
ಇಂದು ವಿದ್ಯುತ್ ಎಷ್ಟು ಬಳಕೆಯಾಗುತ್ತದೆ, ಯಾಕೆಲ್ಲ ಬಹಳಷ್ಟು ಮುಖ್ಯ ಅನ್ನೊದು ನಮಗೆ ತಿಳಿದೆ ಇದೆ. ರಾಜ್ಯ ಸರಕಾರವು ಜನರಿಗೆ ಸಹಾಯಕವಾಗಲಿ ಎಂದು 200ಯುನಿಟ್ ವರೆಗೆ ಉಚಿತ ವಿದ್ಯುತ್ ಅನ್ನು ನೀಡಿದ್ದು ಬಹಳಷ್ಟು ಜನತೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಶೂನ್ಯ ಬಿಲ್ ಅನ್ನು ಗ್ರಾಹಕರು ಪಡೆದುಕೊಳ್ಳುತ್ತಿದ್ದು ಸಾಕಷ್ಟು ಅನುಕೂಲ ಆಗುತ್ತಿದೆ ಎನ್ನಬಹುದು. ಇಷ್ಟು ದಿನದ ವರೆಗೆ 500-2000ರೂ.ಬರುತ್ತಿದ್ದ ಬಿಲ್ ಈಗ ಶೂನ್ಯ ಬೆಲೆ ಬಂದ ಬೆಲೆ ಜನಸಾಮಾನ್ಯರಿಗೆ ಸಾಕಷ್ಟು ಖುಷಿಯಾಗಿದೆ.
ವಿದ್ಯುತ್ ಸಮಸ್ಯೆ
ಗೃಹಜ್ಯೋತಿ ಬಂದ ಮೇಲೆ ಎಲ್ಲೆಡೆ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಕೃಷಿಕರಿಗೆ ವಿದ್ಯುತ್ ಬಳಕೆ ಬಹಳಷ್ಟಿದೆ. ಇಂದು ಮಳೆ ಇಲ್ಲದೆ ಬೆಳೆ ಇಲ್ಲದೆ ಇಳುವರಿ ಕುಂಠಿತವಾಗಿದೆ. ವಿದ್ಯುತ್ ಸರಿಯಾಗಿ ಪೂರೈಕೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಕಡಿಮೆ ಬರುವ ಕಾರಣಕ್ಕೆ ಬೇಕಾಗುವಷ್ಟು ವಿದ್ಯುತ್ ಸರಬರಾಜು ಸರಿಯಾಗಿ ಇಲ್ಲ ಇದಕ್ಕಾಗಿ ಸರಕಾರ ಮುಖ್ಯ ಕ್ರಮಕ್ಕಾಗಿ ಮುಂದಾಗಿದೆ.
ಪರಿಹಾರ ಏನು?
ರಾಜ್ಯದ ಜನತೆಗೆ ಲೋಡ್ ಶೆಡ್ಡಿಂಗ್ (Load shedding) ಕಾರ್ಯ ನಿರ್ವಹಿಸಲು ಮುಂದಾಗಿದೆ. ಬೇರೆ ರಾಜ್ಯ ದಿಂದ ವಿದ್ಯುತ್ ಖರೀದಿಸಿ ಪರಿಸ್ಥಿತಿ ಸರಿದೂಗಿಸುವ ಇಂಧನ ಇಲಾಖೆಗೆ 50-60 ಕೋಟಿ ರೂ.ನಷ್ಟು ವೆಚ್ಚವಾಗಲಿದೆ. ವಿದ್ಯುತ್ ಗೆ ಬಹಳಷ್ಟು ಬೇಡಿಕೆ ಇದ್ದು ವಿದ್ಯುತ್ ಖರೀದಿಸಬೇಕಾಗುತ್ತದೆ. ವಿದ್ಯುತ್ ಪೂರೈಕೆಯಾಗದ ಹಿನ್ನೆಲೆಯಲ್ಲಿ ಲೋಡ್ ಶೆಡ್ಡಿಂಗ್ ಕ್ರಮದ ಮೂಲಕ ವಿದ್ಯುತ್ ಪೂರೈಕೆ ಮಾಡುವ ಗುರಿಯನ್ನು ಹೊಂದಿದೆ. ಆದರೆ ಇಂದು ಪವರ್ ಕಟ್ (Power cut) ಸಮಸ್ಯೆ ಹೆಚ್ಚಾಗಿದ್ದು ರೈತರಿಗೆ ಬಹಳಷ್ಟು ತೊಂದರೆಯಾಗಿತ್ತು. ಈ ಬಗ್ಗೆ ಕೂಡ ಈಗ ಸ್ಪಷ್ಟನೆ ಸಿಕ್ಕಿದ್ದು ಅನಿಯಮಿತ ವಿದ್ಯುತ್ ಕಡಿತ ಮಾಡುವ ಮೂಲಕ ಪರಿಹಾರ ಕಂಡು ಕೊಳ್ಳಲು ಮುಂದಾಗಿದೆ.
ವಿದ್ಯುತ್ ಬೇಡಿಕೆಯನ್ನು ಪರಿಹರಿಸಲು ಇಂಧನ ಕಂಪನಿಗಳು ಖಾಸಗಿ ವಿದ್ಯುತ್ ಉತ್ಪಾದಕರಿಂದ ಹೆಚ್ಚುವರಿ ವಿದ್ಯುತ್ ಅನ್ನು ಪಡೆಯಲಿವೆ. ಐಪಿ ಸೆಟ್‌ಗಳಿಗೆ ಸೋಲಾರ್ ಪ್ಯಾನೆಲ್‌ಗಳನ್ನು ಒದಗಿಸಲು ಸಚಿವ ಸಂಪುಟದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಒಟ್ಟಿನಲ್ಲಿ ಗೃಹಜ್ಯೋತಿ ಸೌಲಭ್ಯ ಜನರಿಗೆ ಬಹಳಷ್ಟು ಉಪಯೋಗವಾಗುತ್ತಿದ್ದರು ಗೃಹಜ್ಯೋತಿ ಸೌಲಭ್ಯ ವನ್ನು ಜನತೆಗೆ ಸರಿಯಾಗಿ ನೀಡಲು ಸರಕಾರ ಅನೇಕವಿಧವಾದ ಪ್ರಯತ್ನ ಮಾಡುತ್ತಿದ್ದು ಹೊರ ರಾಜ್ಯದಿಂದ ವಿದ್ಯುತ್ ಖರೀದಿಸಲು ಸಹ ಮುಂದಾಗಿದೆ. ಅದೇ ರೀತಿ ರೈತರಿಗೆ ಕೃಷಿಗಾಗಿ ಏಳು ಘಂಟೆ ವಿದ್ಯುತ್ ಪೂರೈಕೆ ಮಾಡುವುದು ಕಡ್ಡಾಯ ಎಂದು ರಾಜ್ಯ ಸರಕಾರ ಮಾಹಿತಿ ನೀಡಿದೆ.
