Home ಸರಕಾರಿ ಯೋಜನೆಗಳು ಕೇಂದ್ರ ಸರಕಾರ ಕೇಂದ್ರ ಸರಕಾರದ ಪಿಎಂ ಸುರಕ್ಷಾ ಯೋಜನೆ ಬಗ್ಗೆ ನೀವು ತಿಳಿಯಲೇಬೇಕು

ಕೇಂದ್ರ ಸರಕಾರದ ಪಿಎಂ ಸುರಕ್ಷಾ ಯೋಜನೆ ಬಗ್ಗೆ ನೀವು ತಿಳಿಯಲೇಬೇಕು

0
ಕೇಂದ್ರ ಸರಕಾರದ ಪಿಎಂ ಸುರಕ್ಷಾ ಯೋಜನೆ ಬಗ್ಗೆ ನೀವು ತಿಳಿಯಲೇಬೇಕು

ಜನರ ಅನುಕೂಲಕ್ಕಾಗಿ ಜನರ ಅಗತ್ಯತೆಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಹಲವಷ್ಟು ಯೋಜನೆಗಳನ್ನು ರೂಪಿಸುತ್ತಾ ಬಂದಿದೆ. ‌ರಾಜ್ಯದಲ್ಲಿ ಈಗಾಗಲೇ ರಾಜ್ಯ ಸರಕಾರ ಗ್ಯಾರಂಟಿ ಯೋಜನೆಯ ಮೂಲಕ ಪ್ರಚಲಿತದಲ್ಲಿದ್ದು ಈಗ ಕೇಂದ್ರ ಸರಕಾರವು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಹಾಗಿದ್ರೆ ಯಾವುದು ಈ ಯೋಜನೆ? ಯಾರಿಗೆ ನೆರವು ನೀಡಲಿದೆ ಎನ್ನುವ ಮಾಹಿತಿ ಇಲ್ಲಿದೆ.

ಪಿಎಂ ಸುರಕ್ಷಾ ಯೋಜನೆ
ಇದೀಗ ಕೇಂದ್ರ ಸರಕಾರವು ಪಿಎಂ ಸುರಕ್ಷಾ ಯೋಜನೆಯನ್ನು ಜಾರಿಗೆ ತಂದಿದ್ದು ಮದ್ಯಮ ವರ್ಗದ ಜನತೆಗೆ ಇದು ಬಹಳಷ್ಟು ನೆರವಾಗಲಿದೆ. ಇದರಿಂದ ಬಹಳಷ್ಟು ಜನರಿಗೆ ಆರ್ಥಿಕ ನೆರವು ಸಿಕ್ಕಂತಾಗಿದೆ.

ಸಾಲ ಸೌಲಭ್ಯ
ಇದು ಮದ್ಯಮ ವರ್ಗದ ‌ಜನರು ಸಣ್ಣ ಉದ್ಯಮ ನಡೆಸುದಾದರೆ ಇದರಿಂದ ನೆರವು ಸಿಗಲಿದೆ ಹಳ್ಳಿಗಳಲ್ಲಿ ವ್ಯಾಪಾರ ಮಾಡುವವರಿಗೆ ಕೇಂದ್ರ ಸರಕಾರದಿಂದ ಕಡಿಮೆ ಬಡ್ಡಿ ದರದ ಮೂಲಕ ಸಾಲ ಸೌಲಭ್ಯ ನೀಡುತ್ತದೆ.‌ ಹೌದು ಬಡ ವರ್ಗದ ಜನರು SBI ಬ್ಯಾಂಕ್ ಮೂಲಕ‌ ಅರ್ಜಿ ಸಲ್ಲಿಸಿ ಈ‌ ಯೋಜನೆ ಪಡೆಯಬಹುದು. ಪಿಎಂ ಸುರಕ್ಷಾ ಯೋಜನೆಯು 290ಕ್ಕೂ ಅಧಿಕ ಪ್ರದೇಶದಲ್ಲಿ ನಗರ ಮತ್ತು ಹಳ್ಳಿಗಳಲ್ಲಿ ಆರಂಭ ವಾಗಲಿದ್ದು ಸಣ್ಣ ಉದ್ದಿಮೆ ವ್ಯಾಪಾರ ನಡೆಸುವವರಿಗೆ ನೆರವಾಗಲಿದೆ. ಕಬ್ಬಿಣದ ಕೆಲಸ, ಚಪ್ಪಲಿ ರಿಪೇರಿ, ಸಣ್ಣ ಅಂಗಡಿ, ಸಣ್ಣ ಪುಟ್ಟ ವ್ಯಾಪಾರಿ ಉದ್ಯಮಕ್ಕೆ ಇದು ಸಹಾಯಕವಾಗಲಿದೆ.

ಅರ್ಜಿ ಸಲ್ಲಿಸಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದ್ದು ಎಸ್ ಬಿ ಬ್ಯಾಂಕ್ ನಲ್ಲಿ ಈ ಯೋಜನೆಯ ಸಾಲ ಸೌಲಭ್ಯ ಪಡೆಯಬಹುದು‌‌.‌ ಇದಕ್ಕಾಗಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ವೋಟರ್ ಐಡಿ, ಫೋಟೋ ಇತ್ಯಾದಿ ಅನೇಕ ದಾಖಲಾತಿ ಅಗತ್ಯ ಬೇಕು. ಇದು ಹಂತ ಹಂತವಾಗಿ ಹಣ ದೊರೆಯಲಿದ್ದು ಮೊದಲ ಹಂತದಲ್ಲಿ 10 ಸಾವಿರ, ಎರಡನೇ ಸಾರಿ ಇಪ್ಪತ್ತು ಸಾವಿರ ಹಾಗೂ ಮೂರನೇ ಹಂತದಲ್ಲಿ 50ಸಾವಿರ ಸಾಲ ಸೌಲಭ್ಯ ದೊರಕಲಿದೆ.

ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ
ಈ ಯೋಜನೆಯು ಬಡವರ್ಗದ ಜನರಿಗೆ ನೇರವಾಗಲಿದೆ.‌ PMSBY ಯೋಜನೆಯ ಮೂಲಕ ಅಪಘಾತದ ಸಮಯದಲ್ಲಿ 2 ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ನೀಡಲಿದೆ. ಈ ಯೋಜನೆಯು 18 ರಿಂದ 70 ವರ್ಷ ವಯಸ್ಸಿನ ಜನರಿಗೆ ಲಭ್ಯವಿದೆ. ಮತ್ತೊಂದೆಡೆ, ವಿಕಲಚೇತನರಿಗೂ 1 ಲಕ್ಷ ರೂಪಾಯಿ ಸಹಾಯವನ್ನು ನೀಡಲಾಗುತ್ತದೆ. ಇನ್ನು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ ಸೇರುವವರು ವರ್ಷಕ್ಕೆ 20 ಪ್ರೀಮಿಯಂ ಪಾವತಿ ಮಾಡುವ ಮೂಲಕ ಈ ಸೌಲಭ್ಯ ಪಡೆಯಬಹುದು.

 

LEAVE A REPLY

Please enter your comment!
Please enter your name here