
ಭಾರತೀಯ ಗುರುತು ಕಾರ್ಡಿನ ಸಾಲಿನಲ್ಲಿ ಆಧಾರ್ ಕಾರ್ಡ್ ಬಹುಮುಖ್ಯ ಪಾತ್ರ ಪಡೆಯುತ್ತಿದೆ. ಇಂದು ಸರಕಾರಿ ಸೌಲಭ್ಯದಿಂದ ನಾವು ವಾಸಿಸುವ ಸ್ಥಳ ಪುರಾವೆ ವರೆಗೆ ಆಧಾರ್ ಮಾನ್ಯತೆ ಹೊಂದುತ್ತಲೇ ಇದೆ. ಆಧಾರ್ ಕಾರ್ಡ್ ಅನ್ನು ಮೊದಲು ಸರಕಾರಿ ನೋಂದಾಯಿತ ಕಚೇರಿ ಮೂಲಕ ಮಾಡಲಾಗುತ್ತಿತ್ತು ಆದರೆ ಕಾಲ ಕ್ರಮೇಣ ಸರತಿ ನಿಲ್ಲುವ ಪ್ರಮಾಣ ಅಧಿಕವಾಗುತ್ತಿದ್ದಂತೆ ಸಾಮಾನ್ಯ ಜೆರಾಕ್ಸ್ ಅಂಗಡಿಗಳೂ ಕೂಡ ಪೋರ್ಟಲ್ ಸಹಾಯದಿಂದ ಆಧಾರ್ ಕಾರ್ಡ್ ಮಾಡಲು ಅನುಮತಿಸಲಾಗಿದೆ.
ಇದು ಜನಸಾಮಾನ್ಯರಿಗೆ ಬಹಳ ಅನುಕೂಲ ಆಗಿದೆ ಎಂದು ಮೇಲ್ನೋಟಕ್ಕೆ ಅನಿಸಿದ್ದರೂ ಆಧಾರ್ ಅನ್ನೇ ಆಧಾರವಾಗಿಟ್ಟುಕೊಂಡು ಮೋಸ ಮಾಡುವ ವರ್ಗದವರು ಏನು ಅರಿಯದ ಮುಗ್ದರನ್ನು ಗುರಿಯಾಗಿಸಿಕೊಂಡು ಮೋಸದ ಜಾಲ ಹಣೆಯುವ ಪ್ರಮಾಣ ಅಧಿಕವಾಗುತ್ತಿದೆ. ಆಧಾರ್ ಕಾರ್ಡ್ ಮೂಲಕ ನಿಮ್ಮ ಬಯೋ ಮೆಟ್ರಿಕ್ ಮಾಹಿತಿ ಕದ್ದು ವಂಚನೆ ಮಾಡುವ ಪ್ರಕರಣ ಇತ್ತೀಚೆಗೆ ಬಹಳ ಹೆಚ್ಚಾಗುತ್ತಿದ್ದು ಈ ಬಗ್ಗೆ ಎಚ್ಚರಿಕೆ ಕಾಯ್ದಿಟ್ಟುಕೊಳ್ಳುವುದು ಅತ್ಯಗತ್ಯ.
ಪ್ರಯೋಜನ ಏನು?
ಬಯೋಮೆಟ್ರಿಕ್ ಮಾಹಿತಿ ಕದ್ದರೆ ವಂಚಕರಿಗೆ ಏನು ಪ್ರಯೋಜನ ಇದೆ ಎಂಬ ಅಸಡ್ಡೆ ತೋರಬಾರದು. ನಿಮ್ಮ ಬಯೋಮೆಟ್ರಿಕ್ ಮಾಹಿತಿ ಮೂಲಕ ಬ್ಯಾಂಕ್ ಖಾತೆಯಿಂದ ಹಣ ಹಿಂಪಡೆಯುವ ಹಣ ದೋಚುವ ವ್ಯವಹಾರ ನಡೆಯಲಿದೆ ಅಷ್ಟು ಮಾತ್ರವಲ್ಲದೆ ಆನ್ಲೈನ್ ಮೋಸಕ್ಕೆ ನಿಮ್ಮ ಐಡಿಯನ್ನೇ ಫೇಕ್ ಆಗಿ ಬಳಸುವ ಸಾಧ್ಯತೆ ಸಹ ಇದೆ. ಇತ್ತೀಚೆಗಷ್ಟೇ ಈ ತರಹದ ಘಟನೆ ಪದೇ ಪದೇ ಮರುಕಳಿಸುತ್ತಿದ್ದು ಇದರ ಬಗ್ಗೆ ಸರಕಾರ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ.
ಪರಿಹಾರ ಇಲ್ಲಿದೆ?
ಇಂತಹ ಮೋಸದ ಜಾಲದಿಂದ ತಪ್ಪಿಸಿಕೊಳ್ಳಲು ಕೂಡ ಅನೇಕ ಪರಿಹಾರ ಕ್ರಮ ಇದೆ. ನಿಮ್ಮ ಮನೆಯಲ್ಲಿಯೇ ಕೂತು ಬಯೋಮೆಟ್ರಿಕ್ ಫಿಂಗರ್ ಪ್ರಿಂಟ್ ನೊಂದಿಗೆ ನಿಮ್ಮ ಆಧಾರದ ಕಾರ್ಡ್ ಅನ್ನು ಲಾಕ್ ಮಾಡಬಹುದಾಗಿದೆ. ಅದಕ್ಕೆ ಮೊದಲು ನೀವು My Aadhar ಪೋರ್ಟಲ್ ಗೆ ಲಾಗಿನ್ ಆಗಬೇಕು. ಬಳಿಕ ಅದರಲ್ಲಿ ಕಂಟಿನ್ಯೂ ಎಂಬ ಆಪ್ಶನ್ ಕ್ಲಿಕ್ ಮಾಡಬೇಕು. ಬಳಿಕ ಮೈ ಆಧಾರ್ ಒಳಗೆ ಎಂಟರ್ ಪಾಸ್ ವರ್ಡ್ (enter password) ಎಂದು ಕೇಳಲಿದೆ. ಆಗ ನಿಮ್ಮ ಆಧಾರ್ ಕಾರ್ಡ್ ನಂಬರ್ ಮೂಲಕ ಲಾಗಿನ್ ಆಗಿದ್ದಕ್ಕರ ಆಧಾರ್ ಲಿಂಕ್ ಇರುವ ಫೋನ್ ನಂಬರ್ ಗೆ OTP ಬರಲಿದೆ. ಬಳಿಕ ನೀವು ನಿಮ್ಮ ಆಧಾರ್ ಮೂಲಕ ಲಾಗಿನ್ ಆಗುವಿರಿ.
ಬಳಿಕ ಅದರಲ್ಲಿ ನಿಮ್ಮ ಪಿನ್ ಚೇಂಜ್ ಮಾಡುವ ಆಪ್ಶನ್ ಕೇಳಲಿದೆ. ಆಗ ನಿಮ್ಮ ಪಿನ್ ಚೇಂಜ್ ಆಪ್ಶನ್ ಮುಖೇನ ಬಯೋಮೆಟ್ರಿಕ್ ಫಿಂಗರ್ ಪ್ರಿಂಟ್ ನೀಡುವ ಆಪ್ಶನ್ ಸಹ ಬರಲಿದ್ದು ಅಲ್ಲಿ ಸೆಟ್ ಮಾಡಿಟ್ಟರೆ ನಿಮ್ಮ ತಂಬ್ ಇಲ್ಲದೆ ಆಧಾರ್ ಕಾರ್ಡ್ ಅನ್ನು ಅಕ್ರಮವಾಗಿ ಯಾರಿಗೂ ಬಳಸಲು ಸಾಧ್ಯವಾಗಲಾರದು. ಈ ಬಗ್ಗೆ ಸೈಬರ್ ಕ್ರೈಂ ಮೂಲಕ ದೇಶಾದ್ಯಂತ ಮಾಹಿತಿ ನೀಡಲಾಗುತ್ತಿದ್ದು ಎಲ್ಲರೂ ಈ ಬಗ್ಗೆ ಎಚ್ಚೆತ್ತುಕೊಳ್ಳುವುದು ಬಹಳ ಅಗತ್ಯವಾಗಿದೆ.
