
ಇಂದು ರೈತರಿಗಾಗಿ ಸರಕಾರ ಹಲವು ರೀತಿಯ ಯೋಜನೆಗಳನ್ನು ಹಮ್ಮಿಕೊಳ್ಳುತ್ತಲೆ ಇದ್ದು, ಬಹಳಷ್ಟು ಸಹಕಾರ ನೀಡುತ್ತಲೆ ಬಂದಿದೆ. ಅದೇ ರೀತಿ ರೈತರನ್ನು ಆರ್ಥಿಕವಾಗಿ ಬೆಂಬಲಿಸಲು ಹಲವು ರೀತಿಯ ಯೋಜನೆಯನ್ನು ಕೂಡ ಹಮ್ಮಿಕೊಳ್ಳುತ್ತಿದೆ.ಅದೇ ರೀತಿ ಇದೀಗ ಬಡ್ಡಿ ರಹಿತ ಸಾಲವನ್ನು ನೀಡಲು ಸರಕಾರ ಮುಂದಾಗಿದೆ.
ರೈತರಿಗೆ ಬಡ್ಡಿ ರಹಿತ ಸಾಲ
ರೈತರು ಈ ದೇಶದ ಮುಖ್ಯ ಬೆನ್ನೆಲುಬು ಆಗಿದ್ದು ಅವರನ್ನು ಪ್ರೋತ್ಸಾಹ ಮಾಡುವ ಕೆಲಸವನ್ನು ಸಹ ಸರಕಾರ ಹಮ್ಮಿಕೊಳ್ಳುತ್ತಲೆ ಇದೆ. ಇದೀಗ 2023-24ನೇ ಸಾಲಿನಲ್ಲಿ ರೈತರಿಗೆ ಈ ಹಿಂದೆ ಕೊಡಲಾಗುತ್ತಿದ್ದ ಸಾಲದ ಮೊತ್ತವನ್ನು ಹೆಚ್ಚು ಮಾಡಿದೆ. ಹೌದು ಮೂರು ಲಕ್ಷ ರೂಪಾಯಿಗಳ ಸಾಲವನ್ನು 5 ಲಕ್ಷ ರೂಪಾಯಿಗಳಿಗೆ ಹೆಚ್ಚು ಮಾಡಿದ್ದು ಈ ವಿಚಾರ ಬಹಳಷ್ಟು ರೈತರಿಗೆ ಖುಷಿ ನೀಡಿದೆ. ಇದರಿಂದ ರೈತರು ಕೃಷಿ ಚಟುವಟಿಕೆಗಳನ್ನು ಹೆಚ್ಚಾಗಿ ಮಾಡಲು ಸಾಧ್ಯವಿದೆ. ಇಷ್ಟೇ ಅಲ್ಲದೆ ರೈತರು ಯಾವುದೇ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿ ದರಕ್ಕೆ ಸಾಲ ಕೂಡ ಪಡೆಯಬಹುದು.
ಶ್ರಮಶಕ್ತಿ ಯೋಜನೆ
ಅದೇ ರೀತಿ ಭೂ ರಹಿತ ರೈತ ಮಹಿಳೆಗಾಗಿ ಸರಕಾರ ಇನ್ನೊಂದು ಯೋಜನೆಯನ್ನು ಜಾರಿಗೆ ತಂದಿದ್ದು ಮಹಿಳೆಯರಿಗೆ ಮತ್ತಷ್ಟು ಬೆಂಬಲ ನೀಡಿದಂತಾಗಿದೆ. ಹೌದು ಮಹಿಳೆಯರಿಗಾಗಿ ಶ್ರಮಶಕ್ತಿ ಯೋಜನೆಯನ್ನು (shrama Shakti Yojana) ಜಾರಿಗೆ ತಂದಿದ್ದು, ಈ ಯೋಜನೆಯ ಮೂಲಕ 5 ಲಕ್ಷ ರೂಪಾಯಿಗಳ ವರೆಗೆ ಬಡ್ಡಿ ರಹಿತ ಸಾಲವನ್ನು ಪಡೆಯಬಹುದು ಎನ್ನಲಾಗಿದೆ.
ಕಿಸಾನ್ ಸಮ್ಮಾನ್
ಅದೇ ರೀತಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು 2019 ರಲ್ಲಿ ಪ್ರಾರಂಭ ಮಾಡಿದ್ದು ಇದರ ಮೂಲಕ ರೈತರಿಗೆ ಆರ್ಥಿಕ ಸಹಾಯ ಕೂಡ ಒದಗಿಸುತ್ತಿದೆ. ಕೃಷಿ ಭೂಮಿ ಹೊಂದಿರುವ ದೇಶಾದ್ಯಂತ ಎಲ್ಲಾ ಭೂಮಾಲೀಕ ರೈತ ಕುಟುಂಬಗಳಿಗೆ ತಿಂಗಳಿಗೆ ಎರಡು ಸಾವಿರ ಆರ್ಥಿಕ ಸೌಲಭ್ಯ ನೀಡುತ್ತದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15 ನೇ ಕಂತಿನ ಹಣ ನವೆಂಬರ್ 15 ರಂದು ರೈತರ ಖಾತೆಗಳಿಗೆ ಹಣ ಜಮೆ ಆಗಲಿದೆ. ಇದರ ಮೂಲಕ ರೈತರಿಗೆ ಪ್ರತಿ ವರ್ಷ 6 ಸಾವಿರ ರೂ. ಸಹಾಯ ನೀಡಲಾಗುತ್ತದೆ. ಇದುವರೆಗೆ 14 ಕಂತುಗಳನ್ನು ರೈತರ ಖಾತೆಗೆ ಜಮೆ ಮಾಡಿದ್ದಾರೆ.
ಹೆಚ್ಚಳ ಮಾಡುವ ಗುರಿ
ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಕೊಡಲಾಗುವ ಹಣದ ಮೊತ್ತವನ್ನು ಹೆಚ್ಚಳ ಮಾಡುವ ಕುರಿತು ಚಿಂತನೆ ಮಾಡಿದ್ದು, 6 ಸಾವಿರ ರೂ.ಗಳಿಂದ 8 ಸಾವಿರ ರೂ.ಗೆ ಹೆಚ್ಚಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದ್ದು ಇನ್ನಷ್ಟೆ ಈ ಬಗ್ಗೆ ಮಾಹಿತಿ ಬರಬೇಕಿದೆ.
ಯಾರು ಅರ್ಹರು?
ಕೃಷಿ ಭೂಮಿಯನ್ನು ಹೊಂದಿರುವ ಎಲ್ಲ ರೈತರು ಪಿಎಂ ಕಿಸಾನ್ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ. ಕೇಂದ್ರ ಸರ್ಕಾರವು ರೈತರಿಗೆ ಕೃಷಿ ಚಟುವಟಿಕೆಗೆ ಬೇಕಾಗುವ ಬೀಜ, ಗೊಬ್ಬರ ಖರೀದಿ ಸೇರಿದಂತೆ ಆರ್ಥಿಕ ಸಹಾಯ ನೀಡುವ ಮೂಲಕ ಡಿಬಿಟಿ ಮೂಲಕ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಇದಾಗಿದೆ.
