
ಇಂದು ಸರಿಯಾದ ಆಹಾರ ಪದ್ದತಿಯನ್ನು ರೂಡಿಸಿಕೊಳ್ಳುವುದು ಸಹ ಅಷ್ಟೆ ಮುಖ್ಯವಾಗುತ್ತದೆ. ದಿನ ನಿತ್ಯದ ಕೆಲಸದ ಒತ್ತಡದಲ್ಲಿ ನಮ್ಮ ಆಹಾರ ಕ್ರಮವನ್ನು ಸರಿಯಾಗಿ ಅನುಕರಣೆ ಮಾಡದೇ ಇದ್ದಲ್ಲಿ ಮುಂದಿನ ದಿನದಲ್ಲಿ ಬಹಳಷ್ಟು ಆರೋಗ್ಯ ಸಮಸ್ಯೆ ಕಾಡುವುದು ಪಕ್ಕಾ. ಅದರಲ್ಲೂ ಇಂದು ಸರಿಯಾದ ಆಹಾರ ಕ್ರಮ ಅನುಸರಿಸದೇ ಸಣ್ಣ ವರಿಂದ ಹಿಡಿದು ಹಿರಿಯವರೆಗೂ ಈ ಬಿಪಿ ಖಾಯಿಲೆ ಎಂಬುದು ಹೆಚ್ಚಾಗಿದೆ. ಇಂದು ಹೆಚ್ಚಿನ ಜನರು ಮೆಡಿಷಿನ್ ಗೆ ಅವಲಂಬಿತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಅಧಿಕ ರಕ್ತದೊತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಸರಿಯಾದ ಆರೋಗ್ಯ ರಕ್ಷಣೆ ಕೂಡ ಅಗತ್ಯ.
ಜೀವನಶೈಲಿ ಬದಲಾವಣೆ
ಹೌದು, ಅಧಿಕ ರಕ್ತದೊತ್ತಡವನ್ನು ನಿಯಂತ್ರಣ ಮಾಡಲು ಮತ್ತು ನಿರ್ವಹಿಸಲು ಜೀವನಶೈಲಿಯ ಬದಲಾವಣೆಗಳು ಅತ್ಯಂತ ಪರಿಣಾಮಕಾರಿ , ಇದನ್ನು ತಡೆಗಟ್ಟಲು ಸರಿಯಾದ ನಿಯಮಗಳನ್ನು ಸಹ ಅನುಸರಿಸಬೇಕಿದೆ.
ಧೂಮಪಾನ ಮಾಡಬಾರದು
ನೀವು ಧೂಮಪಾನಿಗಳಾಗಿದ್ದರೆ ಇದರಿಂದ ಹೊರ ಬರುವುದು ಕೂಡ ಬಹಳಷ್ಟು ಅಗತ್ಯವಾಗಿದೆ. ಸಿಗರೇಟ್‌ನಲ್ಲಿರುವ ನಿಕೋಟಿನ್ ಅಂಶವು ನಿಮ್ಮ ದೇಹದಲ್ಲಿ ಆಡ್ರಿನಲಿನ್ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೀಗಾಗಿ ನಿಮ್ಮದೇಹದಲ್ಲಿರಕ್ತದ ಒತ್ತಡ ಹೆಚ್ಚಾಗುತ್ತದೆ.
ಇವುಗಳನ್ನು ಸೇವಿಸಿ
ಹಸಿರು ಸೊಪ್ಪು, ತರಕಾರಿಗಳು ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಪಡೆದಿದ್ದು, ಇದು ಸೋಡಿಯಂ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಹೆಚ್ಚು ರಕ್ತದೊತ್ತಡ ಇದ್ದರೆ ಅದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ವಿಶೇಷವಾಗಿ ರೋಲ್ಡ್ ಓಟ್ಸ್, ಬೀಟಾ-ಗ್ಲುಕನ್ ಇತ್ಯಾದಿ ರಕ್ತದೊತ್ತಡವನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿ ಆಗುತ್ತದೆ.
ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಮಂದಿಗೆ ನಿಯಮಿತ ವ್ಯಾಯಾಮ ಅತ್ಯಗತ್ಯ, ದೈಹಿಕ ವ್ಯಾಯಾಮ ಹೃದಯಕ್ಕೆ ಉತ್ತಮ ಶಕ್ತಿ ನೀಡುತ್ತದೆ.
ಅಧಿಕ ರಕ್ತದೊತ್ತಡವು ಆರೋಗ್ಯ ಸಮಸ್ಯೆಗಳು ಅಥವಾ ಬಾಹ್ಯ ಅಂಶಗಳಿಂದ ಸಂಭವಿಸುತ್ತದೆ. ಸಿಹಿಗುಂಬಳಕಾಯಿ ಮತ್ತು ಅದರ ಬೀಜವನ್ನು ಸೇವಿಸದರೆ ಉತ್ತಮ
ಬಾದಾಮಿ, ಬಟಾಣಿ, ಶೇಂಗಾ ಅಥವಾ ನೆಲಗಡಲೆ ಇತ್ಯಾದಿ ಬಿಪಿ ಕಂಟ್ರೋಲ್‌ನಲ್ಲಿಡಲು ನೆರವಾಗುತ್ತದೆ.
ಒಟ್ಟಿನಲ್ಲಿ ನಮ್ಮ ಆರೋಗ್ಯ ನಮ್ಮದೇ ಕೈಯಲಿದ್ದು, ಸರಿಯಾದ ಸಮಯಕ್ಕೆ ಆಹಾರ ಕ್ರಮ ಅನುಸರಿದರೆ ಯಾವುದೇ ಆರೋಗ್ಯ ಸಮಸ್ಯೆ ಗಳು ಹತ್ತಿರ ಸುಳಿಯುವುದಿಲ್ಲ. ಹಾಗಾಗಿ ದೇಹಕ್ಕೆ ಅಂಟುವ ಮೊದಲೇ ಜಾಗರೂಕರಾಗಿರುವುದು ಒಳಿತು.
