Home ಸರಕಾರಿ ಯೋಜನೆಗಳು ರಾಜ್ಯ ಸರಕಾರ ಸರಕಾರಿ ಬಸ್ ನಲ್ಲಿ ಇನ್ಮುಂದೆ ಡಿಜಿಟಲ್ ಪಾವತಿ ಲಭ್ಯ

ಸರಕಾರಿ ಬಸ್ ನಲ್ಲಿ ಇನ್ಮುಂದೆ ಡಿಜಿಟಲ್ ಪಾವತಿ ಲಭ್ಯ

0
ಸರಕಾರಿ ಬಸ್ ನಲ್ಲಿ ಇನ್ಮುಂದೆ ಡಿಜಿಟಲ್ ಪಾವತಿ ಲಭ್ಯ

ಇಂದು ಸರಕಾರಿ ಬಸ್ ನಲ್ಲಿ‌ ಪ್ರಯಾಣ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ವಾಗಿದೆ. ಅದರಲ್ಲೂ ಮಹಿಳೆಯರ ಪ್ರಯಾಣವಂತೂ ಬಹಳಷ್ಟು ಹೆಚ್ಚಳವಾಗಿದೆ. ಡಿಜಿಟಲ್ ಪೆಮೆಂಟ್ ಅಂತೂ ಇಂದು ಮಾಮೂಲಿ ವಿಚಾರವಾಗಿ ಬಿಟ್ಟಿದೆ. ಚಾ ಮಾರುವವನ ಕೈಯಲ್ಲಿಯು ಇಂದು ಗೂಗಲ್ ಪೇ, ಪೋನ್ ಪೇ ಸ್ಕಾನ್ಯರ್ ಇದ್ದೆ ಇದೆ. ಹಣ ಕೈಲಿಟ್ಟು ಪ್ರಯಾಣ ಬೆಳೆಸುವವರು ಕಡಿಮೆ. ಈಗ ಎಲ್ಲದಕ್ಕೂ ಆನ್ಲೈನ್ ಪೇಮೆಂಟ್ (online payments) ಗೆ ಜನ ಒಗ್ಗಿಕೊಂಡಿದ್ದಾರೆ.

ಸಣ್ಣ ಮಟ್ಟಿನ ವಹಿವಾಟು ಗೂ ಡಿಜಿಟಲ್ ವ್ಯವಸ್ಥೆ

ಇಂದು ಸಣ್ಣ ಮಟ್ಟದ ವಹಿವಾಟಿಗೂ ಜನ‌ ಡಿಜಿಟಲ್ ಪಾವತಿಯನ್ನು ಮಾಡುತ್ತಾರೆ. ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡ ಉದ್ದಿಮೆದಾರರವರೆಗೂ ಇಂದು ಪ್ರತೀ ಹಂತದಲ್ಲೂ ಡಿಜಿಟಲ್ ಪೇಮೆಂಟ್ ಇದ್ದದ್ದು ಸಾಮಾನ್ಯವಾಗಿದೆ. ಇದೀಗ ಬಸ್ ಪ್ರಯಾಣಕ್ಕೂ ಡಿಜಿಟಲ್ (Digital) ಸ್ಪರ್ಶ ನೀಡಿದ್ರೆ ಇನ್ನಷ್ಟು ಉತ್ತಮ ಎಂದು ಪ್ರಯಾಣಿಕರು ಹೇಳಿದುಂಟು. ಈಗ ಈ ನಿಟ್ಟಿನಲ್ಲಿ ಒಂದು ಮಹತ್ವದ ಬದಲಾವಣೆ ತರಲು ರಾಜ್ಯ ಸರಕಾರ ತೀರ್ಮಾನ ಕೈಗೊಂಡಿದ್ದು ಈ ಬಗ್ಗೆ ಮಾಹಿತಿ ‌ಇಲ್ಲಿದೆ.

ಯುಪಿಐ ಪೇಮೆಂಟ್

ಬಸ್ ಪ್ರಯಾಣಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ವಾಯುವ್ಯ ಸಾರಿಗೆ ಸಂಸ್ಥೆ ಈ ನಿರ್ಧಾರ ಕೈಗೊಂಡಿದ್ದು, ಬಸ್ ಪ್ರಯಾಣಿಕರಿಗೆ ಅನೂಕೂಲ ಆಗುವ ನಿಟ್ಟಿನಲ್ಲಿ UPI ಪೇಮೆಂಟ್ ಅನ್ನು ಸಾರಿಗೆ ವ್ಯವಸ್ಥೆಯಲ್ಲಿ ಅನುಸರಿಸಲು ಸಾರಿಗೆ ಇಲಾಖೆ ನಿರ್ಧಾರ ತೆಗೆದು ಕೊಂಡಿದೆ. ಈ ಮೂಲಕ ಡಿಜಿಟಲ್ ಪೇಮೆಂಟ್ ಬಸ್ ನಲ್ಲಿ ಬಳಕೆಯಾಗುವ ಮೂಲಕ ಪ್ರಯಾಣಿಕರಿಗೆ ಬಹಳಷ್ಟು ಉಪಯುಕ್ತವಾಗಲಿದೆ.

ಸರಳ ಪೇಮೆಂಟ್

ಹೀಗೆ ಮಾಡುವುದರಿಂದ ಕಂಡೆಕ್ಟರ್ ಕೆಲಸ ನಿರ್ವಹಣೆಯಲ್ಲಿ ಕಡಿಮೆಯಾಗಲಿದ್ದು ಜನರು ಡಿಜಿಟಲ್ ಪಾವತಿ ಮೂಲಕ ಪ್ರಯಾಣ ಮಾಡಬಹುದಾಗಿದೆ. ಸದ್ಯ ಈ ವ್ಯವಸ್ಥೆ ಬಗ್ಗೆ ವಾಯುವ್ಯ ಸಾರಿಗೆ ಮಾತ್ರ ಚಿಂತನೆ ನಡೆಸಿದ್ದು ಯಶಸ್ವಿಯಾದರೆ BMTC ಮತ್ತು KSRTC ಗೆ ಇದೇ ಯೋಜನೆ ವಿಸ್ತಾರ ಗೊಳ್ಳುವ ಸಾಧ್ಯತೆ ಕೂಡ ಇದೆ ಎನ್ನಬಹುದು.ಜನರಿಗೂ ಇದರಿಂದ ಉಪಯೋಗವಾಗಬಹುದು.

ವಾಟ್ಸ್ ಆ್ಯಪ್ ನಲ್ಲೂ ಹಣ ಪಾವತಿ

ಇಂದು ಹೆಚ್ಚಿನ ಜನರು ವಾಟ್ಸ್ ಆ್ಯಪ್ ಬಳಸಿಯೇ ಬಳಸುತ್ತಾರೆ.ಇಂದು ವಾಟ್ಸ್ ಆ್ಯಪ್ ಮೂಲಕವು ಹಣ ಪಾವತಿ ಮಾಡುವ ಅವಕಾಶ ಗಳಿದ್ದು, ಇದರಲ್ಲಿಯು ಹಣ ಪಾವತಿ ಮಾಡಬಹುದಾಗಿದೆ. ಒಟ್ಟಿನಲ್ಲಿ ಡಿಜಿಟಲ್ ಪಾವತಿಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಹೆಚ್ಚಿನ ಓತ್ತು‌ ನೀಡಿದೆ ಎಂದು ಹೇಳಬಹುದು.

 

LEAVE A REPLY

Please enter your comment!
Please enter your name here