
ಮಹಿಳೆಯರಿಗೆ ಮುಟ್ಟಿನ ಅವಧಿಯಲ್ಲಿ ಹೊಟ್ಟೆ ನೋಯುವುದು, ಬೆನ್ನು ನೋಯುವುದು, ಇನ್ನು ಅನೇಕ ವಿಧವಾದ ಮಾನಸಿಕ ಮತ್ತು ದೈಹಿಕ ಸಮಸ್ಯೆ ಎದುರಿಸುತ್ತಲೇ ಇರಬೇಕು. ಹಾಗಾಗಿ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಕೆಲ ವಿನಾಯಿತಿ ನೀಡಬೇಕು. ಋತುಚಕ್ರ ಅವಧಿಯಲ್ಲಿ ಪೇಯ್ಡ್ ಲೀವ್ ನೀಡಬೇಕು ಎಂಬ ಬಗ್ಗೆ ಅನೇಕ ಮನವಿ ಸರಕಾರಕ್ಕೆ ಬಂದಿದ್ದು ಸದ್ಯ ಈ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.
ಪಿರಿಯಡ್ ಲೀವ್ ನೀಡಬೇಕು ಎಂದು ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಸಂಘ ಸಂಸ್ಥೆಗಳು ಹಾಗೂ ಸಾಮಾಜಿಕ ಸಂಸ್ಥೆ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಬಂದಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಈ ಮೂಲಕ ಇಷ್ಟು ದಿನಗಳ ಕಾಲ ಏರ್ಪಟ್ಟಿದ್ದ ಅಷ್ಟು ಗೊಂದಲಕ್ಕೆ ಉತ್ತರ ದೊರೆತಂತಾಗಿದೆ.
ಸಚಿವೆ ಹೇಳಿದ್ದೇನು?
ಈ ಬಗ್ಗೆ ಕೇಂದ್ರ ಸಚಿವೆಯಾದ ಸ್ಮೃತಿ ಇರಾನಿ ಅವರು ಡಿಸೆಂಬರ್ 14ರಂದು ರಾಜ್ಯಸಭೆಯಲ್ಲಿ ನಡೆದ ಸಭೆ ಸಂದರ್ಭದಲ್ಲಿ ಅವರು ಮಾತನಾಡಿದ್ದಾರೆ. ಪಿರಿಯಡ್ ಲೀವ್ ವಿಚಾರ ಸಭೆಯಲ್ಲಿ ಚರ್ಚೆ ಆಗುತ್ತಿದ್ದು ಈ ಬಗ್ಗೆ ಅವರು ಸೂಕ್ತ ಅಭಿಪ್ರಾಯ ತಿಳಿಸಿದ್ದಾರೆ. ಋತು ಚಕ್ರ ಎಂಬುದು ಮಹಿಳೆಯರ ಜೀವನದ ಒಂದು ನೈಸರ್ಗಿಕ ಭಾಗವಾಗಿದೆ. ಅದನ್ನು ರೋಗ ಅಥವಾ ಅಂಗವಿಕಲತೆ ಎಂಬ ಭಾವನೆ ಬೇಡ. 10ರಿಂದ 19ವರ್ಷದ ಮಹಿಳೆಯರಿಗೆ ನೀಡಲಾಗುವ ಋತು ಚಕ್ರ ನೈರ್ಮಲ್ಯ ನಿರ್ವಹಣೆ ಯೋಜನೆಯನ್ನು ಸಚಿವರು ಎತ್ತಿ ಹಿಡಿದಿದ್ದಾರೆ.
ಸಚಿವರಿಗೆ ಬೆಂಬಲ
ಸಚಿವರ ಈ ಒಂದು ಹೇಳಿಕೆಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ನಟಿ ಈ ಬಗ್ಗೆ ಕಂಗನಾ ರಣಾವತ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಸ್ಮೃತಿ ಇರಾನಿ ಅವರ ಪೇಯ್ಡ್ ಲೀವ್ ನೀಡುವ ಅಗತ್ಯ ಇಲ್ಲ ಎಂಬ ವಾದವನ್ನು ಒಪ್ಪಿ ತಾವು ಕೂಡ ಕೆಲ ಸಾಲನ್ನು ಟೈಪ್ ಮಾಡಿ ಬರೆದಿದ್ದಾರೆ.
ಏನೆಂದು ಬರೆದುಕೊಂಡರು
ಮಹಿಳೆ ಇಂದು ಪ್ರತೀ ಹಂತದಲ್ಲಿ ಕೂಡ ಕೆಲಸ ಮಾಡಿಕೊಂಡೆ ಬಂದಿದ್ದಾರೆ. ಮಕ್ಕಳನ್ನು ಬೆಳೆಸುವುದು, ಮನೆ ಕೆಲಸ, ಕಚೇರಿ ಕೆಲಸ ಹೀಗೆ ಎಲ್ಲ ಹಂತದಲ್ಲಿ ಆಕೆಯ ಸೇವೆ ಹಿಂದಿನಿಂದಲೂ ಇದ್ದದ್ದೇ ಆಗಿದೆ. ಆದರೆ ಋತುಚಕ್ರ ಅವಧಿಯಲ್ಲಿ ಈ ವ್ಯವಸ್ಥೆ ಬದಲಾಗಲಿದೆ ಎಂಬ ಮಾತಿದೆ. ಆದರೆ ಋತು ಚಕ್ರ ಅವಧಿಯಲ್ಲಿ ಪೇಯ್ಡ್ ಲೀವ್ ನೀಡುವ ಅಗತ್ಯವಿಲ್ಲ. ಇದು ನಮ್ಮ ದೇಹದ ಆರೋಗ್ಯ ಪೂರ್ಣ ವ್ಯವಸ್ಥೆಯೇ ಹೊರತು ಯಾವುದೇ ರೋಗ , ತೊಂದರೆ , ಸಮಸ್ಯೆ ಅಲ್ಲ ಅದನ್ನು ನಾವು ಅರ್ಥೈಸಿಕೊಳ್ಳಬೇಕು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ.
