
ಇಂದು ರೇಷನ್ ಕಾರ್ಡ್ ಅನ್ನೋದೂ ಬಹು ಮುಖ್ಯವಾದ ದಾಖಲೆ ಆಗಿದ್ದು, ಬಡ ವರ್ಗದ ಜನರಿಗೆ ಈ ಕಾರ್ಡ್ ನಿಂದ ಬಹಳಷ್ಟು ಸಹಾಯಕವಾಗುತ್ತಿದೆ. ಸರಕಾರದಿಂದ ದೊರೆಯುವ ಯೋಜನೆಗಳಿಗೆ ಇಂದು ಅಗತ್ಯ ದಾಖಲೆಯಾಗಿದ್ದು, ಅವುಗಳಲ್ಲಿ ಬಿಪಿಎಲ್, ಅಂತ್ಯೊದಯ ಕಾರ್ಡ್ ಕೂಡ ಒಂದು. ಇಂದು ಬಡತನ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ಅಂತ್ಯೊದಯ ಕಾರ್ಡ್ ಅನ್ನು ನೀಡಲಾಗುತ್ತದೆ.
ಅನರ್ಹರು ಈ ಕಾರ್ಡ್ ಹೊಂದಿದ್ದಾರೆ
ಇಂದು ಅರ್ಹರಿಗಿಂತಲೂ ಅನರ್ಹರೆ ಹೆಚ್ಚು ಈ ಕಾರ್ಡ್ ಅನ್ನು ಹೊಂದಿದ್ದಾರೆ. ಬಡವರ್ಗಗಿಂತ ಮೇಲ್ಪಟ್ಟವರು ಸರಕಾರದ ಕೆಲವು ಸೌಲಭ್ಯಗಳನ್ನು ಪಡೆದು ಕೊಳ್ಳುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಸುಳ್ಳು ದಾಖಲೆಯ ಮಾಹಿತಿಯನ್ನು ನೀಡಿ ಈಕಾರ್ಡ್ ಮಾಡಿಸಿಕೊಂಡಿರುವುದು ಮಾಹಿತಿ ಬಂದಿದೆ. ಹೀಗೆ ಪಡೆದ ಬಿಪಿಎಲ್ ಕಾರ್ಡು (BPL Card) ದಾರರಿಗೆ ಇಷ್ಟು ದಿನಗಳ ವರೆಗೆ ಸರಕಾರದ ಅನೇಕ ಯೋಜನೆಗಳ ಫಲ ಲಭಿಸಿದ್ದರೂ ಮುಂದಿನ ದಿನದಲ್ಲಿ ಸಿಗಲು ಸಾಧ್ಯವಿಲ್ಲ.
ದಾಖಲೆ ಪರಿಶೀಲನೆ
ಬಡವರ್ಗದ ಜನರಿಗೆ ಆಹಾರ, ಆರೋಗ್ಯ, ಶಿಕ್ಷಣ, ಆರ್ಥಿಕ ಉತ್ತೇಜನ ನೀಡುವ ಸಲುವಾಗಿಯು ಈ ಕಾರ್ಡ್ ಇಂದು ಅಗತ್ಯ ವಾಗಿದ್ದು, ಇಂದು ಬಿಪಿ ಎಲ್ ಕಾರ್ಡ್ ಬಗ್ಗೆ ಮೋಸದ ಜಾಲಗಳು ಕೂಡ ಹೆಚ್ಚಾಗಿವೆ. ಫೇಕ್ ಮಾಹಿತಿ ಕೊಟ್ಟು ಬಿಪಿಎಲ್ ಕಾರ್ಡ್ ಮಾಡಿಸಿದ್ದು ಸರಕಾರದ ಗಮನಕ್ಕೆ ಬಂದಿದ್ದು ಇಂತಹ ಕಾರ್ಡ್ ಗಳನ್ನು ಪರಿಶೀಲನೆ ಕೂಡ ಮಾಡಲಾಗಿದೆ.
ರದ್ದು ಮಾಡಲು ಸೂಚನೆ
ಸುಳ್ಳು ಮಾಹಿತಿ ನೀಡಿ ಪಡಿತರ ಕಾರ್ಡ್ ಪಡೆದಿದ್ದರೆ ಅಂತಹ ಕಾರ್ಡ್ ಮುಂದಿನ ದಿನ ರದ್ದಾಗಲಿದೆ. ಅಂದಾಜು 9 ಲಕ್ಷಕ್ಕೂ ಹೆಚ್ಚಿನ ಪಡಿತರ ಚೀಟಿ ರದ್ದಾಗುವ ಸಾಧ್ಯತೆ ಇದ್ದು, ಸುಳ್ಳು ಮಾಹಿತಿ ನೀಡಿದ್ದವರಿಗೆ ಸಂಕಷ್ಟ ಸಮೀಪಿಸಿದೆ. ಹೀಗಾಗಿ ಪಡಿತರ ಹೊಂದಿದವರು ಈ ದಾಖಲೆಗಳನ್ನು ಸರಿಪಡಿಸುವುದು ಸಹ ಅಗತ್ಯವಾಗಿದೆ.
ದಂಡ ವಸೂಲಿ
ಅನರ್ಹ ಫಲಾನುಭವಿಗಳು ಯಾವ ದಿನಾಂಕದಿಂದ ಪಡಿತರ ಸೌಲಭ್ಯವನ್ನು ಪಡೆದಿದ್ದಾರೆ. ಎಂಬುದನ್ನು ಲೆಕ್ಕ ಹಾಕಿ ದಂಡ ವಸೂಲಿ ಮಾಡಲಾಗುತ್ತದೆ. ಅಷ್ಟೆ ಅಲ್ಲದೆ ಇದರ ಜತೆಗೆ, ಪಡಿತರ ಅಕ್ಕಿ ದುರುಪಯೋಗವಾದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೂಡ ಕೈಗೊಳ್ಳುತ್ತಿದೆ.
