Home ಸುದ್ದಿಗಳು ರಾಷ್ಟ್ರೀಯ ಕೇಂದ್ರ ಸರಕಾರದಿಂದ ಜನರ ಅಭಿಪ್ರಾಯ ಸಂಗ್ರಹಿಸಲು ಬಂದಿದೆ ಈ ನೂತನ ಆ್ಯಪ್

ಕೇಂದ್ರ ಸರಕಾರದಿಂದ ಜನರ ಅಭಿಪ್ರಾಯ ಸಂಗ್ರಹಿಸಲು ಬಂದಿದೆ ಈ ನೂತನ ಆ್ಯಪ್

0
ಕೇಂದ್ರ ಸರಕಾರದಿಂದ ಜನರ ಅಭಿಪ್ರಾಯ ಸಂಗ್ರಹಿಸಲು ಬಂದಿದೆ ಈ ನೂತನ ಆ್ಯಪ್

ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಲೋಕಸಭೆ ಚುನಾವಣೆಯ ಪೂರ್ವ ಸಿದ್ಧತೆ ರಾಜ್ಯ ಮಟ್ಟದಲ್ಲಿ ಬಹಳ ಉನ್ನತ ಸ್ಥಾನದಲ್ಲಿ ಇದೆ ಎಂದು ಹೇಳಬಹುದು. ರಾಷ್ಟ್ರೀಯ ಮಟ್ಟದಲ್ಲಿ ಈ ಚುನಾವಣೆ ನಡೆಯುವ ಕಾರಣ ಆಡಳಿತ ಮತ್ತು ವಿಪಕ್ಷಗಳು ಈಗಲೇ ಎಲ್ಲ ವಿಧದ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇದ್ದು ಪ್ರಸ್ತುತ ಕೇಂದ್ರದಲ್ಲಿರುವ ಬಿಜೆಪಿ ಸರಕಾರ ನೂತನ ತಂತ್ರಾಂಶ ಜಾರಿ ತರಲು ಮುಂದಾಗಿದೆ.

ಹೊಸ ಪ್ರಯತ್ನ
ಮೊದಲಿಂದಲೂ ಬಿಜೆಪಿ ಸರಕಾರ ಡಿಜಿಟಲ್ ಇಂಡಿಯಾ ತತ್ತ್ವಕ್ಕೆ ಬದ್ಧವಾಗಿ ತನ್ನ ನೀತಿ ನಿರೂಪಣೆಯನ್ನು ಜಾರಿಗೆ ತರುತ್ತಲಿದೆ. ಹಾಗೇಯೇ ಚುನಾವಣೆ ಹಿನ್ನೆಲೆಯಲ್ಲಿ ನೂತನ ಕ್ರಮವನ್ನು ಜಾರಿಗೆ ತರುತ್ತಿದೆ. ಜನರ ಮನಸ್ಥಿತಿ ಅರಿಯುವ ಸಲುವಾಗಿ ನೂತನ ಆ್ಯಪ್ ಒಂದನ್ನು ಬಿಡುಗಡೆ ಮಾಡುತ್ತಿದೆ. ಈ ಆ್ಯಪ್ ಬಗ್ಗೆ ಈಗ ರಾಷ್ಟ್ರೀಯ ಮಟ್ಟದಲ್ಲಿ ಕೂಡ ಚರ್ಚೆಯಾಗುತ್ತಿದ್ದು ಇದರ ಕಾರ್ಯವೈಖರಿ ಇತರ ಮಾಹಿತಿಯನ್ನು ನಾವಿಂದು ಈ ಲೇಖನದ ಮೂಲಕ ತಿಳಿಸಲಿದ್ದೇವೆ.

ವೈಶಿಷ್ಟ್ಯತೆ ಏನು?
ನಮೊ ಆ್ಯಪ್ ನ ವಿಶೇಷತೆ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಕೇಂದ್ರ ಸರಕಾರದ ಯೋಜನೆ, ಜಾರಿ ತಂದ ನೀತಿ ನಿಯಮದ ಬಗ್ಗೆ ಜನರ ಅಭಿಪ್ರಾಯವನ್ನು ಕೂಲಂಕುಷವಾಗಿ ಸಂಗ್ರಹ ಮಾಡುವ ಕೆಲಸ ಮಾಡಲಾಗುತ್ತದೆ. ಅದೇ ರೀತಿ ಲೋಕಸಭೆಯ ಚುನಾವಣೆಯಲ್ಲಿ ತಮ್ಮ ಪಕ್ಷದ ಬಗ್ಗೆ ಜನರಿಗೆ ಇರುವ ಅಭಿಪ್ರಾಯವನ್ನು ಸಹ ಸಂಗ್ರಹ ಮಾಡಲಾಗುವುದು. ಲೋಕಸಭೆಯ ಸದಸ್ಯರ ಬಗ್ಗೆ ಆಯಾ ಕ್ಷೇತ್ರದ ಜನತೆಗೆ ಇರುವ ಅಭಿಪ್ರಾಯವನ್ನು ಸಂಗ್ರಹಿಸುವ ಕೆಲಸ ಮಾಡಲಾಗುವುದು.

ಈ ಒಂದು ಆ್ಯಪ್ ಬಳಕೆ ಬಹಳ ಸುಲಭವಾಗಿದ್ದು ಮೋದಿ ಅವರ ಬಗ್ಗೆ, ಅವರ ಆಡಳಿತ ವೈಖರಿ, ಉಳಿದ ನಾಯಕರ ಹಾಗೂ ಸಂಸದರ ಮತ್ತು ಲೋಕಸಭೆ ಸದಸ್ಯರ ಬಗ್ಗೆ ಪ್ರಶ್ನೆ ಕೂಡ ಅತ್ಯಂತ ಸುಲಭ ವಿಧಾನದಲ್ಲೇ ಇದ್ದು ಇಲ್ಲಿ ನೀಡುವ ಫೀಡ್ ಬ್ಯಾಕ್ ಅನ್ನು ಪ್ರಜಾಸತ್ತಾತ್ಮಕವಾಗಿ ಮಾಹಿತಿ ಗೌಪ್ಯತೆಯನ್ನು ಕಾಯ್ದಿರಿಸಲಾಗುವುದು. ಅದೇ ರೀತಿ ಜನರಿಗೆ ಕೂಡ ಸಲಹೆ ಸೂಚನೆ ಸಮಸ್ಯೆ ಪರಿಶೀಲನೆಗೆ ಮನವಿ ಇತ್ಯಾದಿ ಆಯ್ಕೆ ಕೂಡ ಲಭ್ಯ ವಿರಲಿದೆ ಎಂದು ಕೆಲ ಮಾಹಿತಿ ಮೂಲಗಳು ಈ ಬಗ್ಗೆ ಮಾಧ್ಯಮಕ್ಕೆ ತಿಳಿಯಪಡಿಸಿವೆ.

ಒಟ್ಟಾರೆಯಾಗಿ ಈ ಆ್ಯಪ್ ನಿಂದ ಸರಕಾರದ ಕಾರ್ಯಚಟುವಟಿಕೆಗಳ ಬಗ್ಗೆ ಕೂಲಂಕುಷವಾಗಿ ಸಮೀಕ್ಷೆ ಆಗಲಿದ್ದು ಮುಂದಾಗಬೇಕಾದ ಕಾರ್ಯ ವೈಕರ್ಯ ತಿಳಿಯುವ ಜೊತೆಗೆ ಸಮಸ್ಯೆ ಪರಿಹಾರ ಪಡಿಸುವ ನಿಟ್ಟಿನಲ್ಲಿ ಕೂಡ ಅನೇಕ ವಿಧವಾದ ಕ್ರಮ ಕೈಗೊಳ್ಳಲು ಸಹ ಬಹಳ ಅನುಕೂಲವಾಗಲಿದೆ. ಈಗಾಗಲೇ ಗೂಗಲ್ ಪ್ಲೇಸ್ಟೋರ್ ಮೂಲಕ ಕೋಟಿಗೂ ಅಧಿಕ ಜನ ಈ ಆ್ಯಪ್ ಡೌನ್ ಲೋಡ್ ಮಾಡಿದ್ದು ಫಿಡ್ ಬ್ಯಾಕ್ ನೀಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ.

 

LEAVE A REPLY

Please enter your comment!
Please enter your name here