
ದೇಶದಲ್ಲೇ ಶೈಕ್ಷಣಿಕ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡಿದ ಕಲಾವಿದರು, ಅಭಿನಯಕಾರರು, ಕ್ರೀಡಾ ಸಾಧಕರು, ಸಂಗೀತ, ನೃತ್ಯ ಇನ್ನೂ ಅನೇಕ ವೃತ್ತಿ ಪಡೆಯುವ ನೆಲೆಯಲ್ಲಿ ಕೊಡುಗೆ ನೀಡುತ್ತಾ ಬಂದ ಆಳ್ವಾಸ್ ಕಾಲೇಜು ಮೊದಲಿಂದಲೂ ಕ್ರಿಯಾತ್ಮಕ ಮತ್ತು ಅಭಿವೃದ್ಧಿ ಕಾರ್ಯ ಚಟುವಟಿಕೆಯಿಂದ ಹೆಸರು ಮಾಡುತ್ತಲೇ ಬಂದಿದೆ. ಅದೇ ರೀತಿ ಶೈಕ್ಷಣಿಕ ಮತ್ತು ಮನೋರಂಜನಾ ವೈವಿದ್ಯಮಯ ಕಾರ್ಯಕ್ರಮ ಪರಿಚಯಿಸುತ್ತಾ ಬಂದಿದೆ.
ಸಾಂಸ್ಕೃತಿಕ ಸಿರಿ ಸೊಬಗ ಪಸರಿಸುವ ಆಳ್ವಾಸ್ ಪ್ರತಿಷ್ಠಾನದ ವಿರಾಸತ್ 2023ಕ್ಕೆ ಚಾಲನೆ ಸಿಕ್ಕಿದ್ದು ನಾಲ್ಕು ದಿನದ ಕಾರ್ಯಕ್ರಮ ಇದಾಗಿದೆ. ಈ ಒಂದು ಕಾರ್ಯಕ್ರಮ ಹಿಂದಿನ ಎಲ್ಲ ಪ್ರಸಿದ್ಧಿಗಿಂತಲೂ ಒಂದು ಹೆಜ್ಜೆ ಮುಂದಿದೆ ಎಂದರೂ ತಪ್ಪಾಗದು. ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಅವರ ಸ್ಮರಣಾರ್ಥವಾಗಿ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಅವರ (ಕೃಷಿ ಸಿರಿ) ಆವರಣದಲ್ಲಿ ಆಹಾರ ಮೇಳ, ಫಲಪುಷ್ಪ ಮೇಳ, ಚಿತ್ರ ಕಲಾ ಮೇಳ, ಛಾಯಚಿತ್ರ ಮೇಳ ಹೀಗೆ ಅನೇಕ ಮೇಳಗಳ ಸಂಗಮ ಇಲ್ಲಿದೆ.
ಮೂಡುಬಿದಿರೆಯ ಆಳ್ವಾಸ್ ಕಾಲೇಜು ಈಗ ಅಕ್ಷರಶಃ ಸಾಂಸ್ಕೃತಿಕ ವೈಭವ ಸಾರುವ ತಾಣವಾಗಿ ಮಾರ್ಪಡುತ್ತಿದೆ. ಈ ವೈಭವದ ಕಾರ್ಯಕ್ರಮ ಕಣ್ಣಿಗೆ ಹಬ್ಬ ಮನಸ್ಸಿಗೆ ಆಹ್ಲಾದ ನೀಡುವ ಜೊತೆಗೆ ಆಹಾರ ಮೇಳ, ಕೃಷಿ ಮೇಳ ಇನ್ನುಅನೇಕ ವಿಚಾರ ವನ್ನು ಒಂದೇ ಸ್ಥಳದಲ್ಲಿ ತಿಳಿಸುವ ಬಗೆ ಮಾತ್ರ ನಿಜಕ್ಕೂ ಅದ್ಭುತ ಎಂದೇ ಹೇಳಬಹುದು.
ಅದ್ದೂರಿಯ ಚಾಲನೆ ನೀಡಿದ ರಾಜ್ಯಪಾಲರು
ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ಆಳ್ವಾಸ್ ವಿರಾಸತ್ ಅನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಉದ್ಘಾಟಿಸಿ ಪ್ರತಿಷ್ಠಿತ ಸಂಸ್ಥೆಯ ಆಳ್ವಾಸ್ ಬಗ್ಗೆ ಶ್ಲಾಘನೆ ನೀಡಿದರು. ಸಂಸ್ಥೆಯ ಅಭಿವೃದ್ಧಿ ಗೆ ಈ ಕಾರ್ಯಕ್ರಮವೇ ಸಾಕ್ಷಿ, ದೇಶದ ಸಂಸ್ಕೃತಿ, ಕಲೆ, ಆಚಾರ ವಿಚಾರಗಳನ್ನು ವಿವಿಧೆಡೆ ಪಸರಿಸುವ ಕಾರ್ಯ ಈ ಸಂಸ್ಥೆ ಮಾಡುತ್ತಿದೆ, ಇಂತಹ ಅಭಿವೃದ್ದಿ ಕೊಡುಗೆಗಳು ಇನ್ನಷ್ಟು ಸಂಸ್ಥೆ ಗೆ ಮಾದರಿಯಾಗಲಿ ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಶ್ಲಾಘಿಸಿದರು. ಆಳ್ವಾಸ್ ಸಂಸ್ಥೆ ಕನ್ನಡ ಮಾಧ್ಯಮ ಶಿಕ್ಷಣ ಕ್ಕೂ ಒತ್ತು ನೀಡುತ್ತಿದೆ. ಇಲ್ಲಿಯ ಶಾಲಾ ಶಿಕ್ಷಣವನ್ನು ರಾಜ್ಯಪಾಲರು ವೈಭವಿಕರಿಸಿ, ಮಾತೃಭಾಷೆ ಯ ಪ್ರೇರಣೆ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ವಿವಿಧ ಮೇಳಗಳ ಆಕರ್ಷಣೆ
28 ವರ್ಷಗಳ ಹಿಂದೆ ಆರಂಭ ಮಾಡಿದ ಈ ವಿರಾಸತ್ ಕಾರ್ಯಕ್ರಮ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಕೇವಲ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಜನರು ಸಂಭ್ರಮಿಸುತ್ತಿದ್ದ ಈ ಕಾರ್ಯಕ್ರಮ ಇದೀಗ ಜಾಗತಿಕ ಮಟ್ಟಕ್ಕೆ ವಿಸ್ತರಿಸಿದೆ. ಕೃಷಿ ಮೇಳ, ಆಹಾರ ಮೇಳ, ಕರಕುಶಲ ಮತ್ತು ಚಿತ್ರಕಲಾ ಮೇಳ, ಕಲಾಕೃತಿಗಳ ಪ್ರದರ್ಶನ ಮತ್ತಷ್ಟು ಮೆರಗನ್ನು ನೀಡಿದೆ.
ಅದ್ದೂರಿಯ ಆಳ್ವಾಸ್ ಹಬ್ಬ
ಮಕ್ಕಳಿಂದ ಹಿಡಿದು ಹಿರಿಯವರೆಗೂ ನೋಡಲು ಕಣ್ಣಿಗೆ ಹಬ್ಬ, ಸಾಲಾಗಿ ನಿಂತು ಮುದ ನೀಡುವ ಗೊಂಬೆಗಳು, ಎಂಟ್ರಿ ನೀಡುತ್ತಲೆ ಭರ ಮಾಡಿಕೊಳ್ಳುವ ಹೂವಿನ ಅಲಂಕಾರ, ಪುಟಾಣಿಗಳನ್ನು ಸೆಳೆಯುವ ಕಾರ್ಟೂನ್ ಪಾತ್ರಗಳು, ಕೃಷಿಕರನ್ನು ಗೌರವಿಸುವ ಕೃಷಿ ಮೇಳಗಳು, ರುಚಿ ಸವಿಯಲು ಬಹುಬಗೆಯ ತಿಂಡಿ ತಿನಿಸುಗಳು, ಕಲಾವಿದರ ಕೈಯಲ್ಲಿ ಮೂಡಿ ಬಂದ ಕಲಾಕೃತಿಗಳು ,ಸುಮಾರು 7 ಮೇಳಗಳ 750ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಪ್ರದರ್ಶನ ನೀಡುವ ಮಾರಾಟ ಮೇಳ ಗಳು ನೋಡುಗರನ್ನು ಕಣ್ಮನ ಸೆಳೆಯುತ್ತಿದೆ.
