
ಈ ವರ್ಷದಂದು ಕರ್ನಾಟಕ ಸೇರಿದಂತೆ ರಾಷ್ಟ್ರೀಯ ಮಟ್ಟದ ಅನೇಕ ಭಾಗದಲ್ಲಿ ಮಳೆಯ ಅಭಾವ ಕಂಡುಬಂದಿದ್ದು, ಇದರಿಂದ ತುಂಬಾ ಸಂಕಷ್ಟಪಟ್ಟದ್ದು ಮಾತ್ರ ರೈತರೆಂದು ಹೇಳಬಹುದು. ರೈತರಿಗಾಗಿ ಸರ್ಕಾರ ಅನೇಕ ವಿಧವಾದ ಸೇವೆ ನೀಡಿದ್ದರೂ ಕೂಡ ರೈತರಿಗೆ ಆ ಸೌಲಭ್ಯಗಳ ಮಾಹಿತಿ ತಿಳಿದಿರುವುದು ತೀರ ಕಡಿಮೆ ಎನ್ನಬಹುದು. ಹಾಗಾಗಿ ರೈತರಿಗೆ ಈ ಸೌಲಭ್ಯ ಒದಗಿಸಲು ಸರ್ಕಾರದ ಅನೇಕ ಇಲಾಖೆ ಮಾಹಿತಿ ನೀಡುವಲ್ಲಿ ಸತತ ಪ್ರಯತ್ನ ಪಡುತ್ತಿದೆ.
ರೈತರು ಬರ ಪರಿಹಾರ ನೀಡಲು ಮುಂದಾಗಿದ್ದು ಸರ್ಕಾರದ ಈ ಪರಿಹಾರ ಧನ ಸಾಕಷ್ಟು ರೈತರ ಪಾಲಿಗೆ ವರದಾನ ಆಗಲಿದೆ ಎನ್ನಬಹುದು. ಕಳೆದ ಕೆಲ ದಿನಗಳಿಂದ ರಾಜ್ಯದ ನಾನಾ ಭಾಗದಿಂದ ಬರಗಾಲದ ಪಟ್ಟಿ ಸಿದ್ಧಪಡಿಸಲಾಗಿದ್ದು, ಈ ಮೂಲಕ ಇದರ ಆಧಾರದ ಮೇಲೆ ಪರಿಹಾರ ಪಾವತಿ ಮಾಡಲು ಚಿಂತನೆ ನಡೆಸಲಾಗಿದೆ. ಫ್ರೂಟ್ ಐಡಿಯಲ್ಲಿ ದಾಖಲಾಗಿರುವ ಜಮೀನಿನ ಆಧಾರದ ಮೇಲೆ ಪರಿಹಾರ ಪಾವತಿಸಲು ಚಿಂತಿಸಲಾಗಿದೆ.
ಪರಿಹಾರ ಪಾವತಿ ಕಂದಾಯ ಇಲಾಖೆಯ ವ್ಯಾಪ್ತಿ ಒಳಗೆ ಬರುವ ಕಾರಣ ಫ್ರೂಟ್ ಐಡಿ ಮುಖೇನ ದಾಖಲಾಗಿರುವ ಜಮೀನಿನ ಆಧಾರದ ಮೇಲೆ ಪರಿಹಾರ ಪಾವತಿ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಮಾಧ್ಯಮದ ಮುಂದೆ ಮಾಹಿತಿ ನೀಡಿದ್ದು, ಸದ್ಯ ಈ ಮಾಹಿತಿ ಕೃಷಿಕರಿಗೆ , ರೈತರಿಗೆ ಬಹಳ ಸಹಕಾರಿ ಆಗಿದೆ.
ಸಚಿವರು ಹೇಳಿದ್ದೇನು?
ಪರಿಹಾರ ಮೊತ್ತ ಸಾರ್ವತ್ರಿಕವಾಗಿ ನೀಡಲು ಸಾಧ್ಯವಿಲ್ಲ. ಫ್ರೂಟ್ ಐಡಿಯಲ್ಲಿ ನೀಡಿದ್ದ ಮಾಹಿತಿ ಆಧಾರದ ಮೇಲೆ ಪರಿಹಾರ ನೀಡಲು ಚಿಂತಿಸಲಾಗಿದೆ. ಅಧಿಕಾರಿಗಳ ಲಾಭದ ಪ್ರಮಾಣ ಹಿತಾಸಕ್ತಿ ಕಾಯ್ದುಕೊಳ್ಳುವುದನ್ನು ತಡೆಯಬಹುದು. ಫಲಾನುಭವಿಗಳಾಗಬೇಕು ಎಂಬ ಉದ್ದೇಶದಿಂದ ಅಕ್ರಮ ಮಾಡಿದರೆ ಅದನ್ನು ತಡೆ ಹಿಡಿಯುವ ಜೊತೆಗೆ ನೈಜ ಫಲಾನುಭವಿಗಳಿಗೆ ಪರಿಹಾರ ಮೊತ್ತ ಸಿಗಲಿದೆ. ಮತ್ತು ಹೀಗಾಗಿ ರೈತರು ತಮ್ಮ ಕೃಷಿ ಭೂಮಿಯ ಬಗ್ಗೆ ಮುಂದಿನ 15 ದಿನದ ಒಳಗೆ ಫ್ರೂಟ್ಸ್ ದತ್ತಾಂಶ ಭರ್ತಿ ಮಾಡುವಂತೆ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ತಿಳಿಸಿದ್ದಾರೆ.
ಒಟ್ಟಾರೆ ಅಕ್ರಮ ತಡೆಹಿಡಿಯುವ ಸಲುವಾಗಿ 15ದಿನದೊಳಗೆ ಜಾಗಗಳ ಬಗ್ಗೆ ಫ್ರೂಟ್ಸ್ ವರದಿ ಸಲ್ಲಿಸಲು ತಿಳಿಸಲಾಗಿದ್ದು ಈ ಬಗ್ಗೆ ಕಂಡು ಬರುವ ಸಮಸ್ಯೆ ಯನ್ನು ಒಂದು ತಿಂಗಳ ಒಳಗೆ ಬಗೆಹರಿಸಲಾಗುವುದು ಮತ್ತು ಜಿಲ್ಲಾಧಿಕಾರಿ ಅವರಿಗೆ ಬರ ಪರಿಹಾರಕ್ಕೆ ಪರಿಗಣಿಸುವ ನಿರ್ದಿಷ್ಟ ಮಾನದಂಡ ತಿಳಿಸಲಾಗುವುದು ಎಂದು ಈ ಬಗ್ಗೆ ಸ್ಥಳೀಯ ಆಡಳಿತಕ್ಕೆ ಸೂಚನೆಯನ್ನು ನೀಡಿದ್ದಾರೆ. ಒಟ್ಟಾರೆಯಾಗಿ ಈ ಒಂದು ವಿಧಾನದಿಂದ ಅನೇಕ ರೈತರಿಗೆ ಅದರಲ್ಲೂ ನೈಜ ಫಲಾನುಭವಿಗಳಿಗೆ ಈಗ ಸರ್ಕಾರದ ಪರಿಹಾರಧನ ಸಿಗಲು ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಬಹುದು.
