
ಉಡುಪಿ: ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ಚತುರ್ಥ ಪರ್ಯಾಯೋತ್ಸವದ ಅಂಗವಾಗಿ ಚಪ್ಪರ ಮುಹೂರ್ತ ಇಂದು ಮುಂಜಾನೆ ರಾಘವೇಂದ್ರ ಕೊಡಂಚ ಅವರ ಪೌರೋಹಿತ್ಯದಲ್ಲಿ ನಡೆಯಿತು.
ಚಪ್ಪರ ನಿರ್ವಹಣೆಯ ರಾಜೇಶ್, ಮುಚ್ಚೂರು ರಾಮಚಂದ್ರ ಭಟ್, ನಾಗರಾಜ್ ಉಪಾಧ್ಯ ಹಾಗೂ ಮಠದ ಮೇಸ್ತ್ರಿ ಶ್ರೀ ಪದ್ಮನಾಭ ಅವರಿಗೆ ಕಾರ್ಯ ನಿರ್ವಹಣೆಯ ಮುಹೂರ್ತ ಪ್ರಸಾದ ನೀಡಲಾಯಿತು. ಸಮಿತಿಯ ಕಾರ್ಯಾಧ್ಯಕ್ಷರಾದ ರಘುಪತಿ ಭಟ್ ಅವರು ಪರ್ಯಾಯ ಪ್ರಚಾರಕ್ಕಾಗಿ ಮಾಡಲ್ಪಟ್ಟ ವಾಹನ ಸ್ಟಿಕರ್ಸ್ ಗಳನ್ನು ಬಿಡುಗಡೆಗೊಳಿಸಿದರು.
ಮಠದ ದಿವಾನರಾದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ಕೋಶಾಧಿಕಾರಿ ರಂಜನ್ ಕಲ್ಕೂ ರ್ , ಕಾರ್ಯದರ್ಶಿ ರಾಘವೇಂದ್ರ ಕಿಣಿ, ಸಮಿತಿಯ ಪದಾಧಿಕಾರಿಗಳಾದ ಗುರುರಾಜ ಉಪಾಧ್ಯ, ವಿಷ್ಣುಮೂರ್ತಿ ಉಪಾಧ್ಯ, ರವೀಂದ್ರ ಆಚಾರ್ಯ, ರಘುಪತಿ ರಾವ್, ಹಯವದನ ಭಟ್, ರಾಮ ಕೊಡಂಚ, ನಾಗರಾಜ ರಾವ್, ರಾಮಚಂದ್ರ ಸನಿಲ್, ಸುಮಿತ್ರಾ ಕೆರೆಮಠ, ಅಮಿತ ಕ್ರಮಧಾರಿ, ಸರೋಜಾ, ಗೀತಾ ಮುಂತಾದ ಸದಸ್ಯರೂ ಉಪಸ್ಥಿತರಿದ್ದರು. ಮಠದ ರಮೇಶ್ ಭಟ್ ಕೆ. ಸ್ವಾಗತಿಸಿ, ಧನ್ಯವಾದವಿತ್ತರು.
