
ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ (Guarantee scheme) ಗೃಹಜ್ಯೋತಿ ಯೋಜನೆ (Gruha Jyothi Scheme) ಕೂಡ ಅನುಷ್ಠಾನಕ್ಕೆ ಬಂದಿದ್ದು ಹೆಚ್ಚಿನ ಜನತೆಯ ಬೇಡಿಕೆ ಈ ಯೋಜನೆಗೆ ಇದೆ. ಅರ್ಹ ಫಲಾನುಭವಿಗಳು ಈಗಾಗಲೇ ಶೂನ್ಯ ಬಿಲ್ ಪಡೆದಿದ್ದಾರೆ. ರಾಜ್ಯ ಸರಕಾರದ ಮುಖ್ಯ ಯೋಜನೆಯಲ್ಲಿ ಇದು ಒಂದಾಗಿದ್ದು, ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಗೆ ರಾಜ್ಯದಾದ್ಯಂತ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಹಲವಾರು ಜನರು ಈ ಸೌಲಭ್ಯಕ್ಕೆ ನೋಂದಾಯಿಸಿಕೊಂಡಿದ್ದಾರೆ.ಅದೇ ರೀತಿ ಇನ್ಮುಂದೆ ದೇವಾಲಯ ಗಳಿಗೂ ಈ ಯೋಜನೆಯ ಭಾಗ್ಯ ದೊರಕಲಿದೆ.
ಇನ್ನು ಅವಕಾಶ ಇದೆ
ಇನ್ನು ಗೃಹ ಜ್ಯೋತಿ ಯೋಜನೆಗೆ ಇನ್ನು ಕೂಡ ಸೇವಾ ಸಿಂಧು ಪೋರ್ಟಲ್ ಜತೆಗೆ, ಇಂಟರ್ನೆಟ್ ಕೇಂದ್ರಗಳಲ್ಲೂ ನೋಂದಣಿ ಮಾಡಬಹುದಾಗಿದ್ದು ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ನೊಂದಣಿ ಮಾಡಬಹುದಾಗಿದೆ.ಗೃಹ ಜ್ಯೋತಿಗೆ ಅರ್ಜಿ ಸಲ್ಲಿಕೆ ಮಾಡಲು ಯಾವುದೇ ದಿನಾಂಕ ವನ್ನು ನಿಗದಿಪಡಿಸಿಲ್ಲ.
ದೇವಾಲಯಗಳಿಗೂ ಉಚಿತ ವಿದ್ಯುತ್
ಇದೀಗ ಪ್ರತಿ ಮನೆಗೂ ಅಲ್ಲದೆ 200 ಯೂನಿಟ್ಗಳ ವರೆಗೆ ಉಚಿತ ವಿದ್ಯುತ್ ನೀಡುದಲ್ಲದೆ ದೇವಾಲಯಗಳಿಗೂ ಉಚಿತ ವಿದ್ಯುತ್ ವಿಸ್ತರಿಸಲಿದೆ. ಗೃಹ ಜ್ಯೋತಿ ಯೋಜನೆ ಮೂಲಕ ಎಲ್ಲಾ ದೇವಾಲಯಗಳಿಗೆ ಉಚಿತ ವಿದ್ಯುತ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.ಕರ್ನಾಟಕದಲ್ಲಿರುವ ಸಿ ವರ್ಗದ ದೇವಸ್ಥಾನಗಳಿಗೆ ಈ ಯೋಜನೆ ಅನ್ವಯವಾಗಲಿದೆ ರಾಮಲಿಂಗಾರೆಡ್ಡಿ ಹೇಳಿದ್ದಾರೆ.ಕೆಲವೊಂದಿಷ್ಡು ದೇವಲಯ ದಲ್ಲಿ ಆದಾಯ ಹೆಚ್ಚಿಲ್ಲ. ದೇವಸ್ಥಾನಗಳಲ್ಲಿ ಮೂಲ ಸೌಕರ್ಯಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದು ದೇವಾಲಯಗಳಲ್ಲಿಯು ಇನ್ಮುಂದೆ ಗೃಹ ಜ್ಯೋತಿ ಯೋಜನೆ ಜಾರಿಗೆ ಬರಲಿದೆ.
ಇವರು ಅರ್ಹರಲ್ಲ
ರಾಜ್ಯಾದ್ಯಂತ ಸುಮಾರು 1.40 ಕೋಟಿಗೂ ಹೆಚ್ಚು ಗ್ರಾಹಕರು ಗೃಹ ಜ್ಯೋತಿ ಯೊಜನೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇನ್ನೂ ಗೃಹ ವಿದ್ಯುತ್ ಸಂಪರ್ಕ ಹೊಂದಿರುವ ಕರ್ನಾಟಕದ ಖಾಯಂ ನಿವಾಸಿಗಳು ಗೃಹ ಜ್ಯೋತಿ ಯೋಜನೆ ಮೂಲಕ ಉಚಿತ ವಿದ್ಯುತ್ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಯಾವುದೇ ಕುಟುಂಬವು ತಿಂಗಳಿಗೆ 200 ಯೂನಿಟ್ಗಳಿಗಿಂತ ಹೆಚ್ಚು ವಿದ್ಯುತ್ ಬಳಸುತ್ತಿದ್ದರೆ ಹೆಚ್ಚುವರಿ ವಿದ್ಯುತ್ ಬಿಲ್ ಅನ್ನು ಪಾವತಿ ಮಾಡಬೇಕಾಗುತ್ತದೆ.
