
ಇಂದು ರಾಜ್ಯ ಸರಕಾರ ಹಲವಾರು ಜನಪರ ಕಾರ್ಯಕ್ರಮದ ಮೂಲಕ ಜನಮನ ಸೆಳೆದಿದೆ. ಪಂಚ ಗ್ಯಾರೆಂಟಿ ಯೋಜನೆಗಳು ಬಹುತೇಕ ಯಶಸ್ವಿಯಾಗುತ್ತಿದ್ದು ಯುವನಿಧಿ ಇನ್ನೇನು ಕೆಲವೇ ದಿನದಲ್ಲಿ ಬರಲಿದೆ ಈ ನಡುವೆ ಪಂಚ ಗ್ಯಾರೆಂಟಿ ಮಾತ್ರವಲ್ಲದೇ ಇತರ ಯೋಜನೆ ಸಹ ಸಾಕಷ್ಟು ಸುದ್ದಿಯಾಗುತ್ತಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಶ್ರಮ ಶಕ್ತಿ ಯೋಜನೆ
ಶಕ್ತಿ ಮತ್ತು ಶ್ರಮ ಶಕ್ತಿ ಯೋಜನೆಗೆ ಸಾಕಷ್ಟು ವ್ಯತ್ಯಾಸಗಳಿವೆ. ಶಕ್ತಿ ಯೋಜನೆ ಎನ್ನುವುದು ಮಹಿಳೆಯರ ಉಚಿತ ಪ್ರಯಾಣದ ವಿಚಾರಕ್ಕೆ ಸಂಬಂಧಿಸಿದ್ದಾಗಿದೆ. ಹಾಗೇ ಶ್ರಮ ಶಕ್ತಿ ಯೋಜನೆ ಎನ್ನುವುದು ಅಲ್ಪಸಂಖ್ಯಾತರ ಸಮುದಾಯದ ಅನುಕೂಲಕ್ಕೆ ಮಾಡಿದ ಯೋಜನೆಯಾಗಿದೆ. ಈ ಒಂದು ಶ್ರಮ ಶಕ್ತಿ ಯೋಜನೆಯನ್ನು ಮುಖ್ಯಮಂತ್ರಿಗಳು ಸಭೆ ನಡೆಸಿ ಉಪಕ್ರಮದ ಮುಖೇನ ಜಾರಿಗೆ ತಂದಿದ್ದಾರೆ.
ಯೋಜನೆಯ ಲಾಭ ಏನು?
ಶಮಶಕ್ತಿ ಯೋಜನೆಯನ್ನು 2023ರ ಜುಲೈ ನಿಂದ ಜಾರಿಗೆ ತರಲಾಗಿದೆ. ಶ್ರಮ ಶಕ್ತಿ ಯೋಜನೆಯ ಮೂಲಕ ಸ್ವಂತ ಉದ್ಯಮ ಮಾಡುವವರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದ್ದು ಇದರೊಂದಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕೂಡ ಒದಗಿಸಲಿದೆ. ಈ ಮೂಲಕ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದವರಿಗೆ ವಿವಿಧ ವೃತ್ತಿ ಸಂಬಂಧಿತ ಕೌಶಲ್ಯ ತರಬೇತಿ ನೀಡಲಾಗುವುದು ಹಾಗೂ 4% ರಿಂದ 5% ಬಡ್ಡಿದರಕ್ಕೆ ಸಾಲ ಸೌಲಭ್ಯ ಸಹ ಸಿಗಲಿದೆ. ಗರಿಷ್ಠ 50ಸಾವಿರ ರೂಪಾಯಿ ತನಕ ಸಾಲ ಪಡೆಯಬಹುದು ಮತ್ತು ಈ ಸಾಲವನ್ನು 36 ತಿಂಗಳ ಒಳಗೆ ವಾಪಾಸ್ಸು ಕಟ್ಟಬೇಕು.
ದಾಖಲೆ ಅಗತ್ಯ
ಆಧಾರ್ ಕಾರ್ಡ್ , ಪಾಸ್ ಪೋರ್ಟ್, ಆದಾಯ ಪ್ರಮಾಣ ಪತ್ರ, ಕರ್ನಾಟಕ ವಾಸ್ತವ್ಯ ಪುರಾವೆ, ಫೋಟೋ, ಸ್ವಯಂ ಘೋಷಣೆ ನಮೂನೆ, ಜಾತಿ ಪ್ರಮಾಣ ಪತ್ರ, ಅಲ್ಪಸಂಖ್ಯಾತ ಪ್ರಮಾಣ ಪತ್ರ, ಆನ್ಲೈನ್ ಅರ್ಜಿ ನಮೂನೆ ಇತರ ದಾಖಲೆಗಳು ಅಗತ್ಯವಾಗಿದೆ.
ತರಬೇತಿಗೆ ಅರ್ಹತೆ ಏನು?
*ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು. (ಬೌದ್ಧ, ಮುಸ್ಲಿಂ, ಸಿಖ್, ಪಾರ್ಸಿ ಇತರ ಸಮುದಾಯ).
*ಈ ಯೋಜನೆ ಅಡಿಯಲ್ಲಿ ತರಬೇತಿ ಪಡೆಯಬೇಕಾದರೆ 18ರಿಂದ 55ವರ್ಷದ ಒಳಗೆ ಇದ್ದವರು ಅರ್ಹತೆ ಹೊಂದಲಿದ್ದಾರೆ.
*ಕುಟುಂಬದ ಯಾವುದೇ ಸದಸ್ಯರು ಕೇಂದ್ರ , ರಾಜ್ಯ ಸರಕಾರದ ಸರಕಾರಿ ನೌಕರಿ ಹೊಂದಿದ್ದರೆ ಅಂಥವರು ಅರ್ಹರಾಗಲಾರರು.
*ಕುಟುಂಬದ ವಾರ್ಷಿಕ ಆದಾಯ 3.50ಲಕ್ಷ ದಾಟಿರಬಾರದು.
*ಕರ್ನಾಟಕದಲ್ಲಿ ವಾಸ್ತವ್ಯ ಹೊಂದಿರಬೇಕು.
* KMDC ಸಾಲ ಮರುಪಾವತಿ ಮಾಡಿರದ ಆರೋಪ ಇದ್ದವರು ಅರ್ಹರಲ್ಲ.
ನೀವು ಸಾಲಕ್ಕೆ ಅರ್ಜಿ ಸಲ್ಲಿಸಲು ಇತರ ಮಾಹಿತಿಗೆ [email protected] ವೆಬ್ಸೈಟ್ ಗೆ ಭೇಟಿ ನೀಡಬಹುದು. ಹಾಗೆ ಸಹಾಯವಾಣಿ ಸಂಖ್ಯೆ 080-22861226 ಅಥವಾ 080-22860999 ಸಂಪರ್ಕಿಸಿ.
