Home ಸರಕಾರಿ ಯೋಜನೆಗಳು ರಾಜ್ಯ ಸರಕಾರ ರೈತರಿಗೆ ಗುಡ್ ನ್ಯೂಸ್, ಕೃಷಿ ಭಾಗ್ಯ ಯೋಜನೆಗೆ ಮತ್ತೆ ಮರುಚಾಲನೆ

ರೈತರಿಗೆ ಗುಡ್ ನ್ಯೂಸ್, ಕೃಷಿ ಭಾಗ್ಯ ಯೋಜನೆಗೆ ಮತ್ತೆ ಮರುಚಾಲನೆ

0
ರೈತರಿಗೆ ಗುಡ್ ನ್ಯೂಸ್, ಕೃಷಿ ಭಾಗ್ಯ ಯೋಜನೆಗೆ ಮತ್ತೆ ಮರುಚಾಲನೆ

ಕರ್ನಾಟಕದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಕಾಂಗ್ರೆಸ್ ನ ಅನೇಕ ಯೋಜನೆಗಳು ಮೂಲೆ ಗುಂಪಾಗಿತ್ತು. ಆದರೆ ಮತ್ತೆ ಬಂದ ಕಾಂಗ್ರೆಸ್ ಸರಕಾರ ತನ್ನ ಹಳೆ ಸಿದ್ಧಾಂತ ನೀತಿ ನಿರೂಪಣೆಗಳಿಗೆ ಜೀವ ತುಂಬಿದೆ. ರಾಜ್ಯದ ರೈತರಿಗೆ ಅನುಕೂಲ ಆಗಲೆಂದು ಈ ಹಿಂದಿನಿಂದಲೂ ಸಹಾಯಧನ, ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ನೀಡಲಾಗುತ್ತಿದೆ. ಈಗ ಮತ್ತೆ ಈ ಪ್ರಕ್ರಿಯೆಗೆ ಜೀವ ತುಂಬಲಾಗುತ್ತಿದೆ.

ಯಾವುದು ಈ ಯೋಜನೆ
ಕೃಷಿಕರಿಗೆ ಉತ್ತಮ ಸೌಲಭ್ಯ ವ್ಯವಸ್ಥೆ ಕಲ್ಪಿಸುವ ನೆಲೆಯಲ್ಲಿ ರಾಜ್ಯಾದ್ಯಂತ ಕೃಷಿ ಭಾಗ್ಯ ಯೋಜನೆಯನ್ನು ಅಭಿವೃದ್ಧಿ ಪೂರ್ವಕವಾಗಿ ಮರು ಜಾರಿಗೆ ತರಲು ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಮುಂದಾಗಿದ್ದು ಈ ಬಗ್ಗೆ ಸರಕಾರದ ಮೂಲಕ ಮಹತ್ವದ ತೀರ್ಮಾನ ಕೈಗೊಳ್ಳಲಾಗುತ್ತಿದೆ. ಕೃಷಿ ಭಾಗ್ಯ ಯೋಜನೆಯನ್ನು ರೈತರ ನೆರವಿಗಾಗಿ ಮತ್ತೆ ಪುನಃ ಜಾರಿಗೆ ತರಲಾಗುವುದು ಎಂದು ಸಿಎಂ ಅವರೇ ತಿಳಿಸಿದ್ದಾರೆ‌.

ಸಿಎಂ ಅವರಿಂದ ಸ್ಪಷ್ಟನೆ
ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ನಾಡಿನ ರೈತರಿಗೆ ಸಾಕಷ್ಟು ಸಮಸ್ಯೆಗಳಾಗಿದ್ದು ಸರಕಾರದ ಗಮನಕ್ಕೆ ಬಂದಿದೆ. ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಮಳೆ ಕೊರತೆ ಎದುರಿಸುತ್ತಿರುವ ರೈತರಿಗೆ ಈಗ ನೀರಿನ ಸಮಸ್ಯೆ ಇದೆ. 100 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ 106 ತಾಲೂಕಿನಲ್ಲಿ ಶೀಘ್ರವೇ ಮರು ಜಾರಿ ತರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಯಾವೆಲ್ಲ ಸೌಲಭ್ಯ ಇದರಲ್ಲಿ ನಿಮಗೆ ಸಿಗಲಿದೆ
ಈ ಒಂದು ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಕೃಷಿ ಹೊಂಡ, ಲಘು ನೀರಾವರಿ ಘಟಕ, ತಂತಿ ಬೇಲಿ ಅಳವಡಿಕೆ, ಪಾಲಿಥೀನ್ ಹೊದಿಕೆ, ಡಿಸೆಲ್ ಪಂಪ್ ಸೆಟ್ , ಸೋಲಾರ್ ಪಂಪ್ ಸೆಟ್, ಕೃಷಿ ಬದು ನಿರ್ಮಾಣ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳನ್ನು ಸರಕಾರದ ಮುಖೇನ ಮಾಡಿಕೊಡಲಾಗುವುದು. ಕೃಷಿ ಭಾಗ್ಯ ಯೋಜನೆಯ ಪರಿಕಲ್ಪನೆಯೂ ಪ್ಯಾಕೇಜ್ ಮಾದರಿ ಜಾರಿಗೆ ತರಲು ಕಾರ್ಯ ಯೋಜನೆ ರೂಪಿಸಲಾಗುತ್ತಿದೆ.

ಈ ಒಂದು ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ರೈತರಿಗೆ ನೆರವಾಗಲು ಅರ್ಜಿ ಆಹ್ವಾನಿಸಲಾಗುತ್ತಿದ್ದು ಅಧಿಕ ಅರ್ಜಿ ಕಂಡು ಬಂದ ಸಂದರ್ಭದಲ್ಲಿ ಅರ್ಜಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ಚಾಲ್ತಿಗೆ ಬರಲಿದೆ. ಸದ್ಯ ರೈತರಿಗೆ ಕೃಷಿ ಹೊಂಡ ನಿರ್ಮಾಕ್ಕೆ ಆಧಿಕ ಆದ್ಯತೆ ನೀಡುತ್ತಿದ್ದು ರಕ್ಷಣಾತ್ಮಕ ನೀರಾವರಿ ಒದಗಿಸುವುದು ಕೃಷಿ ಭಾಗ್ಯ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ. ಆಸಕ್ತರು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಿಎಂ ಅವರು ಮಾಧ್ಯಮಗಳ ಮುಂದೆ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here