
ಇಂದು ಮಹಿಳೆಯರಿಗೆ ಪ್ರೋತ್ಸಾಹ ನೀಡುವ ಯೋಜನೆಗಳು ಬಹಳಷ್ಟು ಇದೆ. ಇನ್ನೂ ಮಹಿಳೆಯರಿಗೆ ಆರ್ಥಿಕ ಶಕ್ತಿ ಯ ಭರವಸೆ ನೀಡುವ ನಿಟ್ಟಿನಲ್ಲಿ ಗೃಹಿಣಿ ಶಕ್ತಿ ಯೋಜನೆ (grihini shakti scheme) ಯನ್ನು ಅನುಷ್ಠಾನ ಮಾಡಲಾಗಿದೆ.
ಸಹಾಯಧನ
ಈ ಯೋಜನೆಯು ಈ ಹಿಂದೆ ಇದ್ದ ಬಿಜೆಪಿ ಸರ್ಕಾರವು ಜಾರಿಗೆ ತಂದಿದ್ದು ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು 500 ರೂ. ಗಳ ಸಹಾಯ ಧನವನ್ನು ನೀಡುವ ಯೋಜನೆ ಇದಾಗಿದೆ.ಮುಖ್ಯವಾಗಿ ಕೃಷಿಕರಿಗೆ ಪ್ರೊತ್ಸಾಹ ನೀಡಿ, ಅದೇ ರೀತಿ ರೈತ ಮಹೀಳೆಯರಿಗೆ ಬೆಂಬಲ ನೀಡುವ ಉದ್ದೇಶ ಇದಾಗಿದೆ. ಇದರ ಮೂಲಕ ರೈತರಿಗೆ 5 ಲಕ್ಷ ರೂಪಾಯಿ ಶೂನ್ಯಬಡ್ಡಿದರದಲ್ಲಿ ಸಾಲ ನೀಡುವುದಾಗಿ ಘೋಷನೆ ಕೂಡ ಮಾಡಿತ್ತು. ಅದೇ ರೀತಿ ಈ ಯೋಜನೆಯ ಮೂಲಕ ಮಹಿಳೆಯರಿಗೆ ಕುಟುಂಬ ನಿರ್ವಹಣೆಯೊಂದಿಗೆ ಮನೆಯ ಆರ್ಥಿಕ ಸುಧಾರಣೆಗಾಗಿ ಮಾಡುವ ಮಹಿಳಾ ಪರವಾದ ಯೋಜನೆ ಆಗಿದ್ದು, ಮಹಿಳಾ ಕೃಷಿ ಕಾರ್ಮಿಕರ ಕಾಳಜಿಯ ಪ್ರತೀಕವಾಗಿ, ಈ ಯೋಜನೆ ತರಲಾಗಿದೆ.
ಹೆಚ್ಚಳ ಮಾಡಿದೆ
ಇನ್ನೂ ಗೃಹಿಣಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 500 ರೂ.ಗಳನ್ನು ನೀಡುವುದಾಗಿ ಘೋಷಿಸಿದ್ದ ಮೊತ್ತ 1000 ರೂ.ಗಳಿಗೆ ಹೆಚ್ಚು ಮಾಡಲಾಗಿತ್ತು. ಇನ್ನೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಲು ಸರ್ಕಾರವು ಈಗಾಗಲೇ ಸ್ತ್ರೀ ಪರವಾದ ಯೋಜನೆಯಡಿಯಲ್ಲಿ ಸ್ವಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ.
ಸ್ವ ಉದ್ಯೋಗ
ಅಷ್ಟೆ ಅಲ್ಲದೆ ಗೃಹಿಣಿಯರಿಗೆ ಮನೆಯಲ್ಲೇ ಸ್ವ ಉದ್ಯೋಗ ಪ್ರಾರಂಭಿಸಲು ಒಂದು ಲಕ್ಷ ಮಹಿಳೆಯರಿಗೆ ಉಚಿತವಾಗಿ ಕೌಶಲ್ಯಾಭಿವೃದ್ದಿ ತರಬೇತಿ ನೀಡಲು ಯೋಜನೆ ಹಾಕಿ ಕೊಂಡಿದೆ.
ಮಹಿಳಾ ಸಮ್ಮಾನ್
ಅದೇ ರೀತಿ ಮಹಿಳೆಯರಿಗಾಗಿ ಮತ್ತೊಂದು ಹೊಸ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಮಹಿಳಾ ಸಮ್ಮಾನ್ ಉಳಿತಾಯ ಸರ್ಟಿಫಿಕೇಟ್ ಯೋಜನೆಯನ್ನು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿದ್ದು, ಸ್ಥಿರಬಡ್ಡಿಯೊಂದಿಗೆ ಮಹಿಳೆಯರಿಗಾಗಿ ಈ ಹೊಸ ಉಳಿತಾಯ ಯೋಜನೆಯನ್ನು ತರಲಾಗಿದೆ. ಈ ಯೋಜನೆಯಲ್ಲಿ ಠೇವಣಿ ಮಾಡುವವರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗುತ್ತಿದ್ದು, ಇದುವರೆಗೆ ಹಲವು ಖಾತೆಗಳನ್ನು ಮಹಿಳೆಯರು ತೆರೆದಿದ್ದಾರೆ. ಈ ಯೋಜನೆಯಲ್ಲಿ ಹೆಣ್ಣು ಮಕ್ಕಳು ಸೇರಿದಂತೆ ಯಾವುದೇ ವಯಸ್ಸಿನ ಮಹಿಳೆಯರು ಎರಡು ವರ್ಷಗಳ ವರೆಗೆ ಕನಿಷ್ಠ 1,000 ರೂ.ನಿಂದ ಮತ್ತು ಗರಿಷ್ಠ 2 ಲಕ್ಷ ರೂ.ವರೆಗೆ ಈ ಯೋಜನೆಯಲ್ಲಿ ಹಣ ಠೇವಣಿ ಮಾಡಲು ಅವಕಾಶ ಇದೆ.
