Home ಸರಕಾರಿ ಯೋಜನೆಗಳು ಮಹಿಳೆಯರಿಗೆ ಗುಡ್ ನ್ಯೂಸ್, ಈ ಯೋಜನೆಗಳ ಮೂಲಕ ಸಿಗಲಿದೆ ಕಡಿಮೆ ಬಡ್ಡಿಯ ಸಾಲ ಸೌಲಭ್ಯ

ಮಹಿಳೆಯರಿಗೆ ಗುಡ್ ನ್ಯೂಸ್, ಈ ಯೋಜನೆಗಳ ಮೂಲಕ ಸಿಗಲಿದೆ ಕಡಿಮೆ ಬಡ್ಡಿಯ ಸಾಲ ಸೌಲಭ್ಯ

0
ಮಹಿಳೆಯರಿಗೆ ಗುಡ್ ನ್ಯೂಸ್, ಈ ಯೋಜನೆಗಳ ಮೂಲಕ ಸಿಗಲಿದೆ ಕಡಿಮೆ ಬಡ್ಡಿಯ ಸಾಲ ಸೌಲಭ್ಯ

ಮಹಿಳೆಯರಿಗಾಗಿ ಸರಕಾರ ಹಲವು‌ ರೀತಿಯ ಯೋಜನೆಯನ್ನು ಜಾರಿಗೆ ತರುತ್ತಲೆ ಇದ್ದು ಮಹಿಳಾ ಮಣಿಗಳಿಗೆ ಹೆಚ್ಚಿನ ಪ್ರಶಾಸ್ತ್ಯ ನೀಡುತ್ತಿದೆ. ಅದೇ ರೀತಿ ಆರ್ಥಿಕವಾಗಿ ಉತ್ತೇಜಿಸುವ ನಿಟ್ಟಿನಲ್ಲಿ ಕಡಿಮೆ ಬಡ್ಡಿ ಮೂಲಕ ಸಾಲ ಸೌಲಭ್ಯ ನೀಡಲು ಮುಂದಾಗಿದ್ದು ಇದೀಗ ಮಹಿಳೆಯರ ಉದ್ಯೋಗಕ್ಕಾಗಿ ಮಹಿಳಾ ಸಬಲೀಕರಣಕ್ಕಾಗಿ ಕಡಿಮೆ ಬಡ್ಡಿ ದರದಲ್ಲಿ ಮೂರು ಲಕ್ಷ ರೂಪಾಯಿ ಸಾಲವನ್ನು ನೀಡಲು ಮುಂದಾಗಿದೆ.

ಯಾವೆಲ್ಲ ಯೋಜನೆ ಜಾರಿಯಲ್ಲಿದೆ?

ಉದ್ಯೋಗಿನಿ ಯೋಜನೆ

ಸ್ವಂತ ಉದ್ಯೋಗವನ್ನು ಪಡೆಯಲು‌ ಬಯಸಿದಂತಹ ಮಹಿಳೆಯರಿಗೆ ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇದ್ದು ಇದರ ಮೂಲಕ ಪ್ರತಿ ಮಹಿಳೆಗೆ ಮೂರು ಲಕ್ಷದವರೆಗೆ ಸಾಲವು ಸಿಗಲಿದೆ. ಇದರ ಮೂಲಕ ಸ್ವ ಉದ್ಯೋಗವನ್ನು ಪ್ರಾರಂಭಿಸಿ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದಬಹುದಾಗಿದೆ.ಅದರಲ್ಲೂ ಪರಿಶಿಷ್ಟ ಜಾತಿಯ ಮಹಿಳೆಯರಿಗೆ 50% ರಿಯಾಯಿತಿಯಲ್ಲಿ ಸಬ್ಸಿಡಿ ನೀಡಲಾಗುತ್ತಿದೆ.

ಶ್ರಮ ಶಕ್ತಿ ಯೋಜನೆ
ಅದೇ ರೀತಿ ಮಹಿಳೆಯರು ಶ್ರಮ ಶಕ್ತಿ ಯೋಜನೆ ಮೂಲಕವು ಸಾಲ ಸೌಲಭ್ಯ ಪಡೆಯಬಹುದಾಗಿದೆ.‌ಈ ಯೋಜನೆಯ ಅಡಿಯಲ್ಲಿ ಮಹಿಳೆಯರು 50,000ಗಳ ಸಾಲ ಸೌಲಭ್ಯವನ್ನು ಸರ್ಕಾರದಿಂದ ಪಡೆಯಲು ಅವಕಾಶ ಇದೆ.ಇದರ ಮೂಲಕ 4% ರಷ್ಟು ಬಡ್ಡಿದರವನ್ನು ವಿಧಿಸಲಾಗುತ್ತದೆ. 36 ತಿಂಗಳಲ್ಲಿ ಅರ್ಜಿದಾರರು ಅರ್ಧ ಸಾಲದ ಮೊತ್ತವನ್ನು ಪಾವತಿಸಿದರೆ ಇತರ ಅರ್ಧ ಮೊತ್ತದ ಹಣವನ್ನು ಅರ್ಜಿದಾರರು ಪಾವತಿಸಬೇಕಾಗಿಲ್ಲ.

ಪ್ರೇರಣಾ ಯೋಜನೆ

ಅದೇ ರೀತಿ ಮಹಿಳೆಯರು ಪ್ರೇರಣಾ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಕೂಡ ಇದ್ದು, ಒಂದು ಸಂಘದಲ್ಲಿ ಕನಿಷ್ಠ 10 ಮಹಿಳೆಯರು ಇದ್ದರೆ ಈ ಯೋಜನೆ ಅಡಿಯಲ್ಲಿ 15,000 ಸಹಾಯಧನ 10,000 ಸಾಲ, ಒಟ್ಟು 25,000 ರೂಪಾಯಿಗಳ ಸಾಲ ಸಿಗುತ್ತದೆ. ಇದರಿಂದಾಗಿ ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಸಹಾಯವಾಗುತ್ತದೆ.ಒಂದು ಸಂಘಕ್ಕೆ 2.50 ಲಕ್ಷ ರೂಪಾಯಿ ಸಾಲ ಸಿಗಲಿದ್ದು, 4% ಬಡ್ಡಿದರದಲ್ಲಿ ಈ ಸಾಲ ಸೌಲಭ್ಯ ಸಿಗುತ್ತದೆ.

ಸ್ತ್ರೀ ಶಕ್ತಿ
ಅದೇ ರೀತಿ ಮಹಿಳೆಯರಿಗೆ ಸ್ತ್ರಿಶಕ್ತಿ ಸಂಘಟನೆಗಳ ಮೂಲಕ ತಲಾ 2 ಲಕ್ಷ ರೂಪಾಯಿಯ ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರೆಯಲಿದೆ. ಮಹೀಳೆಯರಿಗೆ ಈ ಯೋಜನೆ ಬಹಳಷ್ಟು ಬೆಂಬಲ ನೀಡುತ್ತಿದ್ದು, ರಾಜ್ಯದಲ್ಲಿನ 25,000 ಮಹಿಳಾ ಸಬಲೀಕರಣ ಸಂಸ್ಥೆಗಳ ಮೂಲಕ 2 ಲಕ್ಷ ರೂಪಾಯಿ ಹಣ ಬಡ್ಡಿರಹಿತವಾಗಿ ಮಹಿಳೆಯರಿಗೆ ನೀಡಲಿದೆ. ಅದತಲ್ಲೂ ಇದೀಗ ಮಹಿಳೆಯರ ಸಂಘಟನೆಗಳನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಸರಕಾರ ಮತ್ತಷ್ಟು ಯೋಜನೆಗಳನ್ನು ರೂಪಿಸಿದೆ.

 

LEAVE A REPLY

Please enter your comment!
Please enter your name here