Home ಸರಕಾರಿ ಯೋಜನೆಗಳು ಕೇಂದ್ರ ಸರಕಾರ ಕೇಂದ್ರ ಸರಕಾರದ ಜಲ ಜೀವನ್‌ ಮಿಷನ್‌ ಯೋಜನೆ ಅನುಷ್ಠಾನ ಬಗ್ಗೆ ನಿಮಗೆಷ್ಟು ಗೊತ್ತು?

ಕೇಂದ್ರ ಸರಕಾರದ ಜಲ ಜೀವನ್‌ ಮಿಷನ್‌ ಯೋಜನೆ ಅನುಷ್ಠಾನ ಬಗ್ಗೆ ನಿಮಗೆಷ್ಟು ಗೊತ್ತು?

0

ಇಡೀ ರಾಜ್ಯವನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ನೀರಿನ ಸಮಸ್ಯೆ ಕೂಡ ಒಂದಾಗಿದೆ. ಅದರಲ್ಲೂ ರೈತರಿಗೆ ನೀರಿನ ಅವಶ್ಯಕತೆ ಅಂತೂ ಬಹಳಷ್ಟು ಹೆಚ್ಚಾಗಿದೆ. ಕೃಷಿಯೇತರ ಚಟುವಟಿಕೆಗಳಿಗೆ ನೀರಿನ ಅವಶ್ಯಕತೆ ಬಹಳಷ್ಟು ಇದ್ದು, ನೀರಿದ್ದರೆ ಮಳೆ ಬಂದರೆ ಮಾತ್ರ ಬೆಳೆಯಲ್ಲಿ ಇಳುವರಿ ಯನ್ನು ಪಡೆಯಲು ಸಾಧ್ಯವಾಗುತ್ತದೆ. ಇಂದು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರನ್ನು ಪಡೆಯುವುದಕ್ಕೆ ಸಹ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಇಂತಹ ಸಮಸ್ಯೆಯಿಂದ ಜನರನ್ನು ಹೊರ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಯೇ ಜಲ ಜೀವನ್ ಮಿಷನ್ ಯೋಜನೆ.

ಇದರ ಗುರಿ ಏನು?

ಜಲ ಜೀವನ್ ಮಿಷನ್ ಯೋಜನೆಯು ಹಲವಷ್ಟು ಜನರಿಗೆ ಉಪಯೋಗವಾಗಿದ್ದು 2024ರ ವೇಳೆಗೆ ಗ್ರಾಮೀಣ ಭಾರತದ ಎಲ್ಲಾ ಮನೆಗಳಿಗ ಕುಡಿಯುವ ನೀರನ್ನು ಒದಗಿಸುವ ಗುರಿಯನ್ನು ಸಹ ಹೊಂದಿದೆ. ಈ ಯೋಜನೆಯು ಬಡ ವರ್ಗದ ಜನರ ಮೂಲಭೂತ ಅವಶ್ಯಕತೆಗಳನ್ನು ಕಡ್ಡಾಯವಾಗಿ ರೂಪಿಸಲಿದೆ.

ಸುರಕ್ಷಿತ ಸಮರ್ಪಕ ನೀರಿನ ವ್ಯವಸ್ಥೆ

ಜಲ ಜೀವನ್ ಮಿಷನ್ ಯೋಜನೆಯ ಮುಖ್ಯ ಗುರಿಯು ಗಾಮೀಣ ಭಾರತದ ಪ್ರತಿಯೊಂದು ಮನೆಗೂ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರನ್ನು ಒದಗಿಸುವ ಗುರಿಯನ್ನು ಸಹ ಹೊಂದಿದೆ. ಪ್ರತಿ ವ್ಯಕ್ತಿಗೆ ದಿನಕ್ಕೆ, 55 ಲೀಟರ್ ನೀರು ಪೂರೈಕೆಯ ಗುರಿಯನ್ನು ನಿಗದಿ ಪಡಿಸಿದೆ.

ಮೀಸಲಿಟ್ಟಿದೆ
ಜಲಜೀವನ್ ಮಿಷನ್ ಯೋಜನೆಗೆ ಕರ್ನಾಟಕ ಹೆಚ್ಚಿನ ಪಾಲು ನೀಡಲಿದೆ. ಈ ಯೋಜನೆಗೆ ನಿಗದಿಪಡಿಸಿದ 73,434 ಕೋಟಿ ರೂ. ಮೊತ್ತದಲ್ಲಿ ಕೇಂದ್ರದ ಪಾಲು 33,248 ಕೋಟಿ ರೂ.ಗಳಷ್ಟಿದ್ದರೆ, ರಾಜ್ಯ ಸರ್ಕಾರದ 40,186 ಕೋಟಿ ರೂ. ಇರಲಿದೆ.ಇಂದಿಗೂ ದೇಶದ ಹಲವು ಕಡೆಗಳಲ್ಲಿ ಪ್ರತಿ ಹನಿ ನೀರಿಗಾಗಿ ಬೇರೆ ಕಡೆ ಸಾಗಬೇಕಿದೆ.

ಮಹಿಳೆಯರು ನೀರಿಗಾಗಿ ಮೈಲುಗಟ್ಟಲೆ ನಡೆಯಬೇಕಾದ ಅನಿವಾರ್ಯ ಸಹ ಎದುರಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸುವುದು ಜಲ ಜೀವನ್ ಮಿಷನ್‌ನ ಮುಖ್ಯ ಗುರಿಯಾಗಿದೆ. ಇನ್ನು ಸರ್ಕಾರವು ಗ್ರಾಮ ಪಂಚಾಯಿತಿಗಳಿಗೆ ವಿಶೇಷವಾಗಿ ನೀರು ಮತ್ತು ನೈರ್ಮಲ್ಯಕ್ಕಾಗಿ 2.25 ಲಕ್ಷ ಕೋಟಿಗೂ ಹೆಚ್ಚು ಮೊತ್ತವನ್ನು ನಿಗದಿ ಪಡಿಸಿದೆ.

ಮೊಬೈಲ್ ಅಪ್ಲಿಕೇಶನ್

ಇನ್ನೂ ಜಲ ಜೀವನ್‌ ಮಿಷನ್‌ಗೆ ಅನುಗುಣವಾಗಿ ಮೊಬೈಲ್‌ ಅಪ್ಲಿಕೇಷನ್‌ಗೆ ಸಂಬಂಧ ಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ 2021ರ ಅಕ್ಟೋಬರ್‌ನಲ್ಲಿ ಚಾಲನೆ ನೀಡಿದ್ದಾರೆ. ಇದುವರೆಗೆ ಒಟ್ಟು 3.27 ಕೋಟಿ ಗ್ರಾಮೀಣ ಕುಟುಂಬಗಳಿಗೆ ನೀರಿನ ಸಂಪರ್ಕ ಒದಗಿಸಲಾಗಿದ್ದು, ಜಲ್‌ ಜೀವನ್‌ ಮಿಷನ್‌ ಮೊಬೈಲ್‌ ಅಪ್ಲಿಕೇಷನ್‌ನಲ್ಲಿ ಕುಡಿಯುವ ನೀರು ಸರಬರಾಜು ಹಾಗೂ ಮೂಲಸೌಕರ್ಯದ ಕುರಿತ ಮಾಹಿತಿ ಇದ್ದು, ಇದರ ಮೂಲಕ ಮಾಹಿತಿ ಪಡೆದು ಕೊಳ್ಳಬಹುದಾಗಿದೆ. ಗ್ರಾಹಕರು ಆಧಾರ್‌ ಸಂಖ್ಯೆ ಮೂಲಕ ಆ್ಯಪ್‌ಗೆ ನೋಂದಣಿ ಮಾಡಿಕೊಂಡು, ತಾವು ಕುಡಿಯುತ್ತಿರುವ ನೀರಿನ ಬಗ್ಗೆ, ಎಲ್ಲಿಂದ ನೀರು ಸರಬರಾಜು ಇತ್ಯಾದಿ ಮಾಹಿತಿ ಪಡೆಯಬಹುದು.

 

LEAVE A REPLY

Please enter your comment!
Please enter your name here