
ರಾಜ್ಯ ಸರ್ಕಾರದ ಅವಧಿಯಲ್ಲಿ ಕೇಂದ್ರದ ಒಂದು ಸಹಯೋಗದ ಮೂಲಕ ಅನ್ನಭಾಗ್ಯ ಯೋಜನೆಗೆ ಬಲಿಷ್ಟ ಬಲ ನೀಡಲಾಗುತ್ತಿದೆ. ಸರ್ಕಾರದ ಕಾರ್ಯ ನಿಯೋಜನೆ ಮೂಲಕ ಚುನಾವಣೆ ಪೂರ್ವದಲ್ಲಿಯೇ ಉಚಿತ 10ಕೆ.ಜಿ. ಅಕ್ಕಿ ನೀಡುತ್ತೇವೆ ಎಂದ ಕರ್ನಾಟಕದ ಕಾಂಗ್ರೆಸ್ ಸರಕಾರಕ್ಕೆ ಅಕ್ಕಿಯ ಪೂರೈಕೆ ಸಮಸ್ಯೆ ಮತ್ತು ಕೇಂದ್ರ ಸರ್ಕಾರದ ಅನುದಾನ ಹಾಗೂ ಸಹಕಾರದ ಸಮಸ್ಯೆ ಇದ್ದ ಕಾರಣ 10ಕೆ.ಜಿ. ಯಲ್ಲಿ 5ಕೆ.ಜಿ. ಅಕ್ಕಿ ಹಾಗೂ ಉಳಿದ 5ಕೆ.ಜಿ. ಅಕ್ಕಿಗೆ ಬದಲು ಹಣ ನೀಡುವ ವ್ಯವಸ್ಥೆ ಜಾರಿಗೆ ಬಂದಿದೆ.
ಈ ಮೂಲಕ ಅನ್ನಭಾಗ್ಯದ ಯೋಜನೆ ಅಡಿಯಲ್ಲಿ ಪಡಿತರ ಫಲಾನುಭವಿಗಳಿಗೆ ಅಕ್ಕಿ ಪೂರೈಕೆಯ ಜೊತೆಗೆ ಧನಾಗಮನ ಕೂಡ ಆಗುತ್ತಿದೆ ಎನ್ನಬಹುದು. 5ಕೆ.ಜಿ. ಅಕ್ಕಿಯ ಬದಲು ಮನೆ ಸದಸ್ಯರಿಗೆ ಒಂದು ಕೆ.ಜಿ.ಗೆ 34 ರೂ. ನಂತೆ ಒಟ್ಟು ತಲಾ 170ರೂ. ಯನ್ನು ನೀಡಲು ಕಾಂಗ್ರೆಸ್ ಸರ್ಕಾರ ತೀರ್ಮಾನ ಮಾಡಿದ್ದು, ಆ ಬಳಿಕ ಹಣವನ್ನು ತಿಂಗಳು ತಿಂಗಳು ಜಮೆ ಕೂಡ ಮಾಡುತ್ತಾ ಬಂದಿದೆ. ಇದೀಗ ಅನ್ನಭಾಗ್ಯ ಯೋಜನೆ ಬಗ್ಗೆ ಬಿಗ್ ಅಪ್ಡೇಟ್ ಮಾಹಿತಿಯೊಂದು ಸಿಕ್ಕಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಗೃಹಲಕ್ಷ್ಮೀ ಯೋಜನೆಯಂತೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಕೂಡ ಅನೇಕರಿಗೆ ಹಣ ಬರುವುದು ಬಾಕಿ ಇದೆ ಎಂದು ಹೇಳಬಹುದು. ಅದಕ್ಕೆ ಮುಖ್ಯ ಕಾರಣ ಬ್ಯಾಂಕಿನ ಸಮಸ್ಯೆ ಎಂಬುದು ತಿಳಿದು ಬಂದಿದ್ದು, ಸರ್ಕಾರ ಕೂಡ ಈ ಬಗ್ಗೆ ಅನೇಕ ಸಲ ಎಚ್ಚರಿಸಿದೆ. ಹೀಗಾಗಿ ಇಂತಹ ಸಮಸ್ಯೆ ಕಂಡು ಬಂದರೆ ಅದನ್ನು ಪರಿಹಾರ ಮಾಡಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲು ಸರ್ಕಾರ ಮುಂದಾಗಿದೆ.
ಖಾತರಿ ಇರಲಿ
ಅನ್ನಭಾಗ್ಯ ಯೋಜನೆ ಹಣ ಬಂದಿದೆ ಅಥವಾ ಇಲ್ಲ ಎಂಬುದು ಬಹುತೇಕರಿಗೆ ಇರುವ ಒಂದು ದೊಡ್ಡ ಅನುಮಾನ ಎಂದರೂ ತಪ್ಪಾಗದು. ಹಾಗಾಗಿ ಆಹಾರ ಇಲಾಖೆಯ ವೆಬ್ಸೈಟ್ ಆದhttps://ahara.kar.nic.in/Home/EServices ಗೇ ಭೇಟಿ ನೀಡಿ ಬಳಿಕ ಸ್ಟೇಟಸ್ ಆಫ್ ಡೆಬಿಟ್ಸ್ ಅನ್ನು ಆಯ್ಕೆ ಮಾಡಿರಿ. ಬಳಿಕ ಅಲ್ಲಿ ನಿಮ್ಮ ರೇಶನ್ ಕಾರ್ಡ್ ನಂಬರ್ ಅನ್ನು ನೀವು ನಮೋದಿಸಬೇಕು. ರೇಶನ್ ಕಾರ್ಡಿನ ಆರ್.ಸಿ ನಂಬರ್ ಹಾಕಿದ್ದ ಬಳಿಕ ನಿಮ್ಮ ಖಾತೆಗೆ ಹಣ ಬಂದಿದೆಯಾ ಇಲ್ಲವೇ ಎಂದು ತಿಳಿಸಲಿದೆ. ಬರದೇ ಇದ್ದರೆ ಅದಕ್ಕೆ ನಿಖರ ಕಾರಣವನ್ನು ಸಹ ತಿಳಿಸಲಾಗುವುದು. ಹೀಗಾಗಿ ಹಣ ಬಂದಿಲ್ಲ ಅಥವಾ ಬಂದದ್ದೇ ತಿಳಿದಿಲ್ಲ ಅನ್ನೋರು ಈ ವಿಧಾನವನ್ನು ಅನುಸರಿಸಬಹುದಾಗಿದೆ.
ಈ ತಿಂಗಳ ಹಣ ಯಾವಾಗ ಬರುತ್ತೆ?
ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಮನೆ ಸದಸ್ಯರು ಅಧಿಕ ಇದ್ದ ಕುಟುಂಬಕ್ಕೆ ಅಧಿಕವಾಗಿ ಲಾಭವಾಗುತ್ತಿದ್ದು, ಈಗಾಗಲೇ ಕಂತಿನ ಹಣ ಪಡೆದವರು ಈ ಕಂತಿನ ಹಣ ಯಾವಾಗ ಬರುತ್ತೆ ಎಂದು ಕಾಯುತ್ತಾ ಇದ್ದಾರೆ. ಅಂತವರಿಗೆ ಇತ್ತೀಚೆಗಷ್ಟೇ ಕಾಂಗ್ರೆಸ್ ಸರ್ಕಾರ ಶುಭ ಸುದ್ದಿ ನೀಡಿದೆ. ಇದೇ ತಿಂಗಳ ಅಂದರೆ ನವೆಂಬರ್ 20ರ ಒಳಗೆ ಸಂಬಂಧ ಪಟ್ಟ ಪಡಿತರಿಗೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹಣ ಜಮೆ ಮಾಡಲಾಗುವುದು ಎಂದು ಸರ್ಕಾರ ಸೂಚನೆ ನೀಡಿದೆ. ಈ ಒಂದು ಹಣವು ಅಕ್ಟೋಬರ್ ತಿಂಗಳಲ್ಲಿ ಬರಬೇಕಾದ ಹಣವಾಗಿದ್ದು, ನವೆಂಬರ್ ನಲ್ಲಿ ಬರಲಿದೆ. ಆದರೆ ಎಷ್ಟೋ ಬಾರಿ ಹಣ ಬಂದಿದ್ದು ತಿಳಿಲೇ ಇಲ್ಲ ಎಂದವರು ನಾವು ತಿಳಿಸಿದ್ದ ಸರಳ ಟಿಪ್ಸ್ ಫಾಲೋ ಮಾಡಬಹುದು.
