ರೈತರು ಈ ದೇಶದ ಮುಖ್ಯ ವ್ಯಕ್ತಿ. ರೈತರು ದುಡಿದ್ರೆ ಮಾತ್ರ ನಾವು ಬದುಕು ಸಾಗಿಸಲು ಸಾಧ್ಯ ಇಂದು ರೈತರಿಗಾಗಿ ಅವರನ್ನು ಬೆಂಬಲಿಸಲು ಹಲವು ರೀತಿಯ ಸೌಲಭ್ಯ ಜಾರಿಗೆ ತಂದಿದ್ದು ಜಮೀನು ಹೊಂದಿರುವ ರೈತರಿಗೆ ಈ ಹಿಂದಿನಿಂದಲೂ ಹೊಸ ಹೊಸ ಯೋಜನೆ ರೂಪಿಸಿತ್ತು. ಇದೀಗ ಕೃಷಿ ಮಾಡುವ ರೈತರಿಗೆ ಕೆಲವೊಮ್ಮೆ ಕೃಷಿ ಯಂತ್ರಗಳನ್ನು ಸಾಗಿಸಲು ಬಂಡಿ ದಾರಿ, ಕಾಲು ದಾರಿ ಇತ್ಯಾದಿ ಸಮಸ್ಯೆ ಉಂಟಾಗುತ್ತದೆ. ಈಗ ರಸ್ತೆ ಇಲ್ಲದ ರೈತರ ನೆರವಿಗೆ ಸರಕಾರ ಹೊಸ ನಿಯಮ ಜಾರಿಗೆ ತಂದಿದೆ.
ಅವಕಾಶ ಇದೆ
ನಮ್ಮ ಹೊಲ ನಮ್ಮ ರಸ್ತೆ (Nama hola nama Rasthe) ಯೋಜನೆಯೂ ರೈತರಿಗಾಗಿ ಜಾರಿಗೆ ತಂದಿದ್ದು ಈ ಯೋಜನೆ ಮೂಲಕ 23ಫೀಟ್ ರಸ್ತೆ ಮಾಡಲು ಅವಕಾಶ ಇದೆ. ಇದರ ಮೂಲಕ ಹಳ್ಳ ದಿಬ್ಬ, ಕಾಲು ದಾರಿ, ಬಂಡಿದಾರಿ ಇದ್ದರೆ ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಮೂಲಕ ರಸ್ತೆ ಸರಿಪಡಿಸಬಹುದು.
ದಾರಿ ಸಮಸ್ಯೆಗೆ ಪರಿಹಾರ
ದಾರಿ ಸಮಸ್ಯೆ ಎನ್ನುವುದು ಬಹುಕಾಲದಿಂದಲೂ ಇದ್ದು, ರೈತರು ಕೆಲವೊಮ್ಮೆ ಖಾಸಗಿ ಜಮೀನುಗಳನ್ನು ದಾಟಿಕೊಂಡು ಹೋಗಬೇಕಾಗುತ್ತದೆ. ಇದರಿಂದ ರೈತರಿಗೆ ಕೆಲವು ಸಮಸ್ಯೆ ಯಾಗಿದೆ. ಗ್ರಾಮ ನಕಾಶೆ ಕಂಡ ದಾರಿಗಳಲ್ಲಿ ಬಳಕೆದಾರ ರೈತರು ತಿರುಗಾಡಲು ಅವಕಾಶವಿದ್ದರೂ ದಾರಿಗಳನ್ನು ಮುಚ್ಚಲಾಗಿದೆ. ಇದನ್ನು ಗಂಭೀರವಾರಿ ಪರಿಗಣಿಸಿದ ಕಂದಾಯ ಇಲಾಖೆ ದಾರಿ ಕುರಿತು ಸ್ಪಷ್ಟ ಆದೇಶ ಹೊರಡಿಸಿದೆ.
ಸೂಚನೆ ನೀಡಿದೆ
ದಾರಿ ಸಮಸ್ಯೆಯಿಂದ ಕೃಷಿ ಪೂರಕ ಚಟುವಟಿಕೆ ನಡೆಸಲು, ಕೃಷಿಕರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಸರಕಾರ ಸುತ್ತೋಲೆಯಲ್ಲಿ ಹೇಳಿದೆ. ದಿ ಇಂಡಿಯನ್ ಅಸಸ್‌ಮೆಂಟ್ ಆಕ್ಟ್ 1882ರಂತೆ ಪ್ರತಿ ಜಮೀನು ಮಾಲೀಕರು ಅಥವಾ ಜಮೀನಿನ ಅನುಭವದಲ್ಲಿ ಇರುವವರು ಅವರ ಭೂಮಿಯನ್ನು ಪ್ರವೇಶಿಸುವ ಹಕ್ಕು ಮತ್ತು ವಹಿವಾಟಿನ ಹಕ್ಕನ್ನು ಈಗಾಗಲೇ ಹೊಂದಿದ್ದಾರೆ. ಪ್ರತಿ ತಾಲ್ಲೂಕಿನ ತಹಶೀಲ್ದಾರ್‌ಗಳು ಈ ಬಗ್ಗೆ ಗಮನಿಸಿ ನಕಾಶೆ ಇದ್ದಂತಹ ಕಾಲುದಾರಿ, ಬಂಡಿದಾರಿ ಇತ್ಯಾದಿಗಳಲ್ಲಿ ಕೃಷಿ ಬಳಕೆದಾರರು ತಿರುಗಾಡಲು ಅವಕಾಶ ನೀಡದೆ ಮುಚ್ಚಿರುವಂತಹ ದಾರಿಗಳನ್ನು ತೆರವುಗೊಳಿಸಿ ಕ್ರಮ ಕೈಗೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ.
Photo – Facebook
