
ಹಿರಿಯ ನಾಗರಿಕರಿಗೆ ಭವಿಷ್ಯದ ಮುಂದಿನ ದಿನದಲ್ಲಿ ಸಹಾಯಕವಾಗಲೆಂದು ಸರಕಾರದ ಇಲಾಖೆಯಡಿ ವಿವಿಧ ಸೌಲಭ್ಯಗಳನ್ನು ಈಗಾಗಲೇ ನೀಡಲಾಗುತ್ತಿದ್ದು ಪಿಂಚಣಿ ಯೋಜನೆಯನ್ನು ಸಹ ಆರಂಭ ಮಾಡಲಾಗಿದೆ. ಅದೇ ರೀತಿ ಆರ್ಥಿಕವಾಗಿ ದುರ್ಬಲವಾಗಿರುವ ಜನರಿಗೆ ವಿವಿಧ ರೀತಿಯ ಸೌಲಭ್ಯ ಒದಗಿಸಲೆಂದೇ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದ್ದು ಈ ಯೋಜನೆಯಲ್ಲಿ ರಾಷ್ಟ್ರೀಯ ವಯೋಶ್ರೀ ಯೋಜನೆ ಕೂಡ ಒಂದಾಗಿದ್ದು 2017 ರಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದೆ. ದೇಶದ ಹಿರಿಯ ನಾಗರಿಕರು ಈ ಯೋಜನೆಯ ಸವಲತ್ತು ಪಡೆಯಬಹುದಾಗಿದ್ದು ಇದುವರೆಗೆ ಹಲವಷ್ಟು ಹಿರಿಯ ನಾಗರಿಕರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
ಯಾರು ಪಡೆಯಬಹುದು?
ಕೇಂದ್ರ ಸರ್ಕಾರವು ವಯೋಶ್ರೀ ಯೋಜನೆ ಯನ್ನ ಹಿರಿಯ ನಾಗರಿಕರಿಗೆ ಜಾರಿಗೆ ತರಲಾಗಿದ್ದು ಅವರ ಭವಿಷ್ಯದ ಒಳಿತಿಗಾಗಿ ಈ ಯೋಜನೆ ರೂಪಿಸಿದೆ. ಹಿರಿಯ ಪುರುಷರು ಮತ್ತು ಹಿರಿಯ ಮಹಿಳೆಯರಿಗೆ ಸರ್ಕಾರಿ ಯೋಜನೆಯಡಿಯ ಮೂಲಕ ಇದರ ಸೌಲಭ್ಯ ಪಡೆಯ ಬಹುದಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರು ಗಾಲಿಕುರ್ಚಿ ಇನ್ನಿತರ ಸಹಾಯಕ ಉಪಕರಣಗಳನ್ನು ಉಚಿತವಾಗಿ ಪಡೆಯಬಹುದು.
ನೊಂದಣಿ ಮಾಡಿ
ಈ ಯೋಜನೆಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್ https://www.alimco.in/ ಗೆ ಭೇಟಿ ನೀಡಿ ಅಲ್ಲಿ ವಯೋಶ್ರೀ ನೋಂದಣಿ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ನೋಂದಣಿ ಮಾಡಿ ಅಗತ್ಯ ಮಾಹಿತಿಯನ್ನು ಸಲ್ಲಿಸಿ. ಈ ಯೋಜನೆಯ ಮೂಲಕ ಹಿರಿಯ ನಾಗರಿಕರು ಅಂಗವೈಕಲ್ಯ ಮತ್ತು ದೌರ್ಬಲ್ಯದಿಂದ ಇದ್ದರೆ ಅಂಗವೈಕಲ್ಯ ಅಥವಾ ದೌರ್ಬಲ್ಯಕ್ಕೆ ಅನುಗುಣವಾಗಿ ವಿವಿಧ ಸಾಧನಗಳನ್ನು ಉಚಿತವಾಗಿ ಪಡೆಯಲು ಅವಕಾಶ ಇದ್ದು ಅರ್ಜಿ ಸಲ್ಲಿಸಬಹುದಾಗಿದೆ.
ಈ ದಾಖಲಾತಿ ಅಗತ್ಯ
ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುದಾದ್ರೆ ಅರ್ಜಿದಾರರ ಹಿರಿಯ ನಾಗರಿಕರ ಆಧಾರ್ ಕಾರ್ಡ್
ಬ್ಯಾಂಕ್ ಖಾತೆ ಪುಸ್ತಕ, ರೇಷನ್ ಕಾರ್ಡ್, ಪೋಟೋ, ಆದಾಯ ಪ್ರಮಾಣ ಪತ್ರ ಇತ್ಯಾದಿ ದಾಖಲೆ ಬೇಕು.
ಅರ್ಹತೆ ಏನು?
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇದೆ.ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿದ ಹಿರಿಯರು ಈ ಯೋಜನೆ ಪಡೆಯಬಹುದು. ಹಿರಿಯ ನಾಗರಿಕರು ಕರ್ನಾಟಕದ ನಿವಾಸಿಯಾಗಿದ್ದರೆ ಅರ್ಜಿ ಸಲ್ಲಿಸಬಹುದು.
