ರಾಜ್ಯ ವಿಧಾನಸಭೆ ಚುನಾವಣೆ ಗೆದ್ದರೆ ಐದು ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ನಾಲ್ಕು ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಜನರು ಪಡೆದು ಕೊಳ್ತಾ ಇದ್ದಾರೆ. ಇದೀಗ ಯುವನಿಧಿ ಯೋಜನೆ ಬಗ್ಗೆಯು ಬಿಗ್ ಆಪ್ಡೆಟ್ ಸಿಕ್ಕಿದ್ದು 2024ರ ಜನವರಿಯಲ್ಲಿ ಯುವನಿಧಿ ಯೋಜನೆಗೆ ಅಧಿಕೃತ ಚಾಲನೆ ಸಿಗಲಿದೆ.ಅರ್ಜಿ ಸಲ್ಲಿಕೆ ಪ್ರಾರಂಭದ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಯಾವಾಗ ಈ ಯೋಜನೆ ಆರಂಭ?
ಯುವನಿಧಿ ಯೋಜನೆಯು ಇದೇ ಡಿಸೆಂಬರ್ 26 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು ನಿರುದ್ಯೋಗ ಯುವಕ ಯುವತಿಯರು ಅರ್ಜಿ ಹಾಕಬಹುದಾಗಿದೆ. ಜನವರಿಯಲ್ಲಿ ಈ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡುವ ಮೂಲಕ ನೊಂದಣಿ ದಾರರಿಗೆ ಜನವರಿಯಿಂದ ಹಣ ಜಮೆ ಯಾಗಲಿದೆ. ಈ ಯೋಜನೆಯಿಂದ ಸುಮಾರು 5 ಲಕ್ಷ ಪದವೀಧರರ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಹಣ ತಲುಪಲಿದೆ.
ಇವರಿಗೆ ತಲುಪಲಿದೆ ಈ ಯೋಜನೆ
2022 23ನೇ ಸಾಲಿನಲ್ಲಿ ಪದವಿ (Degree) ಹಾಗೂ ಡಿಪ್ಲೋಮಾ (Diploma) ಆದ , ಆರು ತಿಂಗಳು ಕೆಲಸ ಸಿಗದೇ ಇರುವ ಯುವಕರು ನಿರುದ್ಯೋಗ ಭತ್ಯೆ ಪಡೆಯಲು ಅವಕಾಶ ಇದೆ.ಈ ಯೋಜನೆಯು ಎರಡು ವರ್ಷಗಳ ವರೆಗೆ ಚಾಲ್ತಿಯಲ್ಲಿ ಕೆಲಸ ಸಿಕ್ಕಿದ ನಂತರ ಮಾಹಿತಿ ಸಹ ಪಡೆಯಬೇಕಿರುವುದು ಕಡ್ಡಾಯ ವಾಗಿದೆ.
ಕಡ್ಡಾಯ ಈ ಮಾಹಿತಿ ನೀಡಬೇಕು
ಯುವ ನಿಧಿ ಯೋಜನೆಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ನೀಡುವುದು ಸಹ ಕಡ್ಡಾಯ ವಾಗಿದೆ. ಹೌದು ಮತದಾರರ ಗುರುತಿನ ಚೀಟಿ ಆಧಾರ್ ಕಾರ್ಡ್, ಪದವಿ ಅಭ್ಯರ್ಥಿಗಳಾದರೆ ಪದವಿ ಅಂಕಪಟ್ಟಿ ಡಿಪ್ಲೋಮಾ ಅಂಕಪಟ್ಟಿ, ಪೋಟೋ, ಶೈಕ್ಷಣಿಕ ಮಾಹಿತಿಗಳು, ಬ್ಯಾಂಕ್ ಪುಸ್ತಕ , ಮೊಬೈಲ್ ನಂಬರ್ ಹೀಗೆ ಕೆಲವೊಂದು ದಾಖಲೆ ನೀಡಬೇಕು.
ಎಷ್ಟು ಮೊತ್ತ?
ಪದವೀಧರರು ಪದವಿ ಪೂರೈಸಿ 6 ತಿಂಗಳು ನಿರುದ್ಯೋಗಿಗಳಾಗಿದ್ದರೆ ಮಾಸಿಕ 3,000 ರೂಪಾಯಿ ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ರೂಪಾಯಿ ದೊರೆಯಲಿದೆ. ಒಟ್ಟಿನಲ್ಲಿ ಈ ತಿಂಗಳ ಡಿಸೆಂಬರ್ 26ನೇ ತಾರೀಕಿನಿಂದ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇದ್ದು ಜನವರಿಯಿಂದ ನಿರುದ್ಯೋಗ ಯುವಕ ಯುವತಿಯರಿಗೆ ಹಣ ಜಮೆಯಾಗಲಿದೆ.
