
ರಾಜ್ಯದ ರಸ್ತೆ ಸಾರಿಗೆ ಸರಕಾರಿ ಸೇವೆಯಲ್ಲಿ ಬಸ್ ವ್ಯವಸ್ಥೆ ಬಹಳ ಹಿಂದಿನಿಂದಲೂ ಪ್ರಾಮುಖ್ಯತೆ ಪಡೆಯುತ್ತಾ ಬಂದಿದೆ. ರಾಜ್ಯ ಸರಕಾರದ ಬಸ್ ಗಳಿಗೆ KSRTC ಹೆಸರನ್ನು ಈ ಹಿಂದಿನಿಂದಲೂ ಬಳಕೆ ಮಾಡುತ್ತಾ ಬಂದಿದ್ದು ಈ ಹೆಸರು ಬಳಸಬಾರದು ಎಂದು ಕೇರಳ ಸರಕಾರ ಮದ್ರಾಸ್ ಹೈಕೋರ್ಟ್ ಮೊರೆ ಹೊಕ್ಕಿದ್ದು ಸದ್ಯ ಈ ಬಗ್ಗೆ ಮಹತ್ವದ ತೀರ್ಪೊಂದು ಹೊರಬಿದ್ದಿದೆ. ಹೀಗಾಗಿ ಈ ತೀರ್ಪು ಕರ್ನಾಟಕದ ಜನತೆಗೆ ಬಹಳ ಖುಷಿ ನೀಡುವ ಸಂಗತಿ ಆಗಿದೆ ಎಂದರೂ ತಪ್ಪಾಗದು.
ಯಾವುದು ಈ ಕೇಸ್?
KSRTC ಹೆಸರಿನ ಅಧಿಕೃತ ಅಧಿಕಾರ ಯಾರಿಗೆ ಸೇರಿದ್ದು ಎಂಬುದೇ ಈ ಒಂದು ವಿವಾಧವಾಗಿದೆ. KSRTC ಹೆಸರಿಗಾಗಿಯೇ ಅನೇಕ ವಾದ ವಿವಾಧ ಏರ್ಪಟ್ಟಿದೆ. ಕೇರಳ ಸರಕಾರವು ಇದು ತನ್ನ ಸ್ವಾಮ್ಯ ಉಳ್ಳದ್ದಾಗಿದ್ದು ಎಂದು ವಾದ ಮಂಡಿಸಿದರೆ ಇತ್ತ ಕರ್ನಾಟಕ ಸರಕಾರ ಕೂಡ ತಾನು ಪಡೆದಿದ್ದ ಪೇಟೆಂಟ್ ಅನ್ನು ಎತ್ತಿ ಹಿಡಿದಿತ್ತು ಹಾಗಾಗಿ ಇದರ ವಾದ ವಿವಾದ ಕೋರ್ಟ್ ಮೆಟ್ಟಿಲ ವರೆಗೆ ಸಹ ತಲುಪಿದ್ದು ಇದೀಗ ಈ ಬಗ್ಗೆ ಸ್ಪಷ್ಟ ತೀರ್ಮಾನ ಒಂದು ಹೊರ ಬಿದ್ದಿದೆ.
ಸಾಕ್ಷಿ ಪರಿಶೀಲನೆ
ಕರ್ನಾಟಕ ರಾಜ್ಯದ ಹಾಗೂ ಕೇರಳ ರಾಜ್ಯಗಳು ತಮ್ಮ ರಸ್ತೆ ಸಾರಿಗೆ ವ್ಯವಸ್ಥೆಯ ಭಾಗವಾಗಿ KSRTC ಹೆಸರಿನ ಬಳಕೆ ಬಗ್ಗೆ ಪ್ರಶ್ನೆ ಮಾಡಲಾಗಿದ್ದು ಕೇರಳ ಸರಕಾರ ಮದ್ರಾಸ್ ಹೈಕೋರ್ಟ್ ಮೊರೆ ಹೊಕ್ಕಿದೆ. ಹಾಗಾಗಿ ಪೇಟೆಂಟ್ ವ್ಯವಸ್ಥೆಗಳ ಸಾಕ್ಷಿ ಸಹ ಪರಿಶೀಲನೆ ಮಾಡಲಾಗಿದೆ. ಭಾರತ ಸರಕಾರದಿಂದ 2013ರಲ್ಲಿ ಕರ್ನಾಟಕ ಸರಕಾರ KSRTC ಹೆಸರನ್ನು ರಸ್ತೆ ಸಾರಿಗೆ ಸಂಸ್ಥೆಗೆ ಬಳಸುವುದನ್ನು ಪೇಟೆಂಟ್ ಮಾಡಿ ಇಟ್ಟಿದೆ. ಅದರ ಪ್ರಕಾರ ನವೆಂಬರ್ 1, 1973ರರಿಂದಲೂ ಈ ಹೆಸರು ಬಳಕೆಯಲ್ಲೇ ಇದೆ.
ದೇಶದ ಕಾಪಿ ರೈಟ್ಸ್ ನಿಂದ ಗಂಡಭೇರುಂಡ ಗುರುತು ಮತ್ತು KSRTC ಲೋಗೊ ಕಾಪಿ ರೈಟ್ ಪಡೆಯಲಾಗುತ್ತಿದೆ ಎಂದು ತಿಳಿಸಿದರು. ಅದೇ ರೀತಿ ಕೇರಳ ಕೂಡ ಚೆನ್ನೈನಲ್ಲಿ ಇರುವ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿ ಮುಂದೆ ಈ ಬಗ್ಗೆ ಪ್ರಶ್ನೆ ಮಾಡಿದೆ. ಅದರ ಪ್ರಕಾರ ಸುಮಾರು 42ವರ್ಷದಿಂದ RTC ಪದದ ಬಳಕೆ ಕೇರಳದ ಸಾರಿಗೆ ನಿಗಮ ಪಾಲಿಸುತ್ತಾ ಬಂದಿದೆ ಎಂದು ತಿಳಿಯಿತು. ಅದು KSRTC ಟ್ರೇಡ್ ಮಾರ್ಕ್ ನೋಂದಾಯಿಸಿದ್ದು ಬಳಿಕ ನೋಂದಣಿ ಅಮಾನ್ಯ ಮಾಡಲಾಗಿದೆ ಎಂದು ಮದ್ರಾಸ್ ಹೈಕೋರ್ಟ್ ನಲ್ಲಿ ಕೇಸ್ ದಾಖಲು ಮಾಡಿದೆ.
ತೀರ್ಪಿನಲ್ಲಿ ಏನಿದೆ?
ಸದ್ಯ ಈ ಬಗ್ಗೆ ಮದ್ರಾಸ್ ಹೈಕೋರ್ಟ್ ತೀರ್ಪನ್ನು ನೀಡಿದೆ ಆ ಪ್ರಕಾರ ಕೇರಳದ ಅರ್ಜಿ ಸಲ್ಲಿಕೆಯನ್ನು ವಜಾ ಮಾಡಿ ಕರ್ನಾಟಕ್ಕೆ ಪದ ಬಳಕೆಗೆ ಪರೋಕ್ಷವಾಗಿ ಸಮ್ಮತಿ ಸೂಚಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಈಮೂಲಕ KSRTC ಪದ ಬಳಕೆ ಮಾಡಲು ಯಾವುದೇ ತರನಾಗಿ ಕಾನೂನು ಚೌಕಟ್ಟಿನ ಅಡೆ ತಡೆಗಳು ಇರಲಾರದು ಎಂದು ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ.
