
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಸಾರಿಗೆ ನೌಕರರ ಪ್ರಾಮುಖ್ಯತೆ ಈ ಹಿಂದಿಗಿಂತಲೂ ಅಧಿಕವಾಗುತ್ತಿದೆ. ಶಕ್ತಿ ಯೋಜನೆಯಿಂದಾಗಿ ಮಹಿಳೆಯರ ಓಡಾಟ ಪ್ರಮಾಣ ಈ ಹಿಂದಿಗಿಂತಲೂ ಅಧಿಕವಾಗಿದ್ದು ಸರಕಾರಿ ಬಸ್ ಜನಜಂಗುಳಿಯಿಂದಲೇ ತುಂಬಿ ತುಳುಕುತ್ತಿದೆ. ಅದೇ ರೀತಿ ಶಕ್ತಿ ಯೋಜನೆ ಬಳಿಕ ಸರಕಾರಿ ಬಸ್ ಅಂತೂ ಫುಲ್ ರಶ್ ಆಗಿದ್ದು ಹೆಚ್ಚುವರಿ ಬಸ್ ಗಳಿಗೆ ಮಾನ್ಯತೆ ಸಿಗುತ್ತಿದೆ.
ಶಕ್ತಿ ಯೋಜನೆಯ ಕಾರಣಕ್ಕಾಗಿ ಹೆಚ್ಚುವರಿ ಬಸ್ ಮತ್ತು ಸಿಬ್ಬಂದಿ ನೇಮಕಾತಿ ಬಗ್ಗೆ ಈ ಹಿಂದೆ ವರದಿಯನ್ನು ಸಲ್ಲಿಕೆ ಮಾಡಲಾಗಿದ್ದು ಸದ್ಯ ಈ ಬಗ್ಗೆ ಅಪ್ಡೇಟ್ ಮಾಹಿತಿಯೊಂದು ಸಿಕ್ಕಿದೆ. ಸಾರಿಗೆ ಇಲಾಖೆ ಅನೇಕ ವರಗಷದಿಂದ ಹೊಸ ಬಸ್ ಖರೀದಿ ಮತ್ತು ಸಿಬ್ಬಂದಿ ನೇಮಕ ಮಾಡಿರಲಿಲ್ಲ ಆದರೆ ಈಗ ಈ ವ್ಯವಸ್ಥೆ ಸರಿ ಪಡಿಸುವ ಬಗ್ಗೆ ಬಂದ ಮನವಿ ಪರಿಶೀಲಿಸಿರುವ ಬಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಮಾಧ್ಯಮದ ಮುಂದೆ ಮಾತನಾಡಿದ್ದಾರೆ.
ಅಧಿವೇಶನದಲ್ಲಿ ಚರ್ಚೆ
ಈ ಬಾರಿಯ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು ಸಾರಿಗೆ ಸಚಿವರಿಗೆ ಹೆಚ್ಚುವರಿ ಬಸ್ ಹಾಗೂ ಸಿಬಂದಿ ನೇಮಕಾತಿ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಹಾಗಾಗಿ ಈ ಪ್ರಶ್ನೆಗೆ ಸಚಿವರು ಕೂಡ ಸೂಕ್ತ ಉತ್ತರವನ್ನು ನೀಡಿದ್ದಾರೆ. ಈ ಮೂಲಕ ಹೆಚ್ಚುವರಿಯಾಗಿ 5,500 ಬಸ್ ಬಿಡುಗಡೆ ಮಾಡಲಿದ್ದೇವೆ. ಬಸ್ ಗಳಿಗೆ 9,000 ಸಾರಿಗೆ ಸಿಬಂದಿ ನೇಮಕಾತಿ ಮಾಡಲಿದ್ದೇವೆ. ಸಾರಿಗೆ ವ್ಯವಸ್ಥೆಯಲ್ಲಿ ಗುಣಮಟ್ಟತೆ ಕಾಯುವ ನೆಲೆಯಲ್ಲಿ ಈ ವ್ಯವಸ್ಥೆ ಶೀಘ್ರ ಬರಲಿದೆ ಎಂದು ಅವರು ತಿಳಿಸಿದ್ದಾರೆ.
ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ
ಈಗ ಬಸ್ ಸಮಸ್ಯೆ ಮತ್ತು ಬಸ್ ಗಳಿಗೆ ಸಿಬಂದಿ ಸಮಸ್ಯೆ ನಮ್ಮ ಆಡಳಿತ ಅವಧಿಗೂ ಮುನ್ನವೇ ಬಂದ ಸಮಸ್ಯೆ ಆಗಿದೆ. ಬಿಜೆಪಿ ಆಡಳಿತ ಅವಧಿಯಲ್ಲಿ ಯಾವುದೇ ನೇಮಕಾತಿ ಪ್ರಕ್ರಿಯೆ ಮಾಡಿರಲಿಲ್ಲ ಈಗ ಮಾಡಲು ನಮ್ಮ ಸರಕಾರ ಮುಂದಾಗಿದೆ ಅದನ್ನು ಟೀಕೆ ಮಾಡುವುದು ನಿಜಕ್ಕೂ ದೌರ್ಭಾಗ್ಯ. ಎರಡು ತಿಂಗಳಿಗೆ ಈ ಸಮಸ್ಯೆಗೆ ಪರಿಹಾರ ಶೀಘ್ರ ಸಿಗಲಿದೆ. ಹಾಗಾಗಿ ಅವರ ಆಡಳಿತ ಅವಧಿಯಲ್ಲಿ ಆಗದ್ದನ್ನು ನಮ್ಮ ಆಡಳಿತ ವ್ಯವಸ್ಥೆಗೆ ಟೀಕಿಸುವ ಮನೋಭಾವ ಬಿಡಬೇಕು ಅದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಸಮಸ್ಯೆ ನಿವಾರಣೆ
ವಿದ್ಯಾರ್ಥಿಗಳಿಗೆ ಈ ಒಂದು ಶಕ್ತಿ ಯೋಜನೆ ಸಾಕಷ್ಟು ಸಮಸ್ಯೆ ಉಂಟು ಮಾಡಿದೆ. ತುಮಕೂರಿನಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆ ಆದ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಶಾಸಕ ಬಿ. ವೈ. ವಿಜಯೇಂದ್ರ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾಗಿ ಈ ಬಗ್ಗೆ ಕೂಡ ಸಚಿವರು ಮಾತನಾಡಿದ್ದಾರೆ ಜನವರಿ , ಫೆಬ್ರವರಿ ತಿಂಗಳ ಒಳಗಾಗಿ ಸಮಸ್ಯೆ ನಿವಾರಣೆ ಆಗಲಿದೆ. ಹೆಚ್ಚುವರಿ ಬಸ್ ಬಿಡುಗಡೆ ಆಗಿ ಸಮಸ್ಯೆ ನಿವಾರಣೆ ಆಗಲಿದೆ. ಸಾರಿಗೆ ಸಿಬಂದಿ ನೇಮಕಾತಿ ಸಹ ಆಗಲಿ ಎಂದು ಅವರು ಮಾತನಾಡಿದ್ದಾರೆ.
