Home ಸರಕಾರಿ ಯೋಜನೆಗಳು ರಾಜ್ಯ ಸರಕಾರ ನವೆಂಬರ್ ತಿಂಗಳ ಅನ್ನಭಾಗ್ಯ ಹಣ ಜಮೆ, ನಿಮಗೂ ಬಂದಿದೆಯೇ? ಚೆಕ್ ಮಾಡಿ

ನವೆಂಬರ್ ತಿಂಗಳ ಅನ್ನಭಾಗ್ಯ ಹಣ ಜಮೆ, ನಿಮಗೂ ಬಂದಿದೆಯೇ? ಚೆಕ್ ಮಾಡಿ

0
ನವೆಂಬರ್ ತಿಂಗಳ ಅನ್ನಭಾಗ್ಯ ಹಣ ಜಮೆ, ನಿಮಗೂ ಬಂದಿದೆಯೇ? ಚೆಕ್ ಮಾಡಿ

ಇಂದು ರೇಷನ್ ಕಾರ್ಡ್ ಇದ್ದರೆ ಹಲವು‌ ರೀತಿಯ ಸೌಲಭ್ಯ ಗಳನ್ನು ನೀವು ಪಡೆಯಬಹುದಾಗಿದೆ. ಬಡತನ ರೇಖೆಗಿಂತ ಕೆಳಗಿದ್ದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿದ್ದ ಕಾರ್ಡು ದಾರರಿಗೆ ಹಲವು ರೀತಿಯ ಸೌಲಭ್ಯ ಗಳು ಇಂದು ದೊರುಕುತ್ತಿವೆ. ಅದರಲ್ಲೂ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಇಂದು ಬಹಳಷ್ಟು ಸುದ್ದಿಯಲ್ಲಿದ್ದು ಇದಕ್ಕೆ ರೇಷನ್ ಕಾರ್ಡ್ ಬಹಳ ಮುಖ್ಯವಾಗಿದೆ.

ಅನ್ನ ಭಾಗ್ಯ ಹಣ

ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆಯ ಮೂಲಕ‌ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ನೀಡಲು ನಿರ್ಧಾರ ಮಾಡಿತ್ತು. ಆದರೆ ಅಕ್ಕಿ ಕೊರತೆಯಿಂದಾಗಿ ಹೆಚ್ಚಿವರಿ ಅಕ್ಕಿಯ ಬದಲಾಗಿ 5 ಕೆಜಿ ಅಕ್ಕಿ ವಿತರಿಸಿ, ಉಳಿದ 5 ಕೆಜಿ ಅಕ್ಕಿಯ ಬದಲಾಗಿ ಪ್ರತಿ ಕೆಜಿಗೆ 34 ರೂ. ದರದಲ್ಲಿ ನಗದನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲು ನಿರ್ಧಾರ ಮಾಡಲಾಯಿತು.

ಹಣ ಜಮೆ

ಬಹುತೇಕ ರೇಷನ್‌ ಕಾರ್ಡ್‌ ದಾರರಿಗೆ (Ration Card) ನವೆಂವರ್ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಜಮೆ (DBT) ಆಗಿದೆ. ಆದರೆ ಬ್ಯಾಂಕ್‌ ಖಾತೆಗೆ ಹಣ ಜಮೆ ಆಗದೇ ಇರೋದಕ್ಕೆ ಕಾರಣವಾಗಿರೋದು ಕೆವೈಸಿ ಸಮಸ್ಯೆ (KYC) ಮಾಡದೇ ಇರುವುದು ಮುಖ್ಯ ಕಾರಣವಾಗಿದೆ. ಕೆಲವರು ಬ್ಯಾಂಕ್ ಖಾತೆ ಸರಿ ಮಾಡಿಸಿಕೊಂಡಿದ್ದರೂ ಆಧಾರ್ ಲಿಂಕ್ ಆಗದ ಕಾರಣ ಡಿಬಿಟಿ ಮೂಲಕ ನೇರ ನಗದು ವರ್ಗಾವಣೆ ಸಾಧ್ಯವಾಗಿಲ್ಲ ಎಂದು ಆಹಾರ ಇಲಾಖೆ ಅಧಿಕಾರಿಗಳ ಪರಿಶೀಲನೆ ವೇಳೆ ತಿಳಿದು ಬಂದಿದೆ.

ಪರಿಶೀಲನೆ ಮಾಡಬಹುದು

ಅನ್ನಭಾಗ್ಯ ಹಣವು ಕುಟುಂಬದ ಯಜಮಾನನ ಖಾತೆಗೆ ಬರಲಿದ್ದು ಒಂದು ಕೆಜಿ ಅಕ್ಕಿಗೆ 36 ರೂಪಾಯಿ ಅಂತೆ ತಲಾ ಐದು ಕೆಜಿ ಅಕ್ಕಿಯ ಹಣ ಜಮೆಯಾಗಲಿದೆ. ಅನ್ನಭಾಗ್ಯ ಫಲಾನುಭವಿಗಳು ಅಂಚೆ ಇಲಾಖೆಯಲ್ಲಿಯು ಉಳಿತಾಯ ಖಾತೆ ತೆರೆಯಲು ಅವಕಾಶವಿದ್ದು, https://ahara.kar.nic.in ಈ ಲಿಂಕ್‌ ಮೂಲಕ ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಗೆ ಭೇಟಿ ನೀಡಿ ಅಲ್ಲಿ ಅನ್ನಭಾಗ್ಯ ಹಣ ಬಂದಿದೆಯೋ ಇಲ್ಲವೋ ಎಂದು ಚೆಕ್ ಮಾಡಬಹುದಾಗಿದೆ.

ಈ ದಾಖಲೆ ಸರಿ ಇರಬೇಕು

ನಗರ ಪಾಲಿಕೆಯ ವಾರ್ಡ್ ಸಂಖ್ಯೆ, ಗ್ರಾಮದ ಹೆಸರು, ಮನೆಯ ವಿದ್ಯುತ್ ಬಿಲ್‌,ನಿವಾಸದ ಪೂರ್ಣ ವಿಳಾಸ, ಮನೆಯ ಆಸ್ತಿ ಸಂಖ್ಯೆ ವಿವರ, ನಿಮ್ಮ ಮನೆ ವಿಳಾಸ ಹುಡುಕಲು ಸುಲಭವಾಗುವ ಹತ್ತಿರದ ಸ್ಥಳದ ಗುರುತು. ಕುಟುಂಬದ ಸದಸ್ಯರ ಹೆಸರು, ಅರ್ಜಿದಾರರೊಂದಿಗೆ ಕುಟುಂಬ ಸದಸ್ಯರೆಲ್ಲರ ಹುಟ್ಟಿದ ದಿನಾಂಕ, ವೃತ್ತಿ ಇತ್ಯಾದಿ‌.

 

LEAVE A REPLY

Please enter your comment!
Please enter your name here