
ಇಂದು ಆಧಾರ್ ಕಾರ್ಡ್ ಅನ್ನೋದು ಪ್ರತಿ ಯೊಬ್ಬ ವ್ಯಕ್ತಿಗೂ ಮುಖ್ಯವೆನಿಸಿದೆ. ಸರಕಾರದ ಯಾವುದೇ ದಾಖಲೆ ಪಡೆಯುದಾದರೂ ಈ ಆಧಾರ್ ಕಾರ್ಡ್ ಮುಖ್ಯವಾಗಿದ್ದು ಹುಟ್ಟಿದ ಮಕ್ಕಳಿಂದ ಹಿಡಿದು ವೃದ್ಧಾಪ್ಯದವರೆಗೂ ಪ್ರತಿಯೊಬ್ಬ ವ್ಯಕ್ತಿಗೂ ಆಧಾರ್ ಕಾರ್ಡ್ ಮುಖ್ಯವೆನಿಸಿದೆ. ನಿಮ್ಮ ಆಧಾರ್ ಕಾರ್ಡ್ ಮೂಲಕ ನೀವು ಹಲವಾರು ರೀತಿಯ ಸೇವೆಗಳನ್ನು ಪಡೆಯಬಹುದು. ಆದರೆ ನಿಮ್ಮ ಆಧಾರ್ ಅನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಯು ಕೂಡಾ ಹೆಚ್ಚು ಇದ್ದು ಅದನ್ನು ದುರ್ಬಳಕೆ ಮಾಡುವ ಸಾಧ್ಯತೆ ಹೆಚ್ಚು ಇದೆ ಅದಕ್ಕಾಗಿ ನೀವು ಜಾಗೃತೆ ವಹಿಸುವುದು ಅತೀ ಮುಖ್ಯ.
ಅವಧಿ ವಿಸ್ತರಣೆ
ಆಧಾರ್ ಕಾರ್ಡ್ ಅನ್ನು ನವೀಕರಿಸಲು ಡಿಸೆಂಬರ್ 14 ಕೊನೆಯ ದಿನಾಂಕವನ್ನು ನೀಡಿದ್ದ ಯುಐಡಿಎಐ ಸಂಸ್ಥೆ ಇದೀಗ ಆ ದಿನಾಂಕವನ್ನು ವಿಸ್ತರಣೆ ಮಾಡಿದ್ದು ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಮೈ ಆಧಾರ್ ಮೂಲಕ ಮಾರ್ಚ್ 14ರವರೆಗೂ ಉಚಿತವಾಗಿ ಆಧಾರ್ ಅಪ್‌ಡೇಟ್ ಮಾಡಲು ಅವಕಾಶ ಇದ್ದು ಆ ಬಳಿಕ ಶುಲ್ಕ ಪಾವತಿಸಿಯೇ ಅಪ್‌ಡೇಟ್ ಮಾಡಬೇಕಾಗುತ್ತದೆ. ಇನ್ನೂ ದಾಖಲೆಗಳನ್ನು ಅಪ್‌ಡೇಟ್ ಮಾಡುವ ಸಮಯವನ್ನು ಡಿಸೆಂಬರ್ 14ರಿಂದ 2024ರ ಮಾರ್ಚ್ 14ರವರೆಗೆ ವಿಸ್ತರಿಸಲಾಗಿದೆ. ಈ ಗಡುವನ್ನು ವಿಸ್ತರಿಸುತ್ತಿರುವುದು ಇದು ಎರಡನೇ ಬಾರಿ ಆಗಿದೆ.
ಇಲ್ಲಿ ನವೀಕರಣ ಮಾಡಿ
ನೀವು ಆಧಾರ್ ನವೀಕರಣ ಮಾಡುದಾದರೆ https://myaadhaar.uidai.gov.in ಈ ಲಿಂಕ್ ಗೆ ಭೇಟಿ ಕೊಟ್ಟು ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ನವೀಕರಣ ಮಾಡಬಹುದಾಗಿದೆ. ಆಧಾರ್ ಕಾರ್ಡ್ ಅನ್ನು ನವೀಕರಣ ಮಾಡುದಾದರೆ ನೀವು ಆಧಾರ್ ಕಾರ್ಡ್‌ನಲ್ಲಿರುವ ಹೆಸರು, ಹುಟ್ಟಿದ ದಿನಾಂಕ, ವಿಳಾಸ, ಲಿಂಗ ಇತ್ಯಾದಿ ದಾಖಲೆ ಸರಿಪಡಿಸಬಹುದಾಗಿದೆ. ಅಷ್ಟೆ ಅಲ್ಲದೆ ಆನ್‌ಲೈನ್‌ನಲ್ಲಿ ಆಧಾರ್ ಅನ್ನು ನವೀಕರಿಸಲು, ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಣ ಮಾಡುವುದು ಸಹ ಅವಶ್ಯಕ. ಇಲ್ಲದಿದ್ದರೆ ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ ಮಾಡಲು ಸಾಧ್ಯ ಆಗುವುದಿಲ್ಲ.
ಆಧಾರ್ ಕಾರ್ಡ್ ವಂಚನೆ ಜಾಲ ಪತ್ತೆ
ಇಂದು ಆಧಾರ್ ಕಾರ್ಡ್ ನಲ್ಲಿ ಮೋಸದ ವಂಚನೆಗಳು ಹೆಚ್ಚಾಗಿದ್ದು ಇದನ್ನು ಪತ್ತೆಹಚ್ಚಲು ಆಧಾರ್ ನವೀಕರಣ ಮಾಡುವುದು ಸಹ ಅಷ್ಟೆ ಮುಖ್ಯವಾಗುತ್ತದೆ. ಮಾರ್ಗಸೂಚಿಗಳ ಪ್ರಕಾರ, ಮಗುವಿಗೆ 15 ವರ್ಷ ವಯಸ್ಸಾದಾಗ ನವೀಕರಣಕ್ಕಾಗಿ ಬಯೋಮೆಟ್ರಿಕ್‌ಗಳನ್ನು ನೀಡುವುದು ಸಹ ಅಗತ್ಯ.
