Home ಕರ್ನಾಟಕ ಕರಾವಳಿ ಮಂಗಳೂರು: ನಾಳೆ ಉನ್ನತ ಶಿಕ್ಷಣ ಮೇಳ- ಸಮಾವೇಶ

ಮಂಗಳೂರು: ನಾಳೆ ಉನ್ನತ ಶಿಕ್ಷಣ ಮೇಳ- ಸಮಾವೇಶ

0
ಮಂಗಳೂರು: ನಾಳೆ ಉನ್ನತ ಶಿಕ್ಷಣ ಮೇಳ- ಸಮಾವೇಶ

ಮಂಗಳೂರು: ವಿದ್ಯಾರ್ಥಿಗಳಿಗೆ ಭವಿಷ್ಯದ ಶಿಕ್ಷಣವನ್ನು ರೂಪಿಸಲು ಮತ್ತು ಸಹಾಯ ಮಾಡಲು Wizdom Ed ಆಯೋಜಿಸಿರುವ ಉನ್ನತ ಶಿಕ್ಷಣ ಮೇಳ ಮತ್ತು ಸಮಾವೇಶ ನಾಳೆ (ಡಿ. 23ರಂದು) ಮಂಗಳೂರಿನ ಓಷನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿಶ್ಡಂ ಸಿಇಒ ಗುರುತೇಶ್ ತಿಳಿಸಿದರು.

ಈ ಬಗ್ಗೆ ಉಡುಪಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ‌ ಕಾರ್ಯಕ್ರಮವು ಭಾರತ ಮತ್ತು ವಿದೇಶಗಳಲ್ಲಿ ಶೈಕ್ಷಣಿಕ ಅವಕಾಶಗಳನ್ನು ಅನ್ವೇಷಿಸಲು ಬಯಸುವ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಅವಕಾಶವಾಗಿದೆ. WiZdom Ed ಎಂಬ ಸಂಸ್ಥೆಯು ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸಲುವಾಗಿ ಸುಮಾರು 6 ವರುಷಗಳ ಹಿಂದೆ ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಜಾಗತಿಕ ದೃಷ್ಟಿಕೋನ ಮತ್ತು ಅವಕಾಶಗಳನ್ನು ಒದಗಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಜಾಗತಿಕ ಕಲಿಕೆಗೆ ಅವಕಾಶ

ಭಾರತ ಮತ್ತು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಮೇಳ‌ ಮತ್ತು ಸಮಾವೇಶ ನಡೆಯಲಿದೆ. ಈ ಮೇಳದಲ್ಲಿ ಯುನೈಟೆಡ್ ಕಿಂಗ್ಡಮ್, ಜರ್ಮನಿ, ಫ್ರಾನ್ಸ್, ಹಂಗೇರಿ, ಯುನೈಟೆಡ್ ಅರಬ್ ಎಮಿರೇಟ್ಸ್ ಇತ್ಯಾದಿ ದೇಶಗಳಿಂದ ಹಾಗೂ ಭಾರತದ ಬೆಂಗಳೂರು ಮತ್ತು ಮಂಗಳೂರಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳು ಭಾಗವಹಿಸಲಿದೆ. 40ಕ್ಕೂ ಹೆಚ್ಚು ಸಂಸ್ಥೆಗಳು ಭಾಗವಹಿಸಲು ಆಸಕ್ತಿ ತೋರಿಸಿವೆ. ಭಾರತೀಯ ಸಂಸ್ಥೆಗಳ ಮಾಹಿತಿ ಕೇಂದ್ರ ಹಾಗು ಜಾಗತಿಕ ಶಿಕ್ಷಣದ ಮೂಲಕ ತಮ್ಮ ದೃಷ್ಟಿಕೋನವನ್ನು ವಿಸ್ತರಿಸಲು ಬಯಸುವ ವಿದ್ಯಾರ್ಥಿಗಳಿಗೆ ಹೊಸ ಮತ್ತು ಅಪ್ರತಿಮ ಅವಕಾಶಗಳನ್ನು ತೆರೆಯುತ್ತದೆ ಎಂದರು.

ವಿದ್ಯಾ ಸಂಸ್ಥೆಗಳು ಮಾತ್ರವಲ್ಲದೆ ಯೂನಿಯನ್, ಎಚ್ ಎಇಎಫ್ ಸಿ, ಐಸಿಐಸಿಐ ಬ್ಯಾಂಕ್, ‌ಬ್ಯಾಂಕ್ ಆಫ್ ಬರೋಡ ಮೊದಲಾದ ಬ್ಯಾಂಕ್ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲದ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡುವ ಮೂಲಕ ಅವರ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುವುದು ಅವರ ಉದ್ದೇಶವಾಗಿದೆ ಎಂದು ತಿಳಿಸಿದರು.

ಉದ್ಯೋಗಾವಕಾಶಗಳ ಮಾಹಿತಿ…

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೆಂದರೆ ಸಮಾವೇಶ – ಜ್ಞಾನದ ದರ್ಶನ, ಈ ಆಕರ್ಷಕ ಅವಧಿಯಲ್ಲಿ ಶೈಕ್ಷಣಿಕ ಸಾಲಗಳು, ಉತ್ತಮ ವಿದ್ಯಾರ್ಥಿ‌ವೇತನಗಳು, ಭಾರತ ಮತ್ತು ವಿದೇಶಗಳಲ್ಲಿ ಪದವಿ ನಂತರದ ಉದ್ಯೋಗ ಅವಕಾಶಗಳು, ಇತ್ಯಾದಿ ಐದು ಪ್ರಮುಖ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಲಿವೆ.

ಕೈಗಾರಿಕೆ ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ 20ಕ್ಕೂ ಹೆಚ್ಚು ಗಣ್ಯ ವ್ಯಕ್ತಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಶಿಕ್ಷಣ ಮತ್ತು ಪದವಿ ನಂತರದ ಜೀವನದ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ. ಈ ಸಮಾವೇಶವನ್ನು ಶ್ರೀ ಬೆರ್ನಾಡ್ ಆರ್ ಚೆಟ್ಟಿ, ಡಾ. ಗುರುತೇಜ್, ಡಾ. ಫ್ರಾನ್ಸಿಸ್ಕಾ ತೇಜ್, ದೀಪಕ್ ಬೊಲೂರ್ ಮತ್ತು ಪೀಟರ್ ಪಿಂಟೊ ಅವರು ನಿರ್ವಹಿಸಲಿದ್ದಾರೆ.

ಈ ವೇದಿಕೆಯು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಿಗಿಂತ ಹೆಚ್ಚಿನ ಸ್ಥಾನದೊಂದಿಗೆ ಅವರ ಶೈಕ್ಷಣಿಕ ಮತ್ತು ವೃತ್ತಿಪರ ಜೀವನವನ್ನು ರೂಪಿಸುವ ಬಗ್ಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕಾರಿಯಾಗಲಿವೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ವಿಶ್ಡಂ ಸಂಸ್ಥೆಯ ಪ್ರಮುಖರಾದ ಅಭಿಲಾಷ್ ಕ್ಷತ್ರಿಯ, ಅರುಣ್ ಕುಮಾರ್, ಕೌಶಿಕ್ ಗೌಡ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here