
ರಾಜ್ಯ ಸರಕಾರದಲ್ಲಿ ಗೃಹಜ್ಯೋತಿ ಯೋಜನೆ ಜಾರಿಗೆ ಬಂದಾಗಿನಿಂದಲೂ ವಿದ್ಯುತ್ ಪೂರೈಕೆ ಪ್ರಮಾಣಕ್ಕಿಂತ ಬಳಕೆ ಮಾಡುವವರ ಪ್ರಮಾಣ ಅಧಿಕವಾಗಿದೆ. ಇದರಿಂದ ಸಾಕಷ್ಟು ಮಧ್ಯಮ ವರ್ಗದ ಕುಟುಂಬಕ್ಕೆ ಸರಾಸರಿ ಲೆಕ್ಕಾಚಾರದ ಮೇಲೆ ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಕಡಿಮೆ ವಿದ್ಯುತ್ ಬಿಲ್ ಮೊತ್ತ ಬರಿಸಬೇಕಿದ್ದು ಅನೇಕರಿಗೆ ಈ ಯೋಜನೆ ಖುಷಿ ತರಿಸಿದೆ. ಈಗ ನೇಕಾರರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡುವ ಯೋಜನೆಯೊಂದು ರೂಪುಗೊಂಡಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಯಾಕಾಗಿ ಈ ಸೌಲಭ್ಯ
ಇತ್ತೀಚೆಗೆ ಬೆಳಗಾವಿ ಅಧಿವೇಶನದಲ್ಲಿ ಸಚಿವ ಶಿವಾನಂದ ಪಾಟೀಲ್ ಅವರು ಈ ಬಗ್ಗೆ ಪ್ರಶ್ನೆ ಕೇಳಲಾಗಿ ಅದಕ್ಕೆ ಸರಿಯಾಗಿ ಸೂಕ್ತ ಉತ್ತರವನ್ನು ನೀಡಿದ್ದಾರೆ. ರಾಜ್ಯದಲ್ಲಿ ನೇಕಾರ ವೃತ್ತಿ ಕಡಿಮೆ ಆಗುತ್ತಿದ್ದು ಅದನ್ನು ಉತ್ತೇಜಿಸುವ ಸಲುವಾಗಿ ಈ ಯೋಜನೆ ಪರಿಚಯಿಸಲಾಗಿದೆ. ವಿದ್ಯುತ್ ಸಂಪರ್ಕ ಪಡೆಯುತ್ತಿರುವ ನೇಕಾರರಿಗೆ 1ರಿಂದ 10HP ವಿದ್ಯುತ್ ಪೂರೈಸಲು ರಾಜ್ಯ ಸರಕಾರ ಈ ಬಗ್ಗೆ ಆದೇಶ ಹೊರಡಿಸಿದೆ. 10ರಿಂದ 20HP ವರೆಗಿನ ವಿದ್ಯುತ್ ಅನ್ನು ಕೈ ಮಗ್ಗಕ್ಕೆ ಬಳಸುವುದಕ್ಕೆ 500ಯುನಿಟಿನ ವರೆಗೆ 1.25 ರಿಯಾಯಿತಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಸಹಾಯಧನ
ಜವಳಿ ಉದ್ಯಮಗಳ ಘಟಕ ಸ್ಥಾಪನೆ ಮಾಡಲು ಸಹಾಯಧನ ನೀಡಲು ಸರಕಾರ ಮುಂದಾಗಿದೆ. ಪ. ಜಾತಿ ಮತ್ತು ಪಂಗಡಕ್ಕೆ ಯೋಜನಾ ಘಟಕದ ಮೇಲೆ 75% ಅಥವಾ 2ಕೋಟಿ ರೂಪಾಯಿ ವರೆಗೆ ಸಹಾಯಧನ ನೀಡಲಾಗುವುದು. ಸಾಲದ ಮೇಲೆ ಮೊದಲ ಐದು ವರ್ಷದ ತನಕ ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ಸಹ ಸಿಗಲಿದೆ. ಅತೀ ಸಣ್ಣ ಜವಳಿದಾರರಿಗೆ 50% ಸಹಾಯಧನ ನೀಡಲಾಗುವುದು. ಜವಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಈ ಮೂಲಕ ಹೊಸ ಉದ್ಯೋಗ ಸಹ ಸೃಷ್ಟಿ ಆಗಲಿದೆ.
ಸರಕಾರದ ಮೂಲಕ ನೇಕಾರರಿಗೆ ನೀಡುವ ಸೇವಾ ಸೌಲಭ್ಯ ಪ್ರಮಾಣ ಈ ಹಿಂದಿಗಿಂತಲೂ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಹ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ರಾಜ್ಯದ ಅನೇಕ ಭಾಗದಲ್ಲಿ ಗಾರ್ಮೆಂಟ್ಸ್ ಕೆಲಸಗಾರರ ಸೇವಾ ಸೌಲಭ್ಯ ಹೆಚ್ಚಿಸುವುದು.ಗಾರ್ಮೆಂಟ್ಸ್ ಕ್ಲಸ್ಟರ್ ಸ್ಥಾಪನೆ ಹಾಗೂ ಈ ಜವಳಿ ಉದ್ಯಮ ಮಾಡುವವರಿಗೆ ಬೇಕಾಗುವ ಪ್ರೋತ್ಸಾಹ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಈ ಎಲ್ಲ ಯೋಜನೆಗಳು ಕ್ಲಪ್ತಕಾಲಕ್ಕೆ ಬಂದದ್ದೇ ಹೌದಾಗಿದ್ದರೆ ಅನೇಕ ನೇಕಾರರ ಸಂಕಷ್ಟ ಕಡಿಮೆ ಆಗಲಿದೆ. ಅದೇ ರೀತಿ ನೇಕಾರರ ನೌಕರರಿಗೂ ಅನೇಕ ರೀತಿಯ ಸೇವಾ ಸೌಲಭ್ಯ ನೀಡುವುದಾಗಿ ತಿಳಿಸಿರುವ ಕಾರಣ ಈ ಸುದ್ದಿ ರೈತರ ನೇಕಾರರ ಪಾಲಿಗೆ ವರದಾನ ಆಗಲಿದೆ. ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ.
