Home ಕರ್ನಾಟಕ ಕರಾವಳಿ ನಾಳೆಯಿಂದ ಮಂಗಳೂರು – ಗೋವಾ ವಂದೇ ಭಾರತ್ ರೈಲು ಸಂಚಾರ ಆರಂಭ

ನಾಳೆಯಿಂದ ಮಂಗಳೂರು – ಗೋವಾ ವಂದೇ ಭಾರತ್ ರೈಲು ಸಂಚಾರ ಆರಂಭ

0

ಮಂಗಳೂರು : ಮಂಗಳೂರು ಹಾಗೂ ಗೋವಾದ ಮಡಗಾಂವ್ ಮಧ್ಯೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ ಸೇರಿದಂತೆ 6 ವಂದೇ ಭಾರತ್ ರೈಲುಗಳಿಗೆ ಡಿಸೆಂಬರ್ 30ರಂದು ಶನಿವಾರ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.

ಭಾರತ್‌ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಈಗಾಗಲೇ ನಡೆದಿದ್ದು, ಯಶಸ್ವಿಯಾಗಿದೆ. ರೈಲಿನ ಆರಂಭಿಕ ಸಂಚಾರಕ್ಕೆ ದಕ್ಷಿಣ ರೈಲ್ವೆ ವಲಯವು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು – ಮಡಗಾಂವ್ ನಡುವೆ ಉಡುಪಿ ಮತ್ತು ಕಾರವಾರದಲ್ಲಿ ಮಾತ್ರ ಎರಡು ನಿಲುಗಡೆಗಳು ಇರುತ್ತದೆ. ಇದು ಕರ್ನಾಟಕಕ್ಕೆ ನಾಲ್ಕನೇ ವಂದೇ ಭಾರತ್‌ ಟ್ರೈನ್. ದೆಹಲಿಯಿಂದ ಕತ್ರಾ, ದೆಹಲಿಯಿಂದ ಲಕ್ಕೋ ಮೂಲಕ ಅಯೋಧ್ಯೆ ದಿಲ್ಲಿಯಿಂದ ಚಂಡೀಗಢ, ಬೆಂಗಳೂರು ಕೊಯಮತ್ತೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗಳಿಗೂ ಡಿ. 30ರಂದು ಚಾಲನೆ ದೊರೆಯಲಿದೆ ಎಂದು ಮಾಹಿತಿ ಲಭಿಸಿದೆ.

 

LEAVE A REPLY

Please enter your comment!
Please enter your name here