Home ಸರಕಾರಿ ಯೋಜನೆಗಳು ಕೇಂದ್ರ ಸರಕಾರ ಜನವರಿ 1 ರಿಂದ ಗ್ಯಾಸ್ ಖರೀದಿ ಮತ್ತಷ್ಟು ಸುಲಭ, 450 ರೂ.ಗೆ ಇನ್ಮುಂದೆ ಲಭ್ಯ

ಜನವರಿ 1 ರಿಂದ ಗ್ಯಾಸ್ ಖರೀದಿ ಮತ್ತಷ್ಟು ಸುಲಭ, 450 ರೂ.ಗೆ ಇನ್ಮುಂದೆ ಲಭ್ಯ

0
ಜನವರಿ 1 ರಿಂದ  ಗ್ಯಾಸ್ ಖರೀದಿ ಮತ್ತಷ್ಟು ಸುಲಭ,  450 ರೂ.ಗೆ  ಇನ್ಮುಂದೆ ಲಭ್ಯ

ಹಿಂದಿನ ಕಾಲದಲ್ಲಿ ಸೌದೆ ಒಲೆ, ಕಲ್ಲಿದ್ದಲು ಇತ್ಯಾದಿ ಬಳಸಿ ಅಡುಗೆ ತಯಾರು ಮಾಡುತ್ತಿದ್ದರು. ಅದರೆ ಈಗ ಕಾಲ ಬದಲಾಗಿದೆ. ಅಡುಗೆ ಮಾಡುವ ಗ್ಯಾಸ್ ಇಂಧನ ಕೂಡ ಮೂಲಭೂತ ವಸ್ತುವಾಗಿದೆ. ಅದೇ ರೀತಿ‌ ಇಂದು ಮಹಿಳೆಯರಿಗೆ ಈ ಯೋಜನೆ ಸಹಾಯಕವಾಗಲಿ ಎಂದು ಈಗಾಗಲೇ ಕೇಂದ್ರ ಸರಕಾರವು ಉಜ್ವಲ ಯೋಜನೆಯನ್ನು ಆರಂಭ ಮಾಡಿದೆ. ಅದೇ ರೀತಿ ಇದೀಗ ಮುಂದಿನ ದಿನದಲ್ಲಿ ಗ್ಯಾಸ್ ಬೆಲೆಯು ಕಡಿಮೆಯಾಗಲಿದ್ದು ಬಳಕೆದಾರರಿಗೆ ಗುಡ್ ನ್ಯೂಸ್ ಸಿಕ್ಕಿದಂತಾಗಿದೆ.

450ರೂಗೆ ದೊರೆಯಲಿದೆ
ಹೌದು ಇನ್ಮುಂದೆ ರಾಜಸ್ಥಾನ ದಲ್ಲಿ ಫಲಾನುಭವಿಗಳಿಗೆ 450 ರೂ.ಗೆ ಎಲ್‌ಪಿಜಿ ಸಿಲಿಂಡರ್ ದೊರೆಯಲಿದೆ ಎಂದು ಅಲ್ಲಿನ ಮುಖ್ಯಮಂತ್ರಿ ತಿಳಿಸಿದ್ದಾರೆ. 2024ರ ಜನವರಿ 1ರಿಂದ ಈ ಸೌಲಭ್ಯ ಜಾರಿಗೆ ಬರಲಿದ್ದು‌ ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಈ ಬಗ್ಗೆ ಗುಡ್ ನ್ಯೂಸ್ ನೀಡಿದ್ದಾರೆ.‌

ಸಬ್ಸಿಡಿ ಹೆಚ್ಚಳ

ಈಗಾಗಲೇ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಲಾಭವನ್ನು ಮಹಿಳೆಯರು ಪಡೆಯುತ್ತಿದ್ದು ಈ ವಿಚಾರವು ಖುಷಿ ನೀಡಿದಂತಾಗಿದೆ. ಇಂದು ಫಲಾನುಭವಿಗಳು ವರ್ಷಕ್ಕೆ 12 ಸಿಲಿಂಡರ್‌ಗಳ ಮೇಲೆ ರೂ 300 ಸಬ್ಸಿಡಿ ಪಡೆಯುತ್ತಿದ್ದು ಮುಂದಿನ ದಿನದಲ್ಲಿ ಈ ಸಬ್ಸಿಡಿ ಹೆಚ್ಚಾಗುವ ಸಾಧ್ಯತೆ ಇದೆ. ಬಿಪಿಎಲ್‌ ಕುಟುಂಬಗಳ ಮಹಿಳಾ ಸದಸ್ಯರಿಗೆ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸುವುದು PMUYಯ ಮುಖ್ಯ ಗುರಿಯಾಗಿದ್ದು ಬಹಳಷ್ಟು ಮಹಿಳೆಯರು ಈ‌ ಯೋಜನೆಯ ಸದುಪಯೋಗ ಪಡೆದು ಕೊಂಡಿದ್ದಾರೆ.

ಉಜ್ವಲ ಯೋಜನೆ
ಉಜ್ವಲ ಯೋಜನೆ ಮೂಲಕ ಫಲಾನುಭವಿಗಳಿಗೆ ಮೊದಲ ಸಿಲಿಂಡರ್ ಅನ್ನು ಉಚಿತವಾಗಿ ನೀಡುವುದರೊಂದಿಗೆ, ಸ್ಟವ್, ರಿಫೇಲ್ ಅನ್ನು ಸಹ ಉಚಿತವಾಗಿ ನೀಡಲಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುದಾದರೆ ಆನ್‌ಲೈನ್‌ನಲ್ಲಿಯು ಸಲ್ಲಿಸಬಹುದಾಗಿದ್ದು pmujjwalayojana.com ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಈ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಹಾಗೂ ಸಿಲಿಂಡರ್ ಪಡೆಯಲು ಮಹಿಳೆಯರು ಮಾತ್ರ ಅರ್ಹರಾಗಿದ್ದಾರೆ.

Photo credit- twitter

 

LEAVE A REPLY

Please enter your comment!
Please enter your name here