
ಯುವಕರು ಈ ದೇಶದ ಮುಖ್ಯ ಅಂಗ ಎಂದೇ ಹೇಳಬಹುದು. ಹಾಗಾಗಿ ಯುವಕರಿಗೆ ಸರಿಯಾದ ಉದ್ಯೋಗ ದೊರಕುವುದು ಕೂಡ ಬಹಳ ಮುಖ್ಯವಾಗುತ್ತದೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದು ಹಲವು ಯೋಜನೆಗಳನ್ನು ಯುವಕರು ಬಳಸಿಕೊಳ್ಳುತ್ತಿದ್ದಾರೆ.
ಈ ಯೋಜನೆಗಳು ಇವೆ
ಪ್ರಧಾನ ಮಂತ್ರಿ ರೋಜ್ ಗಾರ್ ಯೋಜನೆ
ಯುವಕರಿಗಾಗಿ ಪ್ರಧಾನ್ ಮಂತ್ರಿ ರೋಜ್ಗಾರ್ ಯೋಜನೆ ಇದ್ದು, ಇದು ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಅವಕಾಶಗಳನ್ನು ಒದಗಿಸುವ ಗುರಿಯನ್ನು ಸಹ ಹೊಂದಿದೆ.
ಸ್ಕಿಲ್ ಇಂಡಿಯಾ
ಅದೇ ರೀತಿ ಯುವಕರಿಗೆ ಉದ್ಯೋಗ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸ್ಕಿಲ್ ಇಂಡಿಯಾ ಯೋಜನೆಯನ್ನು ಆರಂಭಿಸಿದೆ. ಈ ಅಭಿಯಾನವನ್ನು ಈಗಾಗಲೇ ದೇಶದ ವಿವಿಧ ನಗರಗಳು ಮತ್ತು ಹಳ್ಳಿಗಳಲ್ಲಿ ಆರಂಭಿಸಲಾಗಿದ್ದು ಗ್ರಾಮೀಣ ವಿದ್ಯಾರ್ಥಿಗಳು ಕೂಡ ಸಹ ಕಾಲಕ್ಕೆ ತಕ್ಕಂತೆ ಬದಲಾಗಲು ಅವಕಾಶ ಇದೆ.
ಸ್ಮಾರ್ಟ್ ಆ್ಯಪ್ ಇಂಡಿಯಾ ಯೋಜನೆ
ಈ ಯೋಜನೆಯ ಮೂಲಕ ದೇಶದಲ್ಲಿ ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಮೂಲ ಸೌಕರ್ಯವನ್ನು ಒದಗಿಸುವ ಮೂಲಕ ಕೃಷಿ ಉದ್ಯಾಮಶೀಲತೆ ಮತ್ತು ಕೃಷಿ ವ್ಯಾವಹಾರಿಕ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದು ಅಲ್ಪ ಮಟ್ಟದ ಹಣಕಾಸಿನ ನೆರವನ್ನು ಸಹ ನೀಡುತ್ತದೆ. ಸ್ಟಾರ್ಟ್ಅಪ್ಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಧನಸಹಾಯ, ಮಾರ್ಗದರ್ಶನ ಇತ್ಯಾದಿ ಅವಕಾಶಗಳು ಇದರಲ್ಲಿದ್ದು ಕೇಂದ್ರ ಸರ್ಕಾರವು ಸ್ಟಾರ್ಟ್ಅಪ್ ಇಂಡಿಯಾ ಯೋಜನೆಯನ್ನು ಆರಂಭ ಮಾಡಿದೆ. ಇದು ಉದ್ಯಮಶೀಲತೆ ಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು ಈ ಯೋಜನೆ ಬಹಳಷ್ಟು ಉಪಯೋಗವಾಗಲಿದೆ. ಇದರ ಮೂಲಕ ಸ್ವ ಉದ್ಯೋಗ ಕೂಡ ನೀಡಲಾಗುತ್ತದೆ.
ಡಿಜಿಟಲ್ ಮೇಕ್ ಇಂಡಿಯಾ
ಕೇಂದ್ರ ಸರ್ಕಾರವು ಡಿಜಿಟಲ್ ಇಂಡಿಯಾ ಮೇಕ್ ಇನ್ ಇಂಡಿಯಾ ದಂತಹ ಅನೇಕ ಯೋಜನೆಗಳನ್ನು ಆರಂಭಿಸಿದ್ದು, ಸ್ವಯಂ ಉದ್ಯೋಗ ಕೈಗೊಳ್ಳುವಂತೆ ಮಾರ್ಗದರ್ಶನ ನೀಡಿ, ಇದು ಗ್ರಾಮೀಣ ನಿರುದ್ಯೋಗಿಗಳಲ್ಲಿ ಆಶಾ ಕಿರಣ ಮೂಡಿಸುವಂತಿದೆ.
ಪ್ರಧಾನ ಮಂತ್ರಿ ವಿಕಾಸ ಯೋಜನೆ
ಅದೇ ರೀತಿ ಮುಂದಿನ ಮೂರು ವರ್ಷಗಳಲ್ಲಿ ಲಕ್ಷಾಂತರ ಯುವಕರಿಗೆ ಕೌಶಲ್ಯ ತರಭೇತಿ, ಉದ್ಯೋಗ ನೀಡಲು ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ ಪ್ರಾರಂಭಿಸಲಿದ್ದು ಈ ಯೋಜನೆಯು ಉದ್ಯೋಗ ತರಬೇತಿ, ಮತ್ತು ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ಕೋರ್ಸ್ ಗಳನ್ನು ನೀಡುತ್ತದೆ.
