
ಆಧಾರ್ ಕಾರ್ಡ್ ಭಾರತೀಯ ವಾಸ್ತವ್ಯ ಪುರಾವೆಯಲ್ಲಿ ಒಂದಾಗಿರುವುದು ನಮಗೆಲ್ಲ ತಿಳಿದ ಸಂಗತಿಯಾಗಿದೆ. ಅದೇ ರೀತಿ ವಿದ್ಯಾರ್ಥಿಗಳಿಗೆ ಬೇಕಾದ ಅಗತ್ಯ ಸೌಕರ್ಯ ಕಲ್ಪಿಸಲು ಇತ್ತೀಚೆಗೆ ಸರಕಾರದ ಮುಂದೆ ಅನೇಕ ಬೇಡಿಕೆ ಮುಂದೆ ಹೋಗಿದ್ದು ಏಕ ರೀತಿಯ ಪಠ್ಯಕ್ರಮ ಅನುಷ್ಠಾನದ ಬಗ್ಗೆ ಕೂಡ ಮತ್ತೆ ಪುನಃ ಚರ್ಚೆಯಾಗುತ್ತಿದೆ. ಇದೀಗ ವಿದ್ಯಾರ್ಥಿಗಳಿಗೆ ಒಂದು ಕಾರ್ಡ್ ವ್ಯವಸ್ಥೆ ತರಲು ಚಿಂತನೆ ನಡೆಸಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ನೀಡಲಿದ್ದೇವೆ.
ಯಾವುದು ಈ ಕಾರ್ಡ್?
ವಿದ್ಯಾರ್ಥಿಗಳಿಗೆ ಒಂದು ದೇಶ ಒಂದು ಗುರುತಿನ ಚೀಟಿ ಶೀಘ್ರವೇ ಆರಂಭ ಆಗಲಿದೆ. ಈ ಕಾರ್ಡಿನ ಹೆಸರು ಅಪರ್ ಕಾರ್ಡ್ ಎಂದು. ಕೇಂದ್ರ ಶಿಕ್ಷಣ ಇಲಾಖೆ ಮತ್ತು ಕೇಂದ್ರ ಸರಕಾರದ ಸಹಯೋಗದ ಮುಖೇನ ಈ ಒಂದು ಕಾರ್ಡ್ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ. ಇದು ಆಧಾರ್ ನಂತೆಯೇ ವಿಶಿಷ್ಟ ಗುರುತಿನ ಸಾಲಿಗೆ ಸೇರಲಿದ್ದು ಇದು 12ಅಂಕಿಗಳನ್ನು ಒಳಗೊಳ್ಳಲಿದೆ. ಇದರಲ್ಲಿ ಶೈಕ್ಷಣಿಕ ಸಂಪೂರ್ಣ ದಾಖಲಾತಿಯನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗುವ ಕಾರಣ ವಿದ್ಯಾರ್ಥಿಗಳ ಅನೇಕ ಉದ್ದೇಶಕ್ಕೆ ಒಂದೇ ಸೂರಿನಡಿಯಲ್ಲೊ ಶೈಕ್ಷಣಿಕ ಮಾಹಿತಿ ಲಭ್ಯವಾಗಲಿದೆ.
ಈ ಮಾಹಿತಿ ಇದರಲ್ಲಿ ಸಿಗಲಿದೆ
ಅಪಾರ್ ಕಾರ್ಡ್ ಮಾಡಿಸುವುದು ವಿದ್ಯಾರ್ಥಿಗಳಿಗೆ ಅನೇಕ ಉದ್ದೇಶಗಳಿಗೆ ಸಾಕಷ್ಟು ಸಹಕಾರಿ ಆಗಲಿದೆ ಎಂದು ಹೇಳಬಹುದು. ವಿದ್ಯಾರ್ಥಿಕಗಳ ಶೈಕ್ಷಣಿಕ ಮಾಹಿತಿ ತಿಳಿಸುವ ಅಂಕಪಟ್ಟಿಯಿಂದ ಹಿಡಿದು ಕ್ರಿಯಾಶೀಲ ಕಾರ್ಯ ಚಟುವಟಿಕೆಗಳು, ಪಠ್ಯೇತರ ಚಟುವಟಿಕೆಗಳು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲವೂ ಪಾಲ್ಗೊಂಡದ್ದು ಮತ್ತು ಬಹುಮಾನ ಪಡೆದ ಅಷ್ಟು ಸಂಗತಿ ಸಹ ಇದರಲ್ಲಿ ದೊರೆಯಲಿದೆ. ಒಂದು ವೇಳೆ ನೀವು ಅನೇಕ ಕಾರಣದಿಂದ ಶೈಕ್ಷಣಿಕ ಸಂಸ್ಥೆ ಬದಲಾಯಿಸಿದರೂ ಕೂಡ ಈ ವ್ಯವಸ್ಥೆ ಏಕ ಪ್ರಕಾರವಾಗೇ ಮುಂದುವರಿಯಲಿದೆ.
ಅನುಕೂಲಗಳೇನು?
*ಅಗತ್ಯ ಸಂದರ್ಭದಲ್ಲಿ ಕಾರ್ಡ್ ನಂಬರ್ ನಿಂದಲೇ ಬೇಕಾದ ಅಷ್ಟು ಮಾಹಿತಿ ಪಡೆಯಬಹುದು.
*ಸಮಯ ಹಾಗೂ ಹಣ ಉಳಿತಾಯ ಆಗಲಿದೆ.
*ಜೆರಾಕ್ಸ್ ಪ್ರತಿ ಬಳಕೆ ಮಾಡುವ ಪ್ರಮಾಣ ಕಡಿಮೆ ಆಗಲಿದ್ದು ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸಿದಂತಾಗುವುದು.
*ಡಿಜಿಟಲ್ ಆದ ಕಾರಣ ಎಂದಿದ್ದರೂ ಅದನ್ನು ಸುಲಭಕ್ಕೆ ಪಡೆಯಬಹುದು.
*ವಿದ್ಯಾರ್ಥಿಗಳು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಈ ವ್ಯವಸ್ಥೆ ಬಹಳ ಅನುಕೂಲಕರ ವಾತಾವರಣವನ್ನು ಸೃಷ್ಟಿ ಮಾಡಲಿದೆ.
ಹೀಗೆ ಮಾಡಿ
ಈ ಒಂದು ಕಾರ್ಡ್ ಅನ್ನು ನೀವು ಕೂಡ ಪಡೆಯಬೇಕಾದರೆ ಕೆಲ ಅಗತ್ಯ ಕ್ರಮ ಅನುಸರಿಸಬೇಕು. ಇದಕ್ಕೆ ಒಂದು ಅರ್ಜಿ ನಮೂನೆ ಸಹ ಇರಲಿದ್ದು ಅದರಲ್ಲಿ ನಿಮ್ಮ ಹೆಸರು , ವಿಳಾಸ ಹಾಗೂ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿದೆ ಸಲ್ಲಿಸಲೇ ಬೇಕು. ಅದೇ ರೀತಿ ವರ್ಗ, ಬ್ಯಾಚ್, ಶಾಲೆ ಇತರ ಅಗತ್ಯ ಮಾಹಿತಿ ಸಹ ನಮೋದಿಸಬೇಕು. ಇದಕ್ಕಾಗಿ ಆಧಾರ್ ಐಡಿ ಕಾರ್ಡ್ ನೋಂದಣಿ ಮತ್ತು ವಿದ್ಯಾರ್ಥಿಗಳಿಗೆ ಪೋಷಕರ ಮೊಬೈಲ್ ಸಂಖ್ಯೆ ಅಗತ್ಯವಾಗಿದೆ. ಇವೆಲ್ಲವನ್ನು ಕೆಲ ಏಜೆನ್ಸಿ ಮೂಲಕ ಸಂಗ್ರಹಿಸಿ 12ಅಂಕಿಯ ಅಪರ್ ಕಾರ್ಡ್ ಅನ್ನು ನೀಡಲಾಗುವುದು. ಅದೇ ರೀತಿ ಇದಕ್ಕಾಗಿ ವೆಬ್ಸೈಟ್ ಸಹ ಬಿಡುಗಡೆ ಆಗಲಿದೆ ಹಾಗೇ ಕ್ಯೂ ಆರ್ ಕೋಡ್ ಸಹ ಲಭ್ಯವಾಗಲಿದೆ.
