
ಇಂದು ಎಟಿಎಂ ಕಾರ್ಡ್ ಬಳಕೆ ಹೆಚ್ಚಾಗಿದೆ. ಸಣ್ಣ ವಾಹಿವಾಟುಗಳನ್ನು ಸಹ ಇಂದು ಎಟಿಎಮ್ ಬಳಸಿಯೇ ಹಣ ಪಡೆಯುತ್ತೇವೆ. ಇಂದು ಬ್ಯಾಂಕ್ ಗೆ ತೆರಳಿ ಹಣ ವಹಿವಾಟು ಮಾಡುವುದನ್ನು ನಿಲ್ಲಿಸಿ ಬಿಟ್ಟಿದ್ದೇವೆ. ಅದೇ ರೀತಿ ಇಂದು ಎಟಿಎಂ ವಂಚನೆಯ ಪ್ರಕರಣಗಳು ಕೂಡ ಹೆಚ್ಚಾಗಿದ್ದು ಎಟಿಎಂ ಬಳಸುವಾಗ ಎಚ್ಚರಿಕೆ ವಹಿಸುವುದು ಕೂಡ ಅಷ್ಟೆ ಮುಖ್ಯವಾಗುತ್ತದೆ. ಇಂದು ಹಣದ ವಹಿವಾಟು ಹೆಚ್ಚಾದಂತೆ ಎಟಿಎಮ್ ಬಳಕೆ ಕೂಡ ಹೆಚ್ಚಾಗಿದೆ. ಇನ್ಮುಂದೆ ಎಟಿಎಮ್ ಕಾರ್ಡ್ ಬಳಸುವಾಗ ಈ ಬಗ್ಗೆ ಎಚ್ಚರ ವಹಿಸಿ.
ಜಿಎಸ್ ಟಿ ಸೇರ್ಪಡೆ
ಕೆಲವೊಮ್ಮೆ ಗ್ರಾಹಕರು ಖಾತೆಯಲ್ಲಿ ಹಣ ಇಲ್ಲದಿದ್ದರೂ ಅಥವಾ ಕಡಿಮೆ ಮೊತ್ತದ ಹಣ ಇದ್ದರೂ ಎಟಿಎಮ್ ಬಳಕೆ ಮಾಡುತ್ತಾರೆ. ಒಂದು ವೇಳೆ ಕಡಿಮೆ ಅಥವಾ ಬ್ಯಾಂಕ್ ಬ್ಯಾಲೆನ್ಸ್ ಇಲ್ಲದ ಕಾರಣ ಎಟಿಎಂ ವಹಿವಾಟು ವಿಫಲವಾದರೆ ಜಿ ಎಸ್ ಟಿ ಶುಲ್ಕ ವಿಧಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಬ್ಯಾಂಕ್ ನಲ್ಲಿ ಈ ನಿಯಮ ಜಾರಿ
ಈಗಾಗಲೇ ಆದ್ದರಿಂದ, PNB (ಪಂಜಾಬ್ ನ್ಯಾಷನಲ್ ಬ್ಯಾಂಕ್) ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಈ ವಿಷಯವನ್ನು ತಿಳಿದಿರಬೇಕು. ನೀವು ಎಟಿಎಂನಿಂದ ಹಣವನ್ನು ಪಡೆಯಲು ಬಯಸಿದರೆ, ಮೊದಲು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದನ್ನು ಪರಿಶೀಲಿಸಿ. ನಂತರ ಹಣ ಪಡೆಯಿರಿ. ಇಲ್ಲದಿದ್ದಲ್ಲಿ ನಿಮ್ಮ ಖಾತೆಯಿಂದ ಹಣ ಕಟ್ ಆಗುತ್ತದೆ.
ಶುಲ್ಕ ಪಾವತಿ ಎಷ್ಟು?
ನೀವು ಬೇರೆ ಬ್ಯಾಂಕ್ ಎಟಿಎಂಗಳಲ್ಲಿ ಹೆಚ್ಚಿನ ವಹಿವಾಟು ನಡೆಸುದಾದರೆ ಒಂದುವೇಳೆ 5 ಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದರೆ, ಪ್ರತಿ ವಹಿವಾಟಿಗೆ 20 ರೂ. ವರೆಗೆ ಶುಲ್ಕ ಪಾವತಿ ಮಾಡುವುದು ಕಡ್ಡಾಯವಾಗಿದೆ.
ತಾಂತ್ರಿಕ ತೊಂದರೆ
ಎಟಿಎಂನಿಂದ ಟ್ರಾನ್ಸಕ್ಷನ್ ಮಾಡುವಾಗ ಕೆಲವೊಂದು ಸಂದರ್ಭದಲ್ಲಿ ನೀವು ತಾಂತ್ರಿಕ ತೊಂದರೆಗೆ ಒಳಗಾಗಗುವುದು ಪಕ್ಕವಾಗಿದೆ. ಹಲವು ಬಾರಿ ಒಳಗಾಗುತ್ತೀರಿ. ಒಂದು ವೇಳೆ ನೀವು ಎಟಿಎಂನಿಂದ ಹಣ ಬರದೇ, ನಿಮ್ಮ ಅಕೌಂಟ್ನಿಂದ ದುಡ್ಡು ಕಡಿತ ಆದರೆ , ಅಥವಾ ಕೆಲವೊಮ್ಮೆ ಹಾನಿಯಾದ ನೋಟುಗಳು ಬಂದರೆ ಇದಕ್ಕೆ ಅರ್ ಬಿ ಐ ಹೊಸ ಅವಕಾಶವನ್ನು ನೀಡಿದೆ. ಇದಕ್ಕೆ ನೀವು ನೇರವಾಗಿ ಬ್ಯಾಂಕುಗಳಿಗೆ ತೆರಳಿ ಹಣ ಬದಲಾವಣೆ ಮಾಡಿಕೊಳ್ಳಬಹುದು. ಹಣ ಬಾರದೇ ಇದ್ದಲ್ಲಿ ಬ್ಯಾಂಕ್ ಗೆ ಮಾಹಿತಿ ನೀಡಿದರೆ ಒಂದು ವಾರದ ಒಳಗೆ ಹಣ ಖಾತೆಗೆ ವಾಪಸ್ಸು ಕಳುಹಿಸುತ್ತಾರೆ.
