ಯ ದಾಖಲೆಯೊಂದಿಗೆ ಅಪ್ಲೈ ಮಾಡಿದರೆ ಯೋಜನೆಯ ಫಲಾನುಭವಿಗಳಾಗಬಹುದು.
ಪ್ರಕ್ರಿಯೆ ಹೀಗಿದೆ
ಪಿಎಂ ಕಿಸಾನ್ ಸಮ್ಮಾನ್ ಗೆ ಅರ್ಜಿ ಸಲ್ಲಿಸುವವರು ಮೊದಲು ಅಧಿಕೃತ ವೆಬ್ಸೈಟ್ ನಲ್ಲಿ ಭೇಟಿ ನೀಡಿ www.pmkisan.gov.inಗೆ ಭೇಟಿ ನೀಡಬಹುದು. ಬಳಿಕ ಹೊಸದಾಗಿ ನೋಂದಣಿ ಆಯ್ಕೆ ಕಾಣಲಿದ್ದು, ಅದರ ಮೇಲೆ ಕ್ಲಿಕ್ ಮಾಡಿ. ಬಳಿಕ ಭಾಷೆ, ನಿಮ್ಮ ಫಿಲ್ಡ್, ನೋಂದಣಿ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಅದರಲ್ಲಿ ಭೂಮಿಯ ವಿವರಣೆ ಭರ್ತಿಗೆ ಕೇಳಲಾಗುವುದು ಅದನ್ನು ಮಾಡಿ. ಕೋಡ್ ನಮೋದಿಸಿದ ಬಳಿಕ ಒಟಿಪಿ ಕೇಳಲಿದೆ ಅದನ್ನು ಸಹ ಹಾಕಬೇಕು. ಫಾರ್ಮ್ ಅನ್ನು ಸಲ್ಲಿಸಿದರೆ ಎಲ್ಲ ಪ್ರಕ್ರಿಯೆ ಮುಗಿಯುವುದು.
ಹೆಚ್ಚಿನ ಮಾಹಿತಿಗೆ
ಈ ಬಗ್ಗೆ ಯಾವುದೇ ವಿದವಾದ ಅನುಮಾನ ಇದ್ದರೆ, ನೀವು [email protected] ಅನ್ನು ಸಂಪರ್ಕಿಸಬಹುದು. ರೈತರ ಸಹಾಯವಾಣಿ ಸಂಖ್ತೆ 1800115526 ಅಥವಾ 155261ಸಂಪರ್ಕಿಸಬಹುದು. ಈ ಮೂಲಕ ಅನುಮಾನ ಬಗೆಹರಿಸಿಕೊಳ್ಳಬಹುದು. ಇಷ್ಟು ಮಾತ್ರವಲ್ಲದೆ ಅಪ್ಲೈ ಮಾಡಲು ನಿಮಗೆ ಬರದೇ ಇದ್ದರೆ ಆಗ ಕೂಡ ನೀವು ರೈತ ಸಂಪರ್ಕ ಕೇಂದ್ರದ ಸಹಾಯವನ್ನು ಪಡೆಯಬಹುದಾಗಿದೆ. ಒಟ್ಟಾರೆ ಈ ಯೋಜನೆ ರಾಷ್ಟ್ರೀಯ ಮಟ್ಟದಲ್ಲಿ ರೈತರಿಗೆ ನೆರವಾಗುತ್ತಿದ್ದು ನೀವು ರೈತರಾಗಿದ್ದಲ್ಲಿ ಪ್ರಯೋಜನವನ್ನು ಶೀಘ್ರ ಪಡೆಯಿರಿ. ಈ ಮಾಹಿತಿ ನಿಮಗೆ ಇಷ್ಟ ಆದಲ್ಲಿ ಲೈಕ್ ಮಾಡಿ.
