
ಭಾರತ ಕೃಷಿ ಪ್ರಧಾನ ದೇಶ. ಇಲ್ಲಿ ರೈತರ ಸಂಖ್ಯೆ ಬಹಳಷ್ಟು ಹೆಚ್ಚಳವಾಗಿದೆ. ಅದೇ ರೀತಿ ಇಲ್ಲಿ ಕೃಷಿ ಮಾಡಿ ಬದುಕು ಕಟ್ಟಿಕೊಂಡವರು ಹೆಚ್ಚು ಮಂದಿ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಬೆಳೆಯಾದ ಅಡಿಕೆಗೆ ಬೇಡಿಕೆ ಪ್ರಮಾಣ ಹೆಚ್ಚಾಗಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಅಡಿಕೆಯನ್ನು ಬೆಳೆಯುವುದಕ್ಕೆ ಮುಂದಾಗುತ್ತಿದ್ದಾರೆ. ಅದರಲ್ಲೂ ಕರಾವಳಿ ಮಲೆನಾಡು ಭಾಗದಲ್ಲಿ ಅಡಿಕೆ ಕೃಷಿ ಹೆಚ್ಚು ಫೇಮಸ್ಸು. ಹೆಚ್ಚಿನ ರೈತರಿಗೆ ಅಡಿಕೆ ಲಾಭದಾಯಕ ಕೃಷಿಯಾಗಿದ್ದು ಇದನ್ನು ಸರಿಯಾಗಿ ನಿರ್ವಹಣೆ ಮಾಡಿದ್ರೆ ಹೆಚ್ಚಿನ ಲಾಭ ಗಳಿಕೆ ಮಾಡಲು ಸಹ ಸಾಧ್ಯವಿದೆ.
ಅಡಿಕೆ ಕೃಷಿಯಲ್ಲಿ ಹೆಚ್ಚಿನ ಫಸಲು
ಅಡಿಕೆ ಕೃಷಿಯಲ್ಲಿ ಹೆಚ್ಚಿನ ಫಸಲು ಪಡೆಯಲು ಸಾಧ್ಯ ಮೊದಲಿಗೆ ನೀವು ಸಸಿಗಳನ್ನು ಆಯ್ಕೆ ಮಾಡಿಕೊಂಡು ಯಾವ ಜಾಗ ಉತ್ತಮ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಹೊಂದಾಣಿಕೆ ಆಗುವ ಪ್ರದೇಶದಲ್ಲಿ ಅಡಿಕೆ ಗಿಡ ನೆಟ್ಟು ಅದರ ಜೊತೆಗೆ ನೀವು ಔಷಧ ಸಿಂಪಡಣೆ ಮಾಡುವುದಾದರೆ ಕೃಷಿ ಪರಿಣಿತರ ಅಭಿಪ್ರಾಯವೂ ಮುಖ್ಯ ವಾಗುತ್ತದೆ.
ಸೂಕ್ತ ಸ್ಥಳ ಆಯ್ಕೆ ಮಾಡಿ
ನೀರು ಸಮತಟ್ಟಾಗಿರುವ ಪ್ರದೇಶದಲ್ಲಿ ಅಡಿಕೆ ಕೃಷಿ ಮಾಡಿದರೆ ಕಡಿಮೆ ಹಣ ವ್ಯಯಿಸಿ ಅಂದರೆ ಐವತ್ತು ಸಾವಿರ ವೆಚ್ಚದಲ್ಲಿ 500 ಗಿಡಗಳನ್ನು ಸುಲಭವಾಗಿ ಬೆಳೆಸಿ ಲಾಭ ಕೂಡ ಗಳಿಕೆ ಮಾಡಬಹುದಾಗಿದೆ. ಇನ್ನೂ ಅಡಿಕೆ ತೋಟದಲ್ಲಿ ನೀವು ಕನಿಷ್ಠ ಬೇರೆ ಎರಡು ಬೆಳೆಗಳನ್ನು ಬೆಳೆದರೆ ಲಾಭದಾಯಕ. ಅಡಿಕೆಯೊಂದಿಗೆ ಇತರ ಕೃಷಿಗಳ ಲಾಭವನ್ನೂ ನೀವು ಪಡೆಯಬಹುದು.
ಗಿಡಗಳ ಪೋಷಣೆ ಮಾಡಿ
ಬೇಸಿಗೆ ಸಂಧರ್ಭದಲ್ಲಿ ಅಡಿಕೆ ಸಸಿಗಳಿಗೆ ಒಣಗಿದ ಬಾಳೆ ಎಲೆ ಅಥವಾ ಬಾಳೆ ನಾರುಗಳನ್ನು ಬಿಸಿಲು ತಾಗದಂತೆ ಅಡ್ಡ ಇಡಬಹುದು. ಇದರ ಜೊತೆ ಅಡಿಕೆ ಗರಿಗಳನ್ನು ಬಳಸಿ ಕೂಡ ಕಾಂಡಗಳಿಗೆ ರಕ್ಷಣೆ ನೀಡಿ, ಗಿಡಗಳ ಪೋಷಣೆ ಮಾಡಬಹುದಾಗಿದೆ. ಅಡಿಕೆ ಸಸಿಗಳಿಗೆ ಯಾವುದೇ ಕ್ರಿಮಿ ನಾಶಕಗಳನ್ನು ಬಳಸದೆ ರಸಾಯನಿಕ ಗೊಬ್ಬರ ಬಳಸದೇ ಹಸು ಗೊಬ್ಬರ, ಕುರಿ ಮೇಕೆ ಗೊಬ್ಬರ ಹಾಗೂ ಕೆಲ ಸಸಿಗಳನ್ನು ಕೊಳೆಸಿ ಗೊಬ್ಬರ ತಯಾರಿಸಿ ಗಿಡಗಳಿಗೆ ಹಾಕಿದ್ರೆ ಉತ್ತಮ ಫಸಲು ಬರಲು ಸಾದ್ಯ.
ನೀರಿನ ಪೂರೈಕೆ ಅಗತ್ಯ
ಅಡಿಕೆ ಸಸಿಗಳು ನೀರನ್ನು ಹೆಚ್ಚು ಹೀರಿಕೊಳ್ಳುತ್ತವೆ. ನೀರಿಲ್ಲದಿದ್ದರೆ ಹೆಚ್ಚು ದಿನಗಳ ಕಾಲ ಇವುಗಳು ಬದುಕುವುದಿಲ್ಲ. ಇನ್ನೂ ಸಸಿಗಳನ್ನು ನೆಡುವಾಗ ಅಂತರ ಕಡಿಮೆ ಇದ್ದಾಗ ಸಸಿಗಳಿಗೆ ನೆರಳು ಸಿಗುತ್ತದೆ.ಸಸಿಗಳನ್ನು ಆರಾರು ಅಡಿ ಅಂತರದಲ್ಲಿ ನಾಟಿ ಮಾಡಿದ್ರೆ ಉತ್ತಮ.
