
ಅಯೋಧ್ಯೆಯಲ್ಲಿ ಈಗ ಸಂಭ್ರಮದ ವಾತಾವರಣ, ಹೌದು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಗರ್ಭಗುಡಿಯಲ್ಲಿ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲು ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಈ ದಿನಕ್ಕಾಗಿ ಕಾಯುತ್ತಿದ್ದ ಹಿಂದುಗಳ ಮನದಲ್ಲಿ ಖುಷಿಯ ಹರ್ಷಾದ್ಗೊರ, ಹೌದು ವಿಶ್ವದೆಲ್ಲೆಡೆಯ ಹಿಂದೂಗಳಿಗೆ ಜನವರಿ 22 ಅತ್ಯಂತ ಖುಷಿಯ ದಿನ. ಶತಮಾನಗಳ ಸಮಯ ಕಾದು ಕುಳಿತಿದ್ದ ಮಹತ್ವದ ಕಾರ್ಯಕ್ರಮವೊಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆಯಲಿದ್ದು ಈ ಬಗ್ಗೆ ಪ್ರಧಾನಿ ಮನವಿಯ ಕರೆ ಕೊಟ್ಟಿದ್ದಾರೆ.
ಶಿಲಾನ್ಯಾಸ ನಿರ್ಮಾಣ
ಅಯೋಧ್ಯೆ ವಿವಾದದ ಬಗ್ಗೆ ಸುಪ್ರೀಂಕೋರ್ಟ್ 2019ರ ನವೆಂಬರ್ 9ರಂದು ತೀರ್ಪು ಪ್ರಟಿಸಿದ ನಂತರ ರಾಮಮಂದಿರ ನಿರ್ಮಾಣಕ್ಕೆ ಬಂದತಂಹ ಕಾನೂನಾತ್ಮಕ ತೊಡಕು ನಿವಾರಣೆಯಾಗಿ ತದನಂತರ 2020ರ ಆ. 5ರಂದು ಪ್ರಧಾನಿ ಮೋದಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಿರ್ಮಾಣ ಮಾಡಿದ್ದರು.
ಮನವಿ ಮಾಡಿದ್ದಾರೆ
ರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹ ಸ್ಥಾಪಿಸುವ ಜನವರಿ 22ರಂದು ನಿಮ್ಮ ಮನೆಗಳಲ್ಲಿ, ನೀವು ನೆಲೆಸಿರುವ ಪ್ರತಿ ಜಾಗದಲ್ಲಿ ಶ್ರೀರಾಮ ಜ್ಯೋತಿ ಯನ್ನು ಬೆಳಗಿಸುವ ಮೂಲಕ ಸಂಭ್ರಮಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡುವ ಮೂಲಕ ಕರೆ ಕೊಟ್ಟಿದ್ದಾರೆ.
ಸ್ವಚ್ಚತಾ ಆಂದೋಲನ
ಜನವರಿ 14 ರಿಂದ ಮಂದಿರದ ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿದ್ದು ಅಂದಿನಿಂದ ಯಾತ್ರಾ ಸ್ಥಳಗಳು, ದೇವಸ್ಥಾನಗಳನ್ನು ಸ್ವಚ್ಛತೆ ಮಾಡುವ ಆಂದೋಲನವನ್ನು ಪ್ರಾರಂಭಿಸಿ, ತಮ್ಮ ಹರ್ಷವನ್ನು ಮತ್ತಷ್ಟು ಹೆಚ್ಚಿಸಿ, ಅಂದು ನಡೆಯುವ ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರದೇ ಇದ್ದ ಸ್ಥಳದಲ್ಲೆ ರಾಮನ ಆರಾಧನೆ ಮಾಡಿ, ಹೆಚ್ಚಿನ ಜನದಟ್ಟಣೆ ಉಂಟಾಗಿ, ಭದ್ರತಾ ಸಮಸ್ಯೆ ಎದುರಾಗುತ್ತದೆ ಎಂದು ಮನವಿ ಸಲ್ಲಿಸಿದರು.
ಬ್ರಹ್ಮ ಕಲಶೋತ್ಸವ
ಮೂರ್ತಿ ಪ್ರತಿಷ್ಠಾಪನೆ ಆದ ಬೆನ್ನಲ್ಲೇ ಬ್ರಹ್ಮ ಕಲಶೋತ್ಸವ ಕೂಡಾ ನಡೆಯಲಿದ್ದು ಜನವರಿ 22 ರಿಂದ ಮಾರ್ಚ್ 10ರವರೆಗೆ 48 ದಿನಗಳ ಕಾಲ ಬ್ರಹ್ಮ ಕಲಶೋತ್ಸವ ನಡೆಯಲಿದೆ.
ಒಟ್ಟಿನಲ್ಲಿ ಜನವರಿ 22 ರಂದು ದೇಶದ 140 ಕೋಟಿ ಜನರು ಆ ದಿನ ಶ್ರೀರಾಮನ ದಿವ್ಯಜ್ಯೋತಿಯ ಬೆಳಕು ಮನೆಮನಗಳಲ್ಲಿ ಪೂಜಿಸಿ ನೀವಿದ್ದ ದೇವಾಲಯಗಳಲ್ಲೇ ಆರಾಧನೆ ಮಾಡಿ ಎಂದು ಮನವಿ ಮಾಡಿದರು.
