Home ಸರಕಾರಿ ಯೋಜನೆಗಳು ಕೇಂದ್ರ ಸರಕಾರ ದಂಪತಿಗಳಿಗೆ ಸಹಾಯಕವಾಗುವ ನಿಟ್ಟಿನಲ್ಲಿ‌ ಕೇಂದ್ರ ಸರಕಾರದ ಹೊಸ ಯೋಜನೆ ಬಗ್ಗೆ ನೀವು ತಿಳಿಯಲೇಬೇಕು

ದಂಪತಿಗಳಿಗೆ ಸಹಾಯಕವಾಗುವ ನಿಟ್ಟಿನಲ್ಲಿ‌ ಕೇಂದ್ರ ಸರಕಾರದ ಹೊಸ ಯೋಜನೆ ಬಗ್ಗೆ ನೀವು ತಿಳಿಯಲೇಬೇಕು

0
ದಂಪತಿಗಳಿಗೆ ಸಹಾಯಕವಾಗುವ ನಿಟ್ಟಿನಲ್ಲಿ‌ ಕೇಂದ್ರ ಸರಕಾರದ ಹೊಸ ಯೋಜನೆ ಬಗ್ಗೆ ನೀವು ತಿಳಿಯಲೇಬೇಕು

ಇಂದು ಹಣ ಸೇವಿಂಗ್ ಮಾಡುವುದು ಬಹಳ ಪ್ರಾಮುಖ್ಯವಾಗಿದ್ದು, ಹಣ ಇದ್ದರೆ ಮಾತ್ರ ನಮಗೆ ಬೇಕಾದ ಹಾಗೇ ಬದುಕಬಹುದು. ಹಾಗಾಗಿ ಸರಿಯಾದ ಕೆಲಸ ಆಯ್ದುಕೊಂಡರೆ ಮಾತ್ರ ಬದುಕಿನಲ್ಲಿ ಸಕ್ಸಸ್ ಆಗಲು ಸಾಧ್ಯ ಎಂದೇ ಹೇಳಬಹುದು. ಅದರಲ್ಲೂ ಕೇಂದ್ರ ಸರಕಾರ ವಿದ್ಯಾರ್ಥಿಗಳಿಗೆ, ಯುವಕರಿಗೆ, ಮಹಿಳೆಯರಿಗೆ ಅಭಿವೃದ್ದಿಗಾಗಿ ಹಲವು ರೀತಿಯ ಯೋಜನೆಯನ್ನು ಜಾರಿಗೆ ತರುತ್ತಲೆ ಇರುತ್ತದೆ. ಜನರ ಒಳಿತಿಗಾಗಿ, ಅಭಿವೃದ್ದಿಗಾಗಿ, ಜನರ ಅವಶ್ಯಕತೆಗೆ ಬಹಳ ಉಪಯುಕ್ತ ಆಗುವ ಯೋಜನೆಗಳು ಕೇಂದ್ರ ಸರಕಾರದಿಂದ ಚಿರಪರಿಚಿತವಾಗಿದ್ದು ಈ ಯೋಜನೆ ಬಗ್ಗೆ ನೀವು ತಿಳಿದುಕೊಳ್ಳಲೆಬೇಕು.

ಪಿಂಚಣಿ ಯೋಜನೆ
ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿ ಅನೇಕ ವಿಧವಾದ ಯೋಜನೆಗಳಿದ್ದು ಅದರಲ್ಲಿ ಪಿಂಚಣಿ ಯೋಜನೆಯು ಮುಖ್ಯ ಪಾತ್ರವನ್ನು ವಹಿಸುತ್ತದೆ. ಮಹಿಳೆಯರಿಗೆ, ಮಕ್ಕಳಿಗೆ, ಹಿರಿಯರಿಗೆ ಹೀಗೆ ಹಲವು ರೀತಿಯ ಪಿಂಚಣಿ ವ್ಯವಸ್ಥೆ ಇದ್ದು ಆರ್ಥಿಕವಾಗಿ ಅಭಿವೃದ್ದಿಯಾಗಬೇಕು ಎಂದರೆ ಈ ಯೋಜನೆಯಲ್ಲಿ ಇಂದಿನಿಂದಲೇ ನೀವು ಭಾಗಿಯಾಗಿರುವುದು ಉತ್ತಮ. ಇಂತಹದ್ದೇ ಒಂದು ಕೇಂದ್ರ ಸರಕಾರದ ಹೊಸ ಯೋಜನೆ ಜಾರಿಗೆ ಬಂದಿದ್ದು ಇದರ ಮೂಲಕ‌ ದಂಪತಿಗಳಿಗೆ ತಿಂಗಳಿಗೆ ಮಾಸಿಕ ಐದು ಸಾವಿರ ರೂಪಾಯಿ ಪಿಂಚಣಿ ದೊರೆಯಲಿದೆ.

ಯಾವ ಯೋಜನೆ

ಕೇಂದ್ರ ಸರ್ಕಾರ ಈ ಯೋಜನೆಯಡಿ ಗಂಡ ಹೆಂಡತಿ ಇಬ್ಬರಿಗೂ ಕೂಡ ಹೂಡಿಕೆ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಹೌದು ದಂಪತಿಗಳು ಜೊತೆಯಾಗಿ ಈ ಯೋಜನೆಯ ಮೂಲಕ‌ ಹೂಡಿಕೆ ಮಾಡಿದರೆ 60 ವರ್ಷದ ನಂತರ ನಿವೃತ್ತಿಯ ಬದುಕನ್ನು ಸುಲಭವಾಗಿ ಸಾಗಿಸಬಹುದಾಗಿದ್ದು ಇದುವೆ ಅಟಲ್ ಪಿಂಚಣಿ ಯೋಜನೆ. ಇದರ ಮೂಲಕ ಪ್ರತಿ ತಿಂಗಳು 1,000 ರೂ. ನಿಂದ 5,000 ರೂ.ವರೆಗೆ ಪಿಂಚಣಿ ಪಡೆಯಬಹುದು. ನೀವು ಈ ಯೋಜನೆಗಳಲ್ಲಿ ಎಷ್ಟು ಕಡಿಮೆ ವಯಸ್ಸಿನಲ್ಲಿ ಹೂಡಿಕೆ ಮಾಡುತ್ತಿರೋ ಅಷ್ಟು ಹೆಚ್ಚು ಹಣವನ್ನು ಪಡೆಯುವ ಅವಕಾಶ ನಿಮಗಿದೆ.

ಖಾತೆ ತೆರೆಯಬೇಕು

ಅಟಲ್ ಪಿಂಚಣಿ ಯೋಜನೆಯ ಸೌಲಭ್ಯ ಪಡೆಯಬೇಕಾದರೆ ವಯಸ್ಸು 18 ರಿಂದ 40 ವರ್ಷಗಳ ವರೆಗೆ ಇದ್ದು 40 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಈ ಯೋಜನೆಯ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಅಟಲ್ ಪಿಂಚಣಿ ಯೋಜನೆಯ ಸೌಲಭ್ಯ ಪಡೆಯಲು ನೀವು ಬ್ಯಾಂಕ್ ಖಾತೆ ಅಥವಾ ಪೋಸ್ಟ್ ಆಫೀಸ್ ಖಾತೆಯನ್ನು ಹೊಂದಿರಬೇಕಿದ್ದು ಮುಖ್ಯವಾಗಿದ್ದು, ಈ ಬ್ಯಾಂಕ್ ಖಾತೆಯನ್ನು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು.

 

LEAVE A REPLY

Please enter your comment!
Please enter your name here