Home ಸರಕಾರಿ ಯೋಜನೆಗಳು ಕೇಂದ್ರ ಸರಕಾರ ನಿಮ್ಮ ಆಧಾರ್ ಲಿಂಕ್ ಮಾಡದಿದ್ದರೆ ಅಂಚೆ ಮತ್ತು ಬ್ಯಾಂಕ್ ಖಾತೆ ನಿಷ್ಕ್ರಿಯ

ನಿಮ್ಮ ಆಧಾರ್ ಲಿಂಕ್ ಮಾಡದಿದ್ದರೆ ಅಂಚೆ ಮತ್ತು ಬ್ಯಾಂಕ್ ಖಾತೆ ನಿಷ್ಕ್ರಿಯ

0
ನಿಮ್ಮ ಆಧಾರ್ ಲಿಂಕ್ ಮಾಡದಿದ್ದರೆ ಅಂಚೆ ಮತ್ತು ಬ್ಯಾಂಕ್ ಖಾತೆ ನಿಷ್ಕ್ರಿಯ

ಇಂದು ಆಧಾರ್ ಕಾರ್ಡ್ ಅನ್ನೋದು ಬಹು ಮುಖ್ಯವಾದ ದಾಖಲೆಯಾಗಿದ್ದು ಯಾವುದೇ ಪುರಾವೆಗೂ ಆಧಾರ್ ಕಾರ್ಡ್ ಬೇಕೆ ಬೇಕು. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಸರಕಾರದ ಸೌಲಭ್ಯ ಗಳನ್ನು ಸಹ ಪಡೆಯಲು ಸಾಧ್ಯವಿಲ್ಲ. ಭಾರತೀಯ ಎಲ್ಲ ಸೌಲಭ್ಯ ಗನ್ನು ಪಡೆಯಲು ಹಾಗೂ ಯೋಜನೆಯ ಫಲ ಪಡೆಯಲು ಕೂಡ ಆಧಾರ್ ಕಾರ್ಡ್ ಅನ್ನು ಕಡ್ಡಾಯ ಮಾಡಲಾಗಿದ್ದು ನಿಮ್ಮ‌ದಾಖಲಾತಿ ಸರಿ ಇಲ್ಲ ದಿದ್ದರೆ ಸರಿಪಡಿಸುವುದು ಕೂಡ ಅಷ್ಟೆ ಮುಖ್ಯ ವಾಗುತ್ತದೆ. ಈಗಾಗಲೇ ತಮ್ಮ ಬ್ಯಾಂಕ್ ರೇಶನ್ ಇನ್ನಿತರ ಅಗತ್ಯ ದಾಖಲೆಯ ಜೊತೆ ಆಧಾರ್ ಜೋಡಣೆ ಮಾಡುವುದು ಇಂದು ಕಡ್ಡಾಯ ಮಾಡಿದ್ದು ಆಧಾರ್ ಲಿಂಕ್ ಮಾಡದೇ ಇದ್ದಲ್ಲಿ ಸರಕಾರದ ಯಾವುದೇ ಸೌಲಭ್ಯ ನಿಮಗೆ ಸಿಗುವುದಿಲ್ಲ.

ಪಿಂಚಣಿ ಹಣ ಪಡೆಯಲು ಕೂಡ ಮುಖ್ಯ

ಹಿರಿಯ ನಾಗರಿಕರಿಗೆ ಸಿಗುವ ಉಳಿತಾಯ ಯೋಜನೆ, ಭವಿಷ್ಯ ನಿಧಿ ಫಂಡ್, ಸಣ್ಣ ಉಳಿತಾಯಹಣ, ಕಿಸಾನ್ ಮೊತ್ತ, ಇನ್ನಿತರ ಯಾವುದೇ ಯೋಜನೆಗೆ ಹಣ ಇಟ್ಟವರು ಆಧಾರ್ ಕಾರ್ಡಿನ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡುವುದು ಮುಖ್ಯ. ಇದು ಬ್ಯಾಂಕ್ ಮಾತ್ರವಲ್ಲದೇ ಅಂಚೆ ಕಚೇರಿಗೂ ಸಹ ನಿಯಮ ಅನ್ವಯ ಆಗಲಿದ್ದು ಹಾಗಾಗಿ ಆಧಾರ್ ಜೋಡಣೆ ಮಾಡಲು ಈಗಾಗಲೇ ಸರಕಾರ ಮಾಹಿತಿ ನೀಡಿದೆ

ಅಧಿಸೂಚನೆ ಹೊರಡಿಸಿದೆ
ಆಧಾರ್ ಕಾರ್ಡ್ ಲಿಂಕ್ ಮಾಡುವ ಬಗ್ಗೆ ಅಧಿಕೃತ ಅಧಿಸೂಚನೆಯನ್ನು ನೀಡಿದ್ದು, ಸಾರ್ವಜನಿಕ ಭವಿಷ್ಯ ನಿಧಿ PPF, ಹಾಗೂ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರಕ್ಕೆ ಆಧಾರ್ ಜೋಡಣೆ ಕಡ್ಡಾಯ ಮಾಡಲಾಗಿತ್ತು ನೀಡಿರುವ ಅವಧಿ ಯೊಳಗೆ ಲಿಂಕ್ ಮಾಡದೇ ಇದ್ದಲ್ಲಿ ಖಾತೆಗಳಿಗೆ ಹಣ ಜಮೆ ಮಾಡಲು ಸಾಧ್ಯವಿಲ್ಲ ಅನ್ನಲಾಗಿದೆ.

ಪ್ಯಾನ್ ಕಾರ್ಡ್ ಗೂ ಮುಖ್ಯ

ತಮ್ಮ ಖಾತೆಯ ಸಂಖ್ಯೆಗೆ ಪಾನ್ ಕಾರ್ಡ್ ಲಿಂಕ್ ಮಾಡುವುದು ಸಹ ಕಡ್ಡಾಯ ಮಾಡಲಾಗಿದ್ದು ಎರಡು ತಿಂಗಳ ಒಳಗೆ ಲಿಂಕ್ ಮಾಡುವುದು ಸಹ ಕಡ್ಡಾಯವಾಗಿದೆ.

ಗೃಹಲಕ್ಷ್ಮಿ ಹಣ ಪಡೆಯಲು ಮುಖ್ಯ

ಇಂದು ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಗಳಿಗೂ ತಮ್ಮ ಖಾತೆಗಳಿಗೆ ಆಧಾರ್ ಕಾರ್ಡ್ ಅನ್ನು‌ಲಿಂಕ್ ಮಾಡುವುದು ಸಹ ಮುಖ್ಯವಾಗುತ್ತದೆ. ಹಾಗಿದ್ದಲ್ಲಿ ಮಾತ್ರ ಮಹಿಳಾ ಫಲಾನುಭವಿಗಳಿಗೆ ಹಣ ಜಮೆಯಾಗುತ್ತದೆ.

Photo credit – pixabay

 

LEAVE A REPLY

Please enter your comment!
Please enter your name here