
ಸರಕಾರ ಪಂಚ ಗ್ಯಾರೆಂಟಿ ಯೋಜನೆಯಲ್ಲಿ ಮೊದಲು ಜಾರಿಗೆ ಬಂದ ಶಕ್ತಿಯೋಜನೆ ಬಹುಪಾಲು ಯಶಸ್ವಿಯಾಗಿದ್ದು ಬಳಿಕ ಗೃಹಲಕ್ಷ್ಮೀ, ಅನ್ನಭಾಗ್ಯ ಮತ್ತು ಗೃಹಜ್ಯೋತಿ ಯೋಜನೆ ಕೂಡ ಚಿರ ಪರಿಚಿತ ಆಗಿತ್ತು ಇದೀಗ ಐದನೆ ಗ್ಯಾರೆಂಟಿ ಯೋಜನೆಗೆ ಕೂಡ ಸಮಯ ನಿಗಧಿಸಲಾಗಿದೆ. ಈ ಹಿಂದೆ ಯುವನಿಧಿ ಯೋಜನೆಯನ್ನು ಡಿಸೆಂಬರ್ ನ ಮೊದಲ ವಾರಕ್ಕೆ ಆರಂಭ ಮಾಡುವುದಾಗಿ ತಿಳಿಸಲಾಗಿತ್ತು ಆದರೆ ಜಾರಿಗೆ ತಂದಿರಲಿಲ್ಲ. ಈಗ ಆ ಬಗ್ಗೆ ಬಿಗ್ ಅಪ್ಡೇಟ್ ಮಾಹಿತಿ ಸಿಕ್ಕಿದೆ.
ಪದವಿ ಮತ್ತು ಡಿಪ್ಲೊಮಾ ಆದವರಿಗೆ ನಿರುದ್ಯೋಗ ಸಂದರ್ಭದಲ್ಲಿ ಪ್ರೋತ್ಸಾಹ ನೀಡುವ ಸಲುವಾಗಿ ಹುಟ್ಟಿಕೊಂಡ ಯುವನಿಧಿ ಈಗ ಮತ್ತೆ ಚರ್ಚೆಯಾಗುತ್ತಿದೆ. ಈಗ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಟ್ವಿಟ್ಟರ್ ಎಕ್ಸ್ ನಲ್ಲಿ ಮಾಹಿತಿ ನೀಡಿದ್ದಾರೆ. ಹಾಗಾಗಿ ಯುವನಿಧಿ ಯಾವಾಗ ಬರುತ್ತೆ ಎಂದು ಕಾಯುತ್ತಾ ಇದ್ದವರಿಗೆ ಇದೀಗ ಮಹತ್ವದ ಮಾಹಿತಿ ಸಿಗುತ್ತಿದೆ.
ಯಾರು ಅರ್ಹರು?
ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದ ಪ್ರಕಾರ ಪದವಿ ಅಥವಾ ಡಿಪ್ಲೊಮಾ ಪಾಸ್ ಆದವರು ಈ ಯೋಜನೆಗೆ ಅರ್ಹರಾಗುತ್ತಾರೆ. ಪದವಿ ಮುಗಿಸಿ 6ತಿಂಗಳಾಗಿಯೂ ಯಾವುದೇ ಉದ್ಯೋಗ ಅಥವಾ ಸ್ನಾತಕೋತ್ತರ ಪದವಿ ಮಾಡದೇ ಇದ್ದವರಿಗೆ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಫಲ ಸಿಗಲಿದೆ. ಯೋಜನೆಗೆ ಅರ್ಜಿ ಸಲ್ಲಿಸುವ ಪದವಿ ವಿದ್ಯಾಭ್ಯಾಸ ಪಡೆದವರಿಗೆ 3,000 ಮಾಸಿಕ ಸಿಗಲಿದೆ, ಡಿಪ್ಲೊಮಾ ಮಾಡಿದವರಿಗೆ 1,500 ರೂಪಾಯಿ ಮಾಸಿಕ ಸಿಗಲಿದೆ.
ಎಲ್ಲಿವರೆಗೆ ಈ ಸೌಲಭ್ಯ ಸಿಗಲಿದೆ
ಈ ಒಂದು ಸೌಲಭ್ಯವು ಉದ್ಯೋಗ ಸಿಗುವವರೆಗೆ ಅಥವಾ ತಮ್ಮ ಶಿಕ್ಷಣ ಮುಗಿದು 2ವರ್ಷದ ವರೆಗೆ ಯೋಜನೆ ಮುಖೇನ ಹಣ ಪಡೆಯಬಹುದು. ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು. ಹಾಗಾಗಿ ಇದು ನೇರವಾಗಿ ಫಲಾನುಭವಿಗಳ ಉಪಯೋಗಕ್ಕೆ ಲಭ್ಯ ಆಗುವ ಕಾರಣ ಕೆಲಸ ಸಿಗುವವರೆಗೆ ಆರ್ಥಿಕ ಬೆಂಬಲ ಸಿಕ್ಕಂತಾಗುವುದು.
ಯಾವಾಗ ಜಾರಿ?
ಈ ಒಂದು ಯೋಜನೆಯು ಜನವರಿಯಿಂದ ಫಲಾನುಭವಿಗಳ ಖಾತೆಗೆ ಹಣ ಬೀಳಲಿದ್ದು ಅದಕ್ಕೂ ಮೊದಲೇ ಅರ್ಜಿ ಸಲ್ಲಿಸಲು ಅವಧಿ ನೀಡಲಿದೆ. ಈ ಮೂಲಕ ಡಿಸೆಂಬರ್ 21ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು. ಈ ಮೂಲಕ ಈ ತಿಂಗಳ ಕೊನೆ ವರೆಗೆ ಅರ್ಜಿ ಸ್ವೀಕಾರ ಪ್ರಕ್ರಿಯೆ ನಡೆದು ಹೊಸ ವರ್ಷದಿಂದ ಹಣ ಮಂಜೂರಾಗಲಿದೆ. ಐದು ಲಕ್ಷಕ್ಕೂ ಅಧಿಕ ಯುವ ಜನರಿಗೆ ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳಾಗಲು ಅವಕಾಶ ಸಿಗಲಿದೆ. ಅರ್ಜಿ ಸಲ್ಲಿಸಲು https://sevasindhu.karnataka.gov.in ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿ.
