
ಇಂದು ಗೃಹಲಕ್ಷ್ಮೀ (Grahalakshmi Yojana) ಯೋಜನೆ ಬಗ್ಗೆ ಮಾತುಕತೆ ಹೆಚ್ಚಾಗಿದೆ. ಕೆಲವು ಮಹಿಳೆಯರು ತಮಗೆ ಹಣ ಬಂದ ವಿಚಾರದ ಬಗ್ಗೆ ಖುಷಿ ಹಂಚಿಕೊಂಡರೆ ಕೆಲವು ಮಹಿಳೆಯರು ತಮಗೆ ಹಣ ಬಂದಿಲ್ಲ ಎಂದು ಬೇಸರ ತೋಡಿಕೊಂಡಿದ್ದಾರೆ. ಆಗಸ್ಟ್ 30 ರ ವೇಳೆಗೆ ಅದ್ಧೂರಿಯಾಗಿ ಈ ಯೋಜನೆಗೆ ಚಾಲನೆ ಸಿಕ್ಕಿದ್ದು ಹಲವಾರು ಗಣ್ಯವ್ಯಕ್ತಿಗಳೊಂದಿಗೆ ಈ ಯೋಜನೆ ಸಾಕ್ಷಿಯಾಗಿತ್ತು. ಆದರೆ ಕೆಲವರಿಗೆ ಮಾತ್ರ ಹಣ ಬಂದಿದೆ ಇನ್ನುಳಿದವರಿಗೆ ಇನ್ನು ಕೂಡ ಹಣ ಬರದೇ ವಿಳಂಬ ಆಗುತ್ತಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಖೆಯ ಸಚಿವೆ ಮಾಹಿತಿ ನೀಡಿದ್ದಾರೆ.
ರೇಷನ್ ಕಾರ್ಡ್ ದುರುಪಯೋಗ
ಪಡಿತರ ಕಾರ್ಡ್ ಹೊಂದಿದ್ದ ಮಹಿಳೆಯರಿಗೆ ಮಾತ್ರ ಈ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಯಾಗುತ್ತದೆ. ಕುಟುಂಬದಲ್ಲಿ ಹಿರಿಯ ಮಹಿಳೆಗೆ ತಿಂಗಳಿಗೆ ಎರಡು ಸಾವಿರ ನೀಡುವ ಯೋಜನೆ ಆಗಿದ್ದು ಕೆಲವರು ತಮ್ಮ ರೇಷನ್ ಕಾರ್ಡ್ ಅನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ತಪ್ಪು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದ್ದಾರೆ. ಇಂತವರಿಗೆ ಗೃಹಲಕ್ಷ್ಮೀ ಹಣ ದೊರೆಯದೆ ಮತ್ತಷ್ಟು ಸಮಸ್ಯೆ ಸೃಷ್ಟಿ ಮಾಡಿದೆ.
ಹಣ ಬಾರದೇ ಇರಲು ಕಾರಣ
ಗೃಹಲಕ್ಷ್ಮೀ ಯೋಜನೆಯ ಹಣ ಅನೇಕ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಬರಲು ಬಾಕಿ ಇದೆ. ಹಣ ಬರದಿರಲು ಪ್ರಮುಖ ಕಾರಣವೂ ಇದ್ದು ಈ ಬಗ್ಗೆ ಆಹಾರ ಇಲಾಖೆಯಿಂದ ಒಂದು ಮಹತ್ವದ ಆದೇಶ ಬಂದಿದೆ. ಗೃಹಲಕ್ಷ್ಮೀ ಹಣ ಪಡೆಯಲು ರೇಷನ್ ಕಾರ್ಡ್ ಮನೆಯ ಮಹಿಳೆ ಹೆಸರಲ್ಲಿ ಇರಬೇಕು ಇಲ್ಲದಿದ್ದಲ್ಲಿ ಹಣ ಜಮೆ ಯಾಗುವುದಿಲ್ಲ. ಅದೇ ರೀತಿ ನಿಮ್ಮ ರೇಷನ್ ಕಾರ್ಡ್ ಲಿಂಕ್ ಆಗಿರಬೇಕು.
ಅರ್ಜಿ ತಿರಸ್ಕೃತ
ಗೃಹಲಕ್ಷ್ಮೀ ಯೋಜನೆಗೆ APL ಕಾರ್ಡು ದಾರರು, ಅರ್ಹತೆ ಇಲ್ಲದವರು ಅರ್ಜಿ ಹಾಕಿದ್ದು ಈ ಬಗ್ಗೆ ಪರಿಶೀಲನೆ ಆಗಿ ಕೆಲವರ ಅರ್ಜಿ ತಿರಸ್ಕೃತ ಆಗಿದೆ. ಈಗಾಗಲೇ 1.17ಲಕ್ಷ ರೇಶನ್ ಕಾರ್ಡ್ ತಿದ್ದು ಪಡಿಗೆ ಆಹಾರ ಇಲಾಖೆ ಸಮ್ಮತಿ ಸೂಚಿಸಿದ್ದು ಅನ್ಯರನ್ನು ಅಂದರೆ ಕುಟುಂಬ ಸದಸ್ಯರಲ್ಲದವರನ್ನು ಸೇರ್ಪಡೆ ಮಾಡಿದರೆ, ನಕಲಿ ವಿಳಾಸ ನೀಡಿ ಅರ್ಜಿ ಸಲ್ಲಿಸಿದರೆ ಅರ್ಜಿ ತಿರಸ್ಕೃತ ವಾಗುತ್ತದೆ.
ಹಣ ಬಂದಿದೆಯಾ ಚೆಕ್ ಮಾಡಿ
ನವೆಂಬರ್ ತಿಂಗಳ ಹಣ ಇನ್ನಷ್ಟೆ ಜಮೆಯಾಗಬೇಕಿದ್ದು ಗೃಹಲಕ್ಷ್ಮಿ ಯೋಜನೆಯೆ ಹಣ ಜಮೆ ಆಗಿರೋದನ್ನು ಖಚಿತಪಡಿಸಿಕೊಳ್ಳಲು ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://sevasindhu.karnataka.gov.in ಲಿಂಕ್ ಗೆ ಹೋದ್ರೆ ಗೃಹಲಕ್ಷ್ಮಿ ಯೋಜನೆಯ ಸಂಪೂರ್ಣ ಮಾಹಿತಿ ನಿಮಗೆ ಸಿಗುತ್ತದೆ.
