Home ಸುದ್ದಿಗಳು ವಾಟ್ಸ್ ಆ್ಯಪ್ ನಲ್ಲಿ‌ ಆಕ್ಷೇಪಾರ್ಹ ಸಂದೇಶ ಗಳನ್ನು ಇನ್ಮುಂದೆ ಕಳುಹಿಸುವಾಗಿಲ್ಲ

ವಾಟ್ಸ್ ಆ್ಯಪ್ ನಲ್ಲಿ‌ ಆಕ್ಷೇಪಾರ್ಹ ಸಂದೇಶ ಗಳನ್ನು ಇನ್ಮುಂದೆ ಕಳುಹಿಸುವಾಗಿಲ್ಲ

0
ವಾಟ್ಸ್ ಆ್ಯಪ್ ನಲ್ಲಿ‌ ಆಕ್ಷೇಪಾರ್ಹ ಸಂದೇಶ ಗಳನ್ನು ಇನ್ಮುಂದೆ ಕಳುಹಿಸುವಾಗಿಲ್ಲ

ವಾಟ್ಸ್ ಆ್ಯಪ್ ಇಂದು ಬಹು ಪ್ರಸಿದ್ದಿಯನ್ನು ಪಡೆದು ಕೊಂಡಿದೆ. ಪ್ರತಿಯೊಬ್ಬರು ಇಂದು ಈ ಆ್ಯಪ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ‌. ಇದು ಬಹಳಷ್ಟು ಗ್ರಾಹಕರನ್ನು ಹೊಂದಿರುವ ಆ್ಯಪ್ ಆಗಿದ್ದು ವಿವಿಧ ಫೀಚರ್ಸ್ ಅನ್ನು ಪ್ರಸ್ತುತ ಪಡಿಸಿದ್ದು ಜನರನ್ನು ಬಹಳಷ್ಟು ಸೆಳೆಯುವ ನಿಟ್ಟಿನಲ್ಲಿ ಅನೇಕ ವಿಧವಾದ ಫೀಚರ್ಸ್ ಪರಿಚಯಿಸಿದೆ. ಸಾಮಾನ್ಯವಾಗಿ ಗ್ರಾಹಕರು ಮಾಲ್​​​ಗೆ ಹೋಗಿ ವಸ್ತುಗಳನ್ನು ಕೊಂಡರೆ ಆತನಿಗೆ ಎಸ್​ಎಮ್​ಎಸ್​ ಮೂಲಕ ವಸ್ತುಗಳ ಬಗ್ಗೆ ಮಾಹಿತಿ, ವಸ್ತುವಿನ ಫೀಚರ್ಸ್, ಬೆಲೆ ಬಗ್ಗೆ ಸಂದೇಶದ ಮೂಲಕ ವಾಟ್ಸ್ ಆ್ಯಪ್ ನಲ್ಲಿ‌ತಿಳಿಸುವುದು, ಪೇಮೆಂಟ್ ಮಾಡಲು ಕೂಡ ಫೀಚರ್ಸ್ ಅನ್ನು‌ಹೊಂದಿದೆ.

ವಿವಿಧ ಪೀಚರ್ಸ್
ವಾಟ್ಸ್ ಆ್ಯಪ್ ಅನ್ನೋದು ಕೋಟ್ಯಾಂತರ ಗ್ರಾಹಕರನ್ನು ಹೊಂದಿದ್ದು ವೀಡಿಯೋ ಚಾಟ್, ಮೆಸೇಜಿಂಗ್ , ವಾಯ್ಸ್ ಆ್ಯಪ್,ಅವಾತರ್ ಇಮೊಜಿ, ಇತ್ತೀಚೆಗಷ್ಟೇ ವಾಟ್ಸ್ ಆ್ಯಪ್ (Whats app) ಚಾನೇಲ್ ಕೂಡ ಬಂದಿದ್ದು ಜನರಿಗೆ ಟ್ರೆಂಡ್ ನಲ್ಲಿರುವ ವ್ಯಕ್ತಿಯ ಮಾಹಿತಿ ಪಡೆದು ಕೊಳ್ಳಲು ಸುಲಭ ವಾಗಿದೆ. ವಾಟ್ಸ್ ಆ್ಯಪ್ ಚಾನೇಲ್ (what’s app) ಅನ್ನು ಬಿಡುಗಡೆ ಮಾಡಿದ್ದ ಬಳಿಕ ಇಷ್ಟು ದಿನ ವೆಬ್ಸೈಟ್ ನಲ್ಲಿ ಮಾತ್ರ ಅಪ್ಡೇಟ್ (update)ಮಾಡುತ್ತಿದ್ದ ಕಂಟೆಂಟ್ ಗಳು ಈಗ ವಾಟ್ಸ್ ಆ್ಯಪ್ ನಲ್ಲಿ ಸಹ ಮೂಡಿ ಬರ್ತಾ ಇದೆ.

ನಿರ್ಬಂಧ ಇದೆ

ವಾಟ್ಸ್ ಆ್ಯಪ್ ಚಾನೆಲ್ ಮೂಲಕ ಸಾಮಾನ್ಯ ಗ್ರಾಹಕನಿಂದ ಮೋದಿ, ಸಿಎಂ ಸಿದ್ದರಾಮಯ್ಯ, ಸೆಲೆಬ್ರಿಟಿಗಳ ವಾಟ್ಸ್ ಆ್ಯಪ್ ಚಾನೆಲ್ ಅನ್ನೂ ಗ್ರಾಹಕರು ಫಾಲೋ ಮಾಡಿ, ಮೆಸೇಜ್ ಮಾಡಬಹುದಾಗಿದೆ. ಹೀಗಾಗಿ ಈಗ ಟ್ರೆಂಡ್ ನಲ್ಲಿ ವಾಟ್ಸಾಪ್ ಛಾನೆಲ್ ಕೂಡ ಇದ್ದು, ಇದನ್ನು ದುರುಪಯೋಗ ಮಾಡುವಂತೆ ಇಲ್ಲ. ಹೌದು ಮೇಟಾ ಕಂಪೆನಿಯ ಒಡೆತನದಲ್ಲಿ ಇರುವ ವಾಟ್ಸ್ ಆ್ಯಪ್ ಸಂಸ್ಥೆ ಈಗ ಕೆಲವು ಖಾತೆಗಳನ್ನು ಬ್ಯಾನ್ ಮಾಡಿರುವ ಬಗ್ಗೆ ಮಾಹಿತಿ ಬಂದಿದೆ. ಸಾಮಾಜಿಕ ಶಾಂತಿ ಧಕ್ಕೆ , ತಪ್ಪು ಮಾಹಿತಿ ರವಾನೆ ಮಾಹಿತಿ ಹಂಚಿಕೊಳ್ಳುವ ಹಾಗೂ ದೇಶ ಭ್ರಷ್ಟಾಚಾರ ಇನ್ನಿತರ ಚಟುವಟಿಕೆಯಲ್ಲಿ ಇರುವ ಮಾಹಿತಿಯನ್ನು ಹಂಚಿಕೊಳ್ಳುವವರ ಖಾತೆ ಯನ್ನು ನಿಷೇಧ ಮಾಡಲು ವಾಟ್ಸ್ ಆ್ಯಪ್ ನಿರ್ಧಾರ ಮಾಡಿದೆ.

ಈ ಫಿಚರ್ಸ್ ಬರಲಿದೆ

ವಾಟ್ಸ್‌ ಆ್ಯಪ್‌ ನಲ್ಲಿ ಇನ್ಮುಂದೆ ಸ್ಟೇಟಸ್‌ ಗಳಿಗೆ ರಿಯಾಕ್ಟ್‌ ಮಾಡುವ ಆಪ್ಷನ್‌ ಗಳು ಕೂಡ ಬರಲಿದ್ದು ಮತ್ತಷ್ಟು  ಫೀಚರ್ಸ್ ಗಳು ಗ್ರಾಹಕರನ್ನು ಆಕರ್ಷಣೆ ಮಾಡಲಿದೆ. ಇನ್ಮುಂದೆ ಆಡ್ಮಿನ್‌ ಗಳಿಗೆ ಮಾತ್ರ ನೀವು ಗ್ರೂಪ್‌ ನಿಂದ ಹೊರ ಹೋದರೆ ನೋಟಿಫಿಕೇಶನ್ ಹೋಗಲಿದೆ. ಇತರರಿಗೆ ಈ ಮಾಹಿತಿ ರವಾನೆ ಯಾಗುವುದಿಲ್ಲ.ಆಡ್ಮಿನ್‌ ನೀವು ಮಾಡಿದ ಮೆಸೇಜ್‌ ಗಳನ್ನು ಡಿಲೀಟ್‌ ಮಾಡಬಹುದಾಗಿದ್ದು‌ ಇಂತಹ‌ ಫೀಚರ್ಸ್ ಗಳು ಇರಲಿವೆ.

 

LEAVE A REPLY

Please enter your comment!
Please enter your name here