Home ಸರಕಾರಿ ಯೋಜನೆಗಳು ರಾಜ್ಯ ಸರಕಾರ ಸರಕಾರಿ ಬಸ್ ನ ಚಾಲಕರು ಮೃತರಾದರೆ ಕುಟುಂಬಕ್ಕೆ 1ಕೋಟಿ ರೂ. ಪರಿಹಾರ ಘೋಷಣೆ

ಸರಕಾರಿ ಬಸ್ ನ ಚಾಲಕರು ಮೃತರಾದರೆ ಕುಟುಂಬಕ್ಕೆ 1ಕೋಟಿ ರೂ. ಪರಿಹಾರ ಘೋಷಣೆ

0
ಸರಕಾರಿ ಬಸ್ ನ ಚಾಲಕರು ಮೃತರಾದರೆ ಕುಟುಂಬಕ್ಕೆ 1ಕೋಟಿ ರೂ. ಪರಿಹಾರ ಘೋಷಣೆ

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಬಹಳ ಸುದ್ದಿಯಲ್ಲಿರುವ ಯೋಜನೆ ಶಕ್ತಿ ಯೋಜನೆ ಕೂಡ ಆಗಿದೆ. ಮಹಿಳೆಯರು ಈ ಶಕ್ತಿ ಯೋಜನೆಯನ್ನು ಬಹಳಷ್ಟು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಶಕ್ತಿ ಯೋಜನೆ ಮೂಲಕ ರಾಜ್ಯದಲ್ಲಿ ಬಸ್ ಸಂಚಾರ ಸರಕಾರಿ ಬಸ್ ರಷ್ ಆಗಿದ್ದು ಮಹಿಳೆಯರು ಹೆಚ್ಚು ಪ್ರಯಾಣ ಮಾಡುವಂತಾಗಿದೆ.ಈ ಯೋಜನೆಯ ಮುಖ್ಯ ರುವಾರಿಗಳು ಚಾಲಕರೆಂದೇ ಹೇಳಬಹುದು.

ಶಕ್ತಿ ಯೋಜನೆ ಬಂದ್ ಇಲ್ಲ

ಈಗಾಗಲೇ ಖಾಸಗಿ ಬಸ್ ನಲ್ಲಿ ಪ್ರಯಾಣಿಕರು ಇಲ್ಲ ಎಂಬ ಕಾರಣಕ್ಕೆ ಖಾಸಗಿ ಬಸ್ ಗಳು ಸ್ಟ್ರೈಕ್ ಮಾಡಿದ್ದವು. ಆದರೂ ಈ ಬಗ್ಗೆ ಮಾತನಾಡಿದ ಸಾರಿಗೆ ಸಚಿವರು ಯಾವುದೇ ಕಾರಣಕ್ಕೂ ಶಕ್ತಿ ಯೋಜನೆ ಬಂದ್ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದರು. ಇನ್ನೂ ಬೆಂಗಳೂರಿನ BMTC ಅವರಿಗೆ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಚಲಾಕರಿಗೆ ಸಿಗುವ ಸೌಲಭ್ಯ ದ ಬಗ್ಗೆ ಅವರು ಬಹಿರಂಗವಾಗಿ ಮಾತಾಡಿದ್ದಾರೆ.

ಅಪಘಾತ ವಿಮೆ
ಕರ್ನಾಟಕ ರಸ್ತೆ ಸಾರಿಗೆ ನೌಕರರಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ನೀಡಿದ್ದು KSRTC ನೌಕರರಿಗೆ ಅಪಘಾತ ವಿಮೆಯನ್ನು BMTCಗೂ ಕೂಡ ವಿಸ್ತರಣೆ ಮಾಡಿದ್ದು ಚಾಲಕರ ರಕ್ಷಣೆ ಕೂಡ ಬಹಳ ಮುಖ್ಯವಾಗುತ್ತದೆ. ಒಂದು ವೇಳೆ BMTC ಚಾಲಕ ಅಪಘಾತದಿಂದ ಮರಣ ಹೊಂದಿದ್ದರೆ ಅವರ ಕುಟುಂಬಕ್ಕೆ ಒಂದು ಕೋಟಿ ರೂ. ಅಪಘಾತ ವಿಮಾ ಮೊತ್ತ ಪಡೆಯಬಹುದು ಎಂದರು.ಅಷ್ಟೆ ಅಲ್ಲದೆ ಅನುಕಂಪದ ಆಧಾರದ ಮೇಲೆ ಅಪಘಾತ ಹೊಂದಿದ್ದ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ಉದ್ಯೋಗ ಮಾಡಿಕೊಡಲು ಅವಕಾಶ ಕೂಡ ಇದೆ.

ಹೀಗಾಗಿ ಸರಕಾರಿ ಬಸ್ ಚಾಲಕರ ಕುಟುಂಬಕ್ಕೆ ಆರ್ಥಿಕ ನಿರ್ವಹಣೆ ಮತ್ತು ಉದ್ಯೋಗ ವ್ಯವಸ್ಥೆಯನ್ನು ಕಲ್ಪಿಸುವ ಗುರಿಯನ್ನು ಹೊಂದಿದ್ದು, ಮುಂದಿನ ದಿನದಲ್ಲಿ ಬಸ್ ಚಾಲಕರು ಅನೇಕ ರೀತಿಯ ಸೌಲಭ್ಯ ಪಡೆಯಲಿದ್ದಾರೆ. ಅದೇ ರೀತಿ ಬಸ್ ಚಾಲಕರ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸ್ಕಾಲರ್ ಷಿಪ್, ಹಾಗೂ ಆರೋಗ್ಯ ಸೇವೆ ಸೌಲಭ್ಯ ವನ್ನು ಒದಗಿಸುವ ಗುರಿಯನ್ನು ಸಹ ಹೊಂದಿದೆ.

ಹೊಸ ಚಾಲಕರ ನೇಮಕ

ಶಕ್ತಿ ಯೋಜನೆಯಿಂದಾಗಿ ಕೆಎಸ್‌ಆರ್‌ಟಿಸಿಯ ಆದಾಯ ಹೆಚ್ಚಾಗಿದೆ. ಹೀಗಾಗಿ ಸೇವೆಯನ್ನು ಇನ್ನಷ್ಟು ಚೆನ್ನಾಗಿ ನೀಡಲು ನಿರ್ಧರಿಸಲಾಗಿದೆ ಎಂದರು.ಹೀಗಾಗಿ ಕೆಎಸ್‌ಆರ್‌ಟಿಸಿಗೆ ಹೊಸದಾಗಿ 4000 ಬಸ್‌ ಖರೀದಿಸಲು ಮತ್ತು 13000 ಚಾಲಕರು, ಕಂಡಕ್ಟರ್‌ಗಳು ಮತ್ತು ಮೆಕ್ಯಾನಿಕ್‌ಗಳನ್ನು ನೇಮಿಸಿಕೊಳ್ಳಲು (KSRTC Recruitment) ನಿರ್ಧರಿಸಿದ್ದು ಅಷ್ಟೆ ಅಲ್ಲದೆ ಚಾಲಕರ ವೇತನ ಹೆಚ್ಚಿಸಲು ಕೂಡ ಸರಕಾರ ಪ್ರಯತ್ನಿಸುತ್ತಿದೆ.

Photo Credit- twitter

 

LEAVE A REPLY

Please enter your comment!
Please enter your name here