
ಉಡುಪಿ: ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಷಷ್ಟ್ಯಬ್ದ ಅಭಿವಂದನ ಸಮಾರಂಭದ ಶೋಭಾಯಾತ್ರೆೆ ಶನಿವಾರ ಅದ್ದೂರಿಯಾಗಿ ನಡೆಯಿತು.
ನಗರದ ಜೋಡುಕಟ್ಟೆೆಯಲ್ಲಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಬಳಿಕ ಕೆ. ಎಂ. ಮಾರ್ಗ ಮೂಲಕ ರಥಬೀದಿವರೆಗೆ ಮೆರವಣಿಗೆ ಸಾಗಿತು. ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅಲಂಕೃತ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ರಥಬೀದಿಯವರೆಗೆ ಸಾಗಿಬಂದರು.
ಮೆರವಣಿಗೆಯಲ್ಲಿ ವಿವಿಧ ಭಜನಾ ತಂಡಗಳ ಸಾವಿರಾರು ಮಂದಿ ಭಜಕರು, ಸಾಂಪ್ರದಾಯಿಕ ಬಿರುದಾವಳಿ, ಚೆಂಡೆ, ವಾದ್ಯ, ತಾಲೀಮು, ಬಣ್ಣದ ಕೊಡೆ, ಕೀಲು ಕುದುರೆ, ಹನುಮಂತ ವೇಷಧಾರಿ ಗಮನ ಸೆಳೆದರು. ಕುಣಿತ ಭಜನಾ ತಂಡದಲ್ಲಿ ಪುಟ್ಟ ಮಕ್ಕಳ ಕುಣಿತ ಭಜನೆ ಕಣ್ಮನ ಸೆಳೆಯಿತು. ಮೆರವಣಿಗೆಯಲ್ಲಿ ಶ್ರೀ ಆನಂದ ತೀರ್ಥ ವಿದ್ಯಾಲಯದ ಶಿಕ್ಷಕರು, ಸಿಬಂದಿ ಭಾಗವಹಿಸಿದ್ದರು.
ಗುರುವಂದನ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಯಶ್‌ಪಾಲ್ ಎ.ಸುವರ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್, ಪ್ರಮುಖರಾದ ಜಯಕರ ಶೆಟ್ಟಿ ಇಂದ್ರಾಳಿ, ಕುಯಿಲಾಡಿ ಸುರೇಶ್ ನಾಯಕ್, ದಿನಕರ್ ಬಾಬು, ಯೊಗೀಶ್ ಶೆಟ್ಟಿ, ರಾಘವೇಂದ್ರ ಕಿಣಿ, ಡಾ. ತಲ್ಲೂರು ಶಿವರಾಮ ಶೆಟ್ಟಿ, ನಯನಾ ಗಣೇಶ್, ವೀಣಾ ಶೆಟ್ಟಿ, ಸುಪ್ರಸಾದ್ ಶೆಟ್ಟಿ, ಹಿರಿಯಣ್ಣ ಟಿ. ಕಿದಿಯೂರು, ಸಾದು ಸಾಲ್ಯಾನ್, ರಂಜನ್ ಕಲ್ಕೂರ, ಮಟ್ಟಾರು ರತ್ನಾಾಕರ್ ಹೆಗ್ಡೆೆ ಮತ್ತಿತರರು ಭಾಗವಹಿಸಿದ್ದರು.
