
ಇಂದು ಪ್ರತಿಯೊಬ್ಬ ವ್ಯಕ್ತಿಗೂ ಕೆಲಸ ಅನ್ನೋದು ಬಹಳ ಮುಖ್ಯವಾಗುತ್ತದೆ. ಸರಿಯಾದ ಉದ್ಯೋಗ ಇದ್ದರೆ ಮಾತ್ರ ಬದುಕು ಸಾಗಿಸಲು ಸಾಧ್ಯ. ಮುಖ್ಯವಾಗಿ ಏನಾದರೂ ಬ್ಯುಸ್ ನೆಸ್ ಮಾಡಬೇಕು ಎಂಬ ಕನಸು ಎಲ್ಲರಿಗೂ ಇದ್ದೆ ಇರುತ್ತದೆ.ಇಂದು ಸಣ್ಣ ಮತ್ತು ಮಧ್ಯಮ ಹಂತದ ಕೈಗಾರಿಕೆಗಳಿಗೆ ಮೊದಲಿಂದಲೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಹಳಷ್ಟು ಸಂಪೊರ್ಟ್ ನೀಡುತ್ತಲೇ ಬಂದಿದೆ. ಸ್ವಂ ಉದ್ಯೋಗಕ್ಕಾಗಿ ಸಹಾಯಧನ, ತರಬೇತಿ, ಸಾಲ ಸೌಲಭ್ಯದ ಜೊತೆಗೆ ಸಹಕಾರ ಕೂಡ ನೀಡ್ತಾ ಇದೆ. ಇದೀಗ ಸ್ಮಾರ್ಟ್ ಆ್ಯಪ್ ಅಭಿಯಾನದ ಮೂಲಕ ಯುವಕರಿಗಾಗಿ ಹೊಸ ಯೋಜನೆಯನ್ನು ಆರಂಭಿಸಿದೆ.
ಉದ್ಯಮ ಕ್ಷೇತ್ರ ಅಭಿವೃದ್ದಿ
2015ರಲ್ಲಿ ಸ್ಟಾರ್ಟ್ ಆ್ಯಪ್ ಜಾರಿಗೆ ತಂದಿದ್ದು, ಈ ಅಭಿಯಾನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಸಣ್ಣ ಉದ್ಯಮ ಕ್ಷೇತ್ರ ಬೆಳವಣಿಗೆಗೆ ಈಗಾಗಲೇ ಅಧಿಕ ಮಾನ್ಯತೆ ನೀಡಿದ್ದು, ಸ್ಟಾರ್ಟ್ ಅಪ್ ಮತ್ತು ಹೊಸ ವ್ಯವಹಾರಗಳಿಗೆ ಹೆಚ್ಚಿನ ಪ್ರೋತ್ಸಾಹ ಇದರ ಮೂಲಕ ನೀಡಲಾಗುತ್ತದೆ. ಇದರಿಂದಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಾಕಷ್ಟು ಅಭಿವೃದ್ಧಿ ಕಂಡಿದೆ.
ನೂತನ ಯೋಜನೆ
ಸ್ಟಾರ್ಟ್ ಅಪ್ ಇಂಡಿಯಾ ಯೋಜನೆ ಮೂಲಕ ವ್ಯಾಪಾರ ವಾಣಿಜ್ಯ ಕ್ಷೇತ್ರವನ್ನು ಪ್ರೋತ್ಸಾಹಿಸಿ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತದೆ. ಕೇಂದ್ರ ಸರಕಾರ ಈ ಯೋಜನೆ ಮೂಲಕ ಆಕರ್ಷಕ ಬಡ್ಡಿದರದ ಆಫರ್ ಸಹ ನೀಡುತ್ತಲೇ ಬಂದಿದೆ. ಈ ಯೋಜನೆ ಮೂಲಕ SC/ST ವರ್ಗದ ಅಡಿಯಲ್ಲಿ ಮಹಿಳೆಯರಿಗೆ ಮತ್ತು ಬಡ ವರ್ಗದ ಜನರಿಗೆ ಹಣಕಾಸಿನ ಸೌಲಭ್ಯ ನೀಡಲಾಗುತ್ತಿದೆ.
ಮುದ್ರಾ ಸಾಲ ಯೋಜನೆ
ಈ ಯೋಜನೆ ಮೂಲಕ ಐದು ವರ್ಷದ ಅವಧಿಗೆ ಹತ್ತು ಲಕ್ಷದಷ್ಟು ಸಾಲ ಸೌಲಭ್ಯ ನೀಡಲಾಗುತ್ತಿದ್ದು,ಕೇಂದ್ರ ಸರ್ಕಾರವು ಈ ಮುದ್ರಾ ಸಾಲ ಯೋಜನೆಯನ್ನು ಏಪ್ರಿಲ್ 2015ರಲ್ಲಿ ಪ್ರಾರಂಭಿಸಿದ್ದು. ಈ ಯೋಜನೆಯಡಿಯಲ್ಲಿ ಹಲವು ರೀತಿಯ ಸಾಲಗಳಿವೆ. ಸರ್ಕಾರವು ಉದ್ಯಮವನ್ನು ಪ್ರಾರಂಭಿಸಲು 50 ಸಾವಿರದಿಂದ 10 ಲಕ್ಷ ರೂ.ವರೆಗೆ ಸಾಲವನ್ನು ನೀಡುತ್ತದೆ. ವೈಯಕ್ತಿಕ ಸಾಲಗಾರನ ಆರ್ಥಿಕ ಸ್ಥಿತಿ, ಸಾಲದ ಮೊತ್ತ ಇತ್ಯಾದಿಗಳನ್ನು ಗಮನಿಸಿಕೊಂಡು ನಂತರ ಸಾಲ ನೀಡಲು ನಿರ್ಧರಿಸಲಾಗುತ್ತದೆ.
