Home ಕ್ರೀಡೆ ಐಪಿಎಲ್: 24.75 ಕೋಟಿಗೆ ಕೆಕೆಆರ್ ಪಾಲಾದ ಮಿಚೆಲ್‌ ಸ್ಟಾರ್ಕ್

ಐಪಿಎಲ್: 24.75 ಕೋಟಿಗೆ ಕೆಕೆಆರ್ ಪಾಲಾದ ಮಿಚೆಲ್‌ ಸ್ಟಾರ್ಕ್

0
ಐಪಿಎಲ್: 24.75 ಕೋಟಿಗೆ ಕೆಕೆಆರ್ ಪಾಲಾದ ಮಿಚೆಲ್‌ ಸ್ಟಾರ್ಕ್

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ ಇತಿಹಾಸದಲ್ಲೇ ಅತೀ ದುಬಾರಿ‌ ಮತ್ತು ದಾಖಲೆಯ ಮೊತ್ತ ನೀಡಿ ಮಿಚೆಲ್ ಸ್ಟಾರ್ಕ್ ಅವರನ್ನು ಕೆಕೆಆರ್ ತಂಡ ಖರೀದಿ ಮಾಡಿದೆ. ಪ್ಯಾಟ್ ಕಮಿನ್ಸ್ ಅವರನ್ನು ಸನ್ ರೈಸರ್ಸ್ ಹೈದರಬಾದ್ ತಂಡ 20.50 ಕೋ. ರೂ.‌ ಖರೀದಿ ಮಾಡಿದ‌ ಬೆನ್ನಲ್ಲೇ ಸ್ಟಾರ್ಕ್ ಅವರಿಗೆ ಭಾರೀ ಮೊತ್ತ ನೀಡಿ ಕೆಕೆಆರ್ ತಮ್ಮ ಬಳಗಕ್ಕೆ ಸೇರಿಸಿಕೊಂಡಿದೆ.

ಈ ಬಾರಿಯ ಐಪಿಎಲ್ ಆಕ್ಷನ್ ದುಬೈನಲ್ಲಿ‌ ನಡೆಯುತ್ತಿದ್ದು, ಪ್ರಮುಖ ಆಟಗಾರರ‌ ಮೇಲೆ ಪ್ರಾಂಚೈಸಿಗಳು ಕಣ್ಣಿಟ್ಟಿದ್ದರು. ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಹಾಗೂ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಕೂಡ ದುಬಾರಿ ಆಟಗಾರರ‌ ಪಟ್ಟಿಯಲ್ಲಿ ಇದ್ದರು. ಪ್ಯಾಟ್ ಕಮಿನ್ಸ್ ಅವರನ್ನು ಖರೀದಿಗಾಗಿ ಚೆನ್ನೈ, ಹೈದರಬಾದ್ ಹಾಗೂ ಆರ್ ಸಿಬಿ ತಂಡಗಳು ಪೈಪೋಟಿ ನಡೆಸಿದ್ದು, ಕೊನೆಗೆ ಹೈದರಬಾದ್ ತಂಡ 20.50 ಕೋ. ರೂ.‌ ನೀಡುವ ಮೂಲಕ ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಇದು ಐಪಿಎಲ್ ನ ಇತಿಹಾಸದಲ್ಲಿ ಒಬ್ಬ ಆಟಗಾರನಿಗೆ ತಂಡ ನೀಡಿದ ಅತ್ಯಂತ ದುಬಾರಿ‌ ಮೊತ್ತವಾಗಿದೆ.

ವೆಸ್ಟ್ ಇಂಡೀಸ್ ಬಿಗ್ ಹಿಟ್ಟರ್ ರೋಮನ್ ಪೋವೆಲ್ ಈ ಬಾರಿಯ ಐಪಿಎಲ್ ಆಕ್ಷನ್‌ನ ಮೊದಲ ಆಟಗಾರನಾಗಿದ್ದು, ರಾಜಸ್ತಾನ ರಾಯಲ್ಸ್ ತಂಡ ಅವರನ್ನು 7.40 ಕೋಟಿಗೆ ಖರೀದಿಸಿದೆ. ನ್ಯೂಜಿಲೆಂಡ್ ನ‌ ಭರವಸೆ ಆಟಗಾರ ಡೆರಿಲ್ ಮಿಚೆಲ್ ಗೆ ಚೆನ್ನೈ ತಂಡ 14 ಕೋಟಿ‌ ಹಾಗೂ ರಚಿನ್ ರವೀಂದ್ರ ಅವರಿಗೆ 1.80 ಕೋ. ನೀಡಿ ಖರೀದಿಸಿತು. ವಿಶ್ವಕಪ್ ನ ಹೀರೋ ಟ್ರ್ಯಾವಿಸ್ ಹೆಡ್ ಗೆ ಸನ್ ರೈಸರ್ಸ್ ಹೈದರಬಾದ್ ತಂಡ 6.80 ಕೋ.ರೂ ನೀಡಿದ್ದಲ್ಲದೇ ಇಂಗ್ಲೆಂಡ್ ನ ಹ್ಯಾರಿ ಬ್ರೂಕ್ ಅವರನ್ನು 4 ಕೋಟಿ ರೂ. ನೀಡಿ ಖರೀದಿಸಿತು. ವಿಂಡೀಸ್ ವೇಗಿ ಅಲ್ಜಾರಿ ಜೋಸೆಫ್ 11.50 ಕೋಟಿ ರೂ.ಗೆ ಆರ್ ಸಿಬಿ ಪಾಲಾದರು.

 

LEAVE A REPLY

Please enter your comment!
Please enter your name here