
ಇಂದು ರೈತರಿಗಾಗಿ ಸರಕಾರ ಹಲವು ರೀತಿಯ ಯೋಜನೆಯನ್ನು ಜಾರಿಗೆ ತರುತ್ತಿದೆ. ಮುಖ್ಯವಾಗಿ ಈ ಭಾರಿ ಮಳೆ ಇಲ್ಲದೆ ರೈತರಿಗೆ ನಷ್ಟವಾಗಿ ಆತಂಕ ಕೂಡ ಹೆಚ್ಚಿದೆ. ಈಗಾಗಲೇ ಬೆಳೆ ನಷ್ಟಕ್ಕೆ ಪರಿಹಾರ ಸಿಗಬೇಕು ಎಂದು ರೈತರು ಹೋರಾಟ ಮಾಡುತ್ತಲೆ ಇದ್ದಾರೆ. ಇದೀಗ ಬೆಳೆ ಪರಿಹಾರ ಮೊತ್ತ ರೈತರಿಗೆ ದೊರೆಯಲಿದ್ದು ಯಾರಿಗೆಲ್ಲ ಈ ಯೋಜನೆ ಸಿಗಬಹುದು, ಎಷ್ಟು ಮೊತ್ತ ದೊರೆಯುತ್ತದೆ ಎಂಬ ಮಾಹಿತಿ ಇಲ್ಲಿದೆ.
ಎಷ್ಟು ಹಣ
ಎರಡು ಸಾವಿರ ರೂಪಾಯಿಗಳವರೆಗೆ ಮೊದಲ ಕಂತಿನಲ್ಲಿ ರೈತರಿಗೆ ಬೆಳೆ ಪರಿಹಾರ ಸಿಗಲಿದೆ. ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ನೀಡಲು ನಿರ್ಧಾರ ಮಾಡಿದ್ದು. ಈಗಾಗಲೇ ಮೊದಲ ಕಂತನ್ನು ನಾವು ಬಿಡುಗಡೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಹಿತಿ ನೀಡಿದ್ದಾರೆ.
ಬರ ಸ್ಥಳ ಘೋಷಣೆ
ಈಗಾಗಲೇ ಬರ ಪೀಡಿತ ಪ್ರದೇಶವನ್ನು ಘೋಷಣೆ ಮಾಡಿದ್ದು ರಾಜ್ಯದ 220ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಿದ್ದು ಇಂತಹ ರೈತರಿಗೆ ಬೆಳೆ ನಷ್ಟ ಪರಿಹಾತ ಹಣ ನೀಡಬೇಕಿದೆ.
ಮಾಹಿತಿ ಪಡೆಯಬಹುದು
ರೈತರು ತಮಗೆ ಈ ಹಣ ಜಮೆ ಯಾಗಿದೆಯೇ? ತಮ್ಮ ದು ಹೆಸರಿದೆಯೇ ಎಂದು ತಿಳಿದು ಕೊಳ್ಳಬಹುದಾಗಿದ್ದು, ಅರ್ಹ ಪಟ್ಟಿಯನ್ನು ಸರ್ಕಾರ ಪ್ರಕಟ ಮಾಡಿದ್ದು, https://fruitspmk.karnataka.gov.in/MISReport/GetDetailsByAadhaar ಇಲ್ಲಿಕ್ಲಿಕ್ ಮಾಡಿ ನಂತರ ಆಧಾರ್ ಕಾರ್ಡ್ ಮಾಹಿತಿ ನಮೂದಿಸಿ. ಆಗ ರೈತರು ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಬಂದರೆ ನಿಮ್ಮ ಖಾತೆಗೆ ನೇರವಾಗಿ ಬೆಳೆ ಪರಿಹಾರ ಮೊತ್ತ ಸಿಗಲಿದೆ.
ಕಡ್ಡಾಯವಾಗಿ ಈ ದಾಖಲೆಬೇಕು
ಬರ ಪರಿಹಾರದ ಹಣ ರೈತರು ಪಡೆಯಬೇಕಾದರೆ ಕಡ್ಡಾಯವಾಗಿ ಎಫ್‌ಐಡಿ(FID) ಮಾಡಿಸಲೇಬೇಕು. ರೈತರು ಸರಕಾರದ ಯಾವುದೇ ಸೌಲಭ್ಯ, ಬ್ಯಾಂಕ್ ಸಾಲ ಪಡೆಯಲು ಸದರಿ ಎಫ್‌ಐಡಿಯು ಮುಖ್ಯವಾಗಿ ಕಡ್ಡಾಯವಾಗಿದೆ. ರೈತರು ಎಫ್‌ಐಡಿ ಮಾಡಿಸದಿದ್ದರೆ ಬೆಳೆ ಪರಿಹಾರ ಸೇರಿ ಯಾವುದೇ ಸರಕಾರಿ ಸೌಲಭ್ಯಗಳು ಸಿಗುವುದಿಲ್ಲ.
ಪರಿಹಾರ
ಬಿತ್ತನೆ ವೈಫಲ್ಯ ಮತ್ತು ಮಧ್ಯಂತರ ವಿಮೆ ಪರಿಹಾರಕ್ಕೆ ರಾಜ್ಯ ಸರ್ಕಾರ ಈಗಾಗಲೇ 6.5 ಲಕ್ಷ ರೈತರಿಗೆ 460 ಕೋಟಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಕುಡಿಯುವ ನೀರು , ಮೇವಿಗೆ ಹೀಗೆ ಹಣ ಬಿಡುಗಡೆ ಮಾಡಿದೆ. ಹೊರ ರಾಜ್ಯಕ್ಕೆ ಮೇವು ಹೋಗದಂತೆ, ಮೇವಿನ ಬೀಜ ವಿತರಣೆ ಇತ್ಯಾದಿ ಸೌಲಭ್ಯ ನೀಡಲಿದ್ದು, ಈಗ ಮೊದಲ ಕಂತು ಅರ್ಹ ರೈತರಿಗೆ 2000 ರೂವರೆಗೆ ಬೆಳೆ ಪರಿಹಾರ ಹಣ ನೀಡಲು ರಾಜ್ಯ ಸರಕಾರ ತೀರ್ಮಾನ ಮಾಡಿದೆ.
Photo credit – Wikipedia
